ಐಆರ್ ಬಿ ಸಭಾಂಗಣದಲ್ಲಿ ಕೌದಿ ನಾಟಕ ಪ್ರದರ್ಶನ

| Published : Mar 03 2024, 01:35 AM IST

ಐಆರ್ ಬಿ ಸಭಾಂಗಣದಲ್ಲಿ ಕೌದಿ ನಾಟಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಮೊಬೈಲ್ ಫೋನ್ ಜಗತ್ತಿನಲ್ಲಿ ನಾಟಕಗಳು ಕಡಿಮೆಯಾಗುತ್ತಿವೆ ಎಂದು ಐಆರ್ ಬಿ(ಭಾರತೀಯ ಪೊಲೀಸ್ ಮೀಸಲು ಪಡೆ) ಕಮಾಡೆಂಟ್ ಎನ್.ಬಿ.ಮೆಳ್ಳಿಗಟ್ಟಿ ವಿಷಾದ ವ್ಯಕ್ತಪಡಿಸಿದರು. ಅರಕೇರಿಯಲ್ಲಿರುವ ಐಆರ್ ಬಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಣೇಶ ಅಮೀನಗಡ ಅವರ ಕೌದಿ ನಾಟಕ ಪ್ರದರ್ಶನವನ್ನು ಐಆರ್ ಬಿ ಕಮಾಡೆಂಟ್ ಎನ್.ಬಿ.ಮೆಳ್ಳಿಗಟ್ಟಿ ಕೌದಿ ಬಿಡಿಸಿ ಪ್ರದರ್ಶಿಸುವ ಮೂಲಕ ಉದ್ಘಾಟಿಸಿದರು.

ವಿಜಯಪುರ: ಮೊಬೈಲ್ ಫೋನ್ ಜಗತ್ತಿನಲ್ಲಿ ನಾಟಕಗಳು ಕಡಿಮೆಯಾಗುತ್ತಿವೆ ಎಂದು ಐಆರ್ ಬಿ(ಭಾರತೀಯ ಪೊಲೀಸ್ ಮೀಸಲು ಪಡೆ) ಕಮಾಡೆಂಟ್ ಎನ್.ಬಿ.ಮೆಳ್ಳಿಗಟ್ಟಿ ವಿಷಾದ ವ್ಯಕ್ತಪಡಿಸಿದರು.

ಅರಕೇರಿಯಲ್ಲಿರುವ ಐಆರ್ ಬಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಣೇಶ ಅಮೀನಗಡ ಅವರ ಕೌದಿ ನಾಟಕ ಪ್ರದರ್ಶನವನ್ನು ಐಆರ್ ಬಿ ಕಮಾಡೆಂಟ್ ಎನ್.ಬಿ.ಮೆಳ್ಳಿಗಟ್ಟಿ ಕೌದಿ ಬಿಡಿಸಿ ಪ್ರದರ್ಶಿಸುವ ಮೂಲಕ ಉದ್ಘಾಟಿಸಿದರು. ಹಳ್ಳಿಗಳಲ್ಲಿ ದೊಡ್ಡಾಟ, ಸಣ್ಣಾಟ, ನಾಟಕಗಳು ನಿರಂತರವಾಗಿ ನಡೆಯುತ್ತಿದ್ದವು. ಮನರಂಜನೆ, ಭಕ್ತಿಭಾವದ ಜೊತೆಗೆ ಸಂದೇಶಗಳನ್ನೂ ಕೊಡುತ್ತಿದ್ದವು. ಆದರೆ ಆಧುನಿಕತೆಯಿಂದಾಗಿ ಸಿನಿಮಾಗಳು ಬಂದವು‌. ನಂತರ ಟಿವಿ ಹಾವಳಿ ಹೆಚ್ಚಿತು. ಈಗ ಮೊಬೈಲ್ ಫೋನ್ ಕಾಲ. ಇದರಿಂದ ನಾಟಕಗಳು ಕಡಿಮೆಯಾಗಿವೆ‌. ಆದರೂ ಬನಶಂಕರಿ ಜಾತ್ರೆಯಲ್ಲಿ ಕಂಪನಿ ನಾಟಕಗಳ ವೈಭವ ಕಾಣಬಹುದು ಎಂದು ತಿಳಿಸಿದರು.

ಕೌದಿ ಹೊಲಿಯುವವರ ಬದುಕನ್ನು ನಾಟಕ ಕಟ್ಟಿಕೊಡುತ್ತದೆ. ಭಾಗ್ಯಶ್ರೀ ಪಾಳಾ ಅದ್ಭುತವಾಗಿ ಅಭಿನಯಿಸಿದರು ಎಂದು ಶ್ಲಾಘಿಸಿದರು. ಸಹಾಯಕ ಕಮಾಡೆಂಟ್ ಗಳಾದ ಶರಣಬಸವ, ಲಕ್ಷ್ಮಣ ನಾಯ್ಕ, ಹುಸೇನ್ ಲಾಲಕೋಟಿ, ಗಣೇಶ ಅಮೀನಗಡ, ಶರಣಬಸವ ಹಾಗೂ ಸಿಬ್ಬಂದಿ ಹಾಜರಿದ್ದರು.