ಕುಂಬಳೂರು ಗ್ರಾಪಂ ಅಧ್ಯಕ್ಷರಾಗಿ ಕವಿತಾ, ಉಪಾಧ್ಯಕ್ಷರಾಗಿ ಪಾರ್ವತಿಬಾಯಿ ಆಯ್ಕೆ

| Published : Aug 13 2024, 12:49 AM IST

ಕುಂಬಳೂರು ಗ್ರಾಪಂ ಅಧ್ಯಕ್ಷರಾಗಿ ಕವಿತಾ, ಉಪಾಧ್ಯಕ್ಷರಾಗಿ ಪಾರ್ವತಿಬಾಯಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕವಿತಾ ಚಂದ್ರಪ್ಪ, ಉಪಾಧ್ಯಕ್ಷರಾಗಿ ಪಾರ್ವತಿ ಬಾಯಿ ಪರಮೇಶ್ವರ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.

ಹೊನ್ನಾಳಿ: ತಾಲೂಕಿನ ಕುಂಬಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕವಿತಾ ಚಂದ್ರಪ್ಪ, ಉಪಾಧ್ಯಕ್ಷರಾಗಿ ಪಾರ್ವತಿ ಬಾಯಿ ಪರಮೇಶ್ವರ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷರಾಗಿದ್ದ ಅನಸೂಯಮ್ಮ ರಾಜಪ್ಪ ಹಾಗೂ ಉಪಾಧ್ಯಕ್ಷೆ ಕವಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.

ಕವಿತಾ ಚಂದ್ರಪ್ಪ ಅಧ್ಯಕ್ಷ ಸ್ಥಾನಕ್ಕೆ, ಪಾರ್ವತಿ ಬಾಯಿ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಇತರೆ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಲಿಲ್ಲ. ಈ ಹಿನ್ನೆಲೆ ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಈ ಸಂದರ್ಭ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎ.ಎಸ್. ಅಣ್ಣಪ್ಪ, ಸದಸ್ಯರಾದ ಎಚ್.ಪಂಚಾಕ್ಷರಿ, ಶೃತಿ ರಾಮಸ್ವಾಮಿ, ಎಸ್.ಆರ್. ಈಶ್ವರಪ್ಪ, ಹಳದಮ್ಮ ಮೋಹನ್, ಕೆ.ಎಸ್. ಪಾವನ ಸತೀಶ್, ಅನಸೂಯಮ್ಮ ರಾಜಪ್ಪ, ಪಿಡಿಒ ಶೇಖರ ನಾಯ್ಕ, ಶಾಸಕರ ಪುತ್ರ ಡಿ.ಎಸ್. ಸುರೇಂದ್ರ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಗ್ರಾಪಂ ಮಾಜಿ ಉಪಾಧ್ಯಕ್ಷ ವಾಗೀಶ್, ಸೋಮಶೇಖರ್, ಎ.ಎಸ್. ರಂಗನಾಥ್, ಹನುಮಂತಪ್ಪ, ಮುರುಳಿಧರ್ ನಾಯ್ಕ, ಚಂದ್ರಪ್ಪ, ಹಾಲೇಶಪ್ಪ ಅವರು ಉಪಸ್ಥಿತರಿದ್ದರು.

- - - ** (ಈ ಪೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-12ಎಚ್.ಎಲ್.ಐ2:

ಹೊನ್ನಾಳಿ ತಾಲೂಕು ಕುಂಬಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕವಿತಾ ಚಂದ್ರಪ್ಪ, ಉಪಾಧ್ಯಕ್ಷೆ ಪಾರ್ವತಿ ಬಾಯಿ ಆಯ್ಕೆಯಾದ ಹಿನ್ನೆಲೆ ಶಾಸಕರ ಪುತ್ರ ಡಿ.ಎಸ್. ಸುರೇಂದ್ರಗೌಡ, ಜಿ.ಪಂ. ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್ , ಗಾ.ಪಂ. ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.