ತಾಲೂಕು ಅಧ್ಯಕ್ಷರಾಗಿ ಕಟ್ಟಾಯ ಶಿವಕುಮಾರ್ ಅವಿರೋಧ ಆಯ್ಕೆ

| Published : Jul 11 2024, 01:37 AM IST

ತಾಲೂಕು ಅಧ್ಯಕ್ಷರಾಗಿ ಕಟ್ಟಾಯ ಶಿವಕುಮಾರ್ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದಿಂದ ನಡೆದ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಕಟ್ಟಾಯ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ತಾಲೂಕು ಘಟಕದ ನಿರ್ದೇಶಕರಿಗೆ ಬೆಂಬಲಿಗರು ಅಭಿನಂದನೆಗಳನ್ನು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದಿಂದ ನಡೆದ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ೨೦೨೪-೨೦೨೯ರ ಅವಧಿಗೆ ಅವಿರೋಧವಾಗಿ ಕಟ್ಟಾಯ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕಟ್ಟಾಯ ಶಿವಕುಮಾರ್ ಅವರು, ಮತ್ತೊಮ್ಮೆ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ತಾಲೂಕು ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕರಾದ ಬಿ.ಆರ್. ಗುರುದೇವ್, ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್, ರಾಜ್ಯ ಕೆ.ಎಸ್.ಆರ್.ಟಿ.ಸಿ. ಮಾಜಿ ಉಪಾಧ್ಯಕ್ಷರಾದ ಸೀಗೆ ಈಶ್ವರಪ್ಪ, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಮಾಜಿ ಅಧ್ಯಕ್ಷರಾದ ಸಂಗಂ, ರಾಜ್ಯ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ನಿರ್ದೇಶಕರಾದ ಬಿ.ಎಸ್. ಗುರುನಾಥ್ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಿರಿಯರಿಗೆ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ವರಿಗೆ ಅಭಿನಂದನೆಗಳು ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ತಾಲೂಕು ಘಟಕದ ನಿರ್ದೇಶಕರಿಗೆ ಅಭಿನಂದನೆಗಳನ್ನು ಹೇಳಿದರು. ನಿರ್ದೇಶಕರಾಗಿ ಹೇಮೇಶ್ ಎಚ್.ವಿ, ಹೇಮಂತ್ ಕುಮಾರ್, ಕುಮಾರ್ ಸ್ವಾಮಿ ಸಿ ಎಸ್, ಧರ್ಮ ಶೆಟ್ಟಿಹಳ್ಳಿ, ಕಿರಣ್ ಕುಮಾರ್ ಹೊಸಮನಿ, ಮಂಜು ಟಿ ಎನ್ (ನವೀನ್), ಟಿ ಪಿ ನಾಗರಾಜ್, ಲೋಕೇಶ್ ಮಯೂರಿ, ರಾಜಶೇಖರ್ ಮೂರ್ತಿ ಎಂ ವಿ, ದರ್ಶನ ಬಿ ಎಸ್, ದಿಲಿಪ್, ಮದನ್, ಮಿಥುನ್, ಲತಾ ಎಂ ಆರ್, ಲೀಲಾ ಎಂ ಎಸ್, ಚಾಂದಿನಿ ಭೂಷಣ್, ಸುಜಾತಾ ರಾಜ್, ಸಾವಿತ್ರಮ್ಮ, ವೇದಾವತಿ ಮಲ್ಲಿಕಾರ್ಜುನ ಇವರು ಅವೀರೋಧವಾಗಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಅಯ್ಕೆಯಾಗಿದ್ದಾರೆ ಎಂದು ಹೇಳಿದರು.