ಸಾರಾಂಶ
ಶಿಗ್ಗಾಂವಿ: ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವ ಪದ್ಧತಿಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ. ಇದು ಪಾಪಗಳನ್ನು ತೊಡೆದು, ಜ್ಞಾನ ಮತ್ತು ಮಂಗಳಕರ ಶಕ್ತಿಯನ್ನು ಆಕರ್ಷಿಸಲು ಸಂಕೇತಿಸುತ್ತದೆ ಎಂದು ಶ್ರೀ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಕೇದಾರಪ್ಪ ಭಗಾಡೆ ಹೇಳಿದರು.ಶಿಗ್ಗಾಂವಿ ಪಟ್ಟಣದ ನಾಮದೇವ ಸಿಂಪಿ ಸಮಾಜದ ವಿಠ್ಠಲ ಹರಿ ಮಂದಿರದಲ್ಲಿ ಸಮಾಜದ ಬಾಂಧವರು, ಗುರು ಹಿರಿಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರೊಂದಿಗೆ ಶ್ರೀ ಸಂತ ಜ್ಞಾನೇಶ್ವರಿ ಮಹಾರಾಜರ ಸಮಾಧಿ ದಿನ ಹಾಗೂ ಕಾರ್ತಿಕ ದೀಪೋತ್ಸವ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಅದೃಷ್ಟ್ಟ, ಆರೋಗ್ಯ ಸಮೃದ್ಧಿ, ಮತ್ತು ಸಂತೋಷವನ್ನು ತರುತ್ತದೆ, ಕಾರ್ತಿಕ ಮಾಸವು ಕಡಿಮೆ ಹಗಲು ಮತ್ತು ದೀರ್ಘ ರಾತ್ರಿಗಳನ್ನು ಹೊಂದಿರುವ ಕಾರಣ, ಅಂಧಕಾರವನ್ನು ಕಳೆಯಲು ಮತ್ತು ದೈವಿಕ ಬೆಳಕನ್ನು ಜಾಗೃತಗೊಳಿಸಲು ದೀಪ ಹಚ್ಚಲಾಗುತ್ತದೆ, ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಮತ್ತು ಶಿವನ ಆರಾಧನೆಯ ರೂಪವಾಗಿ ದೀಪಾರಾಧನೆ ಮಾಡಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕೃಷ್ಣಾ ಮೂಳೆ, ಏಕನಾಥ ಮಾಳವಾದೆ, ವಿನಾಯಕ ಗಂಜಿಗಟ್ಟಿ, ಮಂಜುನಾಥ್ ಗಂಜಿಗಟ್ಟಿ, ನಾರಾಯಣ ಬಗಾಡೆ, ಅಮಿತ ಗಂಜಿಗಟ್ಟಿ, ವೈಭವ್ ಗಂಜಿಗಟ್ಟಿ, ರಾಜು ಗೊಂದಕರ್, ತುಕಾರಾಮ ಅಂಚಲಕರ, ಮುರಳೀಧರ ಮಾಳವದೆ ಹಾಗೂ ಮಹಿಳಾ ಮಂಡಳದ ಅಧ್ಯಕ್ಷೆ ರೂಪಾ, ಅಶ್ವಿನಿ ಗಂಜಿಗಟ್ಟಿ, ಗೀತಾ ಬಗಾಡೆ, ರೇಣುಕಾ ಗಂಜಿಗಟ್ಟಿ, ಅನುರಾಧ ಗಂಜಿಗಟ್ಟಿ, ಕಸ್ತೂರಿಬಾಯಿ ಬಗಾಡೆ, ಕಾವ್ಯ ಬಗಾಡೆ, ಸವಿತಾ ಮೂಳೆ, ಶ್ರದ್ದಾ ಗಂಜಿಗಟ್ಟಿ, ವಿಜಯಲಕ್ಷ್ಮಿ ಮಾಳವಾದೆ, ಸರೋಜ ಗಂಜಿಗಟ್ಟಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.