ಸಾರಾಂಶ
ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಮುಖಾಂತರ ಒದಗಿಸುವ ಕಂಪನಿ ಮತ್ತು ಸಂಸ್ಥೆಗಳು ಸೇರಿ ‘ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘ’ ಸ್ಥಾಪಿಸಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಮುಖಾಂತರ ಒದಗಿಸುವ ಕಂಪನಿ ಮತ್ತು ಸಂಸ್ಥೆಗಳು ಸೇರಿ ‘ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘ’ ಸ್ಥಾಪಿಸಿವೆ.ನೂತನ ಸಂಘದ ಮೊದಲ ಅಧ್ಯಕ್ಷರಾಗಿ ಮಂಡ್ಯ ಮೂಲದ ಬೆಂಗಳೂರಿನ ಮಹಾಲಿಂಗಪ್ಪ (ಮಹಾಲಿಂಗೇಗೌಡ ಮುದ್ದನಘಟ್ಟ) ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ಸುರೇಶ್. ಕೆ.ಬಾಳೆಗುಂಡಿ, ಎಂ.ನಾಗರಾಜು ಉಪಾಧ್ಯಕ್ಷರಾಗಿದ್ದಾರೆ. ರಾಘವೇಂದ್ರ ರೆಡ್ಡಿಯನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ರಾಜ್ಯ, ಕೇಂದ್ರ ಸರ್ಕಾರ, ಸಾರ್ವಜನಿಕ, ಅರೆ ಸಾರ್ವಜನಿಕ, ಐಟಿ-ಬಿಟಿ, ಬಹುರಾಷ್ಟ್ರೀಯ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಒಳಗೊಂಡಂತೆ ಖಾಸಗಿ ವಲಯದ ಎಲ್ಲ ಉದ್ಯಮಗಳಿಗೆ ಎಲ್ಲ ವೃಂದದ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಮೂಲಕ ಒದಗಿಸುತ್ತಿರುವ ಕಂಪನಿಗಳು, ಸಂಸ್ಥೆಗಳು ಈ ಸಂಘದಲ್ಲಿ ಸದಸ್ಯತ್ವ ಹೊಂದಲಿವೆ. ಉದ್ಯಮದ ಬೆಳವಣಿಗೆ, ಅಭಿವೃದ್ಧಿ, ಹಿತಾಸಕ್ತಿ ಈಡೇರಿಸಿಕೊಳ್ಳುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ ಎಂದು ಮಹಾಲಿಂಗಪ್ಪ ಹೇಳಿದ್ದಾರೆ.ಹೊರಗುತ್ತಿಗೆ ಕಂಪನಿಗಳು ಮಾನವ ಸಂಪನ್ಮೂಲ ಒದಗಿಸುವ ಮೂಲಕ ಲಕ್ಷಾಂತರ ಜನರಿಗೆ ನೇರ ಉದ್ಯೋಗ ಒದಗಿಸಿ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುತ್ತಿವೆ. ಸರ್ಕಾರದ ಕೆಲಸಗಳು ಸುಗಮವಾಗಿ ನಡೆಯಲು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿವೆ ಎಂದು ಮಹಾಲಿಂಗಪ್ಪ ತಿಳಿಸಿದ್ದಾರೆ.
=ಆಲ್ ಎಡಿಷನ್ ಡಿಸಿ ಕಡ್ಡಾಯ...