ಮಾ. 7ರಿಂದ ಕರುನಾಡ ಪ್ರೀಮಿಯರ್‌ ಲೀಗ್‌: ಡಾ. ಲಿಂಗರಾಜ ಬಿಳೆಕಲ್

| Published : Feb 13 2024, 01:45 AM IST

ಸಾರಾಂಶ

ಪಂದ್ಯಾವಳಿಯಲ್ಲಿ ಪ್ರ್ಯಾಂಚೈಸಿ ಆಧಾರಿತ ಒಟ್ಟು 8 ತಂಡಗಳು ಕರ್ನಾಟಕದ ನಾನಾ ಭಾಗಗಳಿಂದ ಭಾಗವಹಿಸುತ್ತಿದ್ದು, ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹುಬ್ಬಳ್ಳಿ: ಆರ್.ಕೆ. ರಿಕ್ರಿಯೇಶನ್ ಆ್ಯಂಡ್ ಸ್ಪೋರ್ಟ್ಸ್ ಅಸೋಶಿಯೇಶನ್ ವತಿಯಿಂದ ಮಾರ್ಚ್ 7ರಿಂದ 10ರ ವರೆಗೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕರುನಾಡ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಶಿಯೇಶನ್ ನಿರ್ದೇಶಕ ಡಾ. ಲಿಂಗರಾಜ ಬಿಳೆಕಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಉಣಕಲ್ ಪ್ರೀಮಿಯರ್ ಲೀಗ್ ಹಮ್ಮಿಕೊಂಡು ಬರಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಕರ್ನಾಟಕದ ಪ್ರತಿಭಾವಂತ ಆಟಗಾರರನ್ನು ಬೆಳಕಿಗೆ ತರು ಸದುದ್ದೇಶದೊಂದಿಗೆ ಆರ್.ಕೆ. ಸ್ಪೋರ್ಟ್ಸ್ ಕ್ಲಬ್ ಹೊಸ ಪ್ರಯತ್ನ ಮಾಡುತ್ತಿದೆ ಎಂದರು.

ಈ ಪಂದ್ಯಾವಳಿಯಲ್ಲಿ ಪ್ರ್ಯಾಂಚೈಸಿ ಆಧಾರಿತ ಒಟ್ಟು 8 ತಂಡಗಳು ಕರ್ನಾಟಕದ ನಾನಾ ಭಾಗಗಳಿಂದ ಭಾಗವಹಿಸುತ್ತಿದ್ದು, ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಟಗಾರರು ಆನಲೈನ್ ಮೂಲಕ ತಮ್ಮ ಹೆಸರನ್ನು ಫೆ. 15 ರೊಳಗಾಗಿ ನೋಂದಾಯಿಸಬಹುದಾಗಿದೆ ಎಂದರು.

ಪ್ರತಿ ತಂಡಕ್ಕೆ 7 ಲೀಗ್ ಮ್ಯಾಚ್‌ಗಳು ಇರುತ್ತವೆ. ಮತ್ತು ಪ್ರತಿ ಪಂದ್ಯ 10 ಓವರ್‌ಗಳನ್ನು ಒಳಗೊಂಡಿರುತ್ತದೆ. ವಿಜೇತ ತಂಡಕ್ಕೆ ಪ್ರಥಮ ₹4 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹3.30 ಲಕ್ಷ ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಬೆಟಸೂರ, ನಾಗೇಶ ಚವ್ಹಾಣ, ಕಿರಣ ಪವಾರ, ರಂಗನಗೌಡ ಚಿಕ್ಕನಗೌಡ, ದೇವರಾಜ ಕೋಟಿ ಸೇರಿದಂತೆ ಹಲವರಿದ್ದರು.