ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಗೆ (ಕೆಎಂಸಿ ಕಟೀಲು) ಮೀನು ತಿಂದು ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿದ ಸುಮಾರು 26 ವರ್ಷದ ಕಿನ್ನಿಗೋಳಿಯ ಮಹಿಳೆ ಸಕಾಲಿಕ ಚಿಕಿತ್ಸೆಯಿಂದ ನಿರಾಳಗೊಂಡಿದ್ದಾರೆ.
ಮೂಲ್ಕಿ: ತುಳುನಾಡಿನ ಕರಾವಳಿಯ ಜನರಿಗೆ ಮೀನು, ಕೋಳಿ ಸಾರು ಅಂದರೆ ಬಹಳ ಇಷ್ಟ. ಇದನ್ನು ಅಜಾಗ್ರತೆಯಿಂದ ಸೇವಿಸಿ ಎಡವಟ್ಟು ಮಾಡಿಕೊಂಡು ಪಶ್ಚಾತಾಪ ಪಟ್ಟವರು ಇದ್ದಾರೆ. ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಗೆ (ಕೆಎಂಸಿ ಕಟೀಲು) ಮೀನು ತಿಂದು ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿದ ಸುಮಾರು 26 ವರ್ಷದ ಕಿನ್ನಿಗೋಳಿಯ ಮಹಿಳೆ ಸಕಾಲಿಕ ಚಿಕಿತ್ಸೆಯಿಂದ ನಿರಾಳಗೊಂಡಿದ್ದಾರೆ. ಅತ್ಯಾಧುನಿಕ ಉಪಕರಣದಿಂದ ಆಸ್ಪತ್ರೆಯ ಹಿರಿಯ ನುರಿತ ತಜ್ಞ ಡಾ.ಉನ್ನಿಕೃಷ್ಣ ನಾಯನಾರ್ ಎಲುಬು ತೆಗೆದಿದ್ದಾರೆ.ಗುರುವಾರ, ದೇವದ ಅಗೇಲು ಸಂದರ್ಭದಲ್ಲಿ ಹುಣ್ಸೆಕಟ್ಟೆ ನಿವಾಸಿ ಮಹಿಳೆ ಕೋಳಿ ಊಟ ಸೇವಿಸುವಾಗ ದೊಡ್ಡ ಗಾತ್ರದ ಮಾಂಸದೊಟ್ಟಿಗೆ ಎಲುಬನ್ನು ನುಂಗಿ ಎಲುಬು ಕುತ್ತಿಗೆಗಿಂತಲೂ ಕೆಳಗೆ ಜಾರಿ ಸಿಲುಕಿಕೊಂಡು ಸುಮಾರು 16 ಗಂಟೆ ಒದ್ದಾಡಿದರು. ಕೊನೆಗೆ ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಗೆ (ಕೆಎಂಸಿ ಕಟೀಲು ) ಬಂದು ತಜ್ಞ ಹಿರಿಯ ವೈದ್ಯ ಡಾ. ಉನ್ನಿಕೃಷ್ಣ ನಾಯನಾರ್ (ಇಎನ್ ಟಿ ) ಸಂದರ್ಶಿಸಿದಾಗ ಸ್ಕ್ಯಾನ್ ಮಾಡಿಸಲು ಸಲಹೆ ಕೊಟ್ಟರು.
ಆದರೆ ಸ್ಕ್ಯಾನ್ ಮಾಡಿಸಲು ಹಣದ ತೊಂದರೆ ಇದ್ದ ಕಾರಣ ಎಕ್ಸರೇ ಮಾಡಿಸಿ ಅತ್ಯಾಧುನಿಕ ಉಪಕರಣದಿಂದ ಕುತ್ತಿಗೆಗಿಂತಲೂ ಕೆಳಜಾರಿದ ಕೋಳಿ ಎಲುಬನ್ನು ಬಹಳ ಯಶಸ್ವಿಯಾಗಿ ಹೊರ ತೆಗೆದು ಜೀವ ಉಳಿಸಿದ್ದಾರೆ.ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಪ್ರಭು ಕಟೀಲು ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸಾ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಜನತೆಗೆ ನೀಡುತ್ತಿರುವುದು ಸಂತೋಷದಾಯಕ ವಿಷಯವೆಂದು ತಿಳಿಸಿದ್ದಾರೆ.