ಜಿಲ್ಲಾಡಳಿತ ಭವನದಲ್ಲಿ ಕಾಯಕ ಶರಣರ ಜಯಂತಿ‌ ಆಚರಣೆ

| Published : Feb 11 2025, 12:51 AM IST

ಜಿಲ್ಲಾಡಳಿತ ಭವನದಲ್ಲಿ ಕಾಯಕ ಶರಣರ ಜಯಂತಿ‌ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

11 ಮತ್ತು 12 ನೇ ಶತಮಾನವನ್ನು ವಚನ ಚಳುವಳಿಯ ಕಾಲವೆಂದೇ ಕರೆಯುತ್ತಾರೆ. ಈ ಕಾಲಘಟ್ಟದಲ್ಲಿ 200 ಕ್ಕೂ ಹೆಚ್ಚು ವಚನಕಾರರು ಇದ್ದರು. ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರು ಬಸವಣ್ಣರ ಹಾದಿಯಲ್ಲಿ ನಡೆದು ಬಂದ ಶರಣರು. ಸಾವು ಅನ್ನುವಂತದ್ದು ದೇಹಕ್ಕೆ ಮಾತ್ರ ನಮ್ಮ ಆತ್ಮಕ್ಕೆ ಎಂದಿಗೂ ಸಾವಿಲ್ಲ ಎಂದು ತಮ್ಮ ವಚನಗಳ ಮೂಲಕ ಜನರಿಗೆ ತಿಳಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದರು.

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ''''''''ಕಾಯಕ ಶರಣರ'''''''' ಜಯಂತಿಯನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿ, 11 ಮತ್ತು 12 ನೇ ಶತಮಾನವನ್ನು ವಚನ ಚಳುವಳಿಯ ಕಾಲವೆಂದೇ ಕರೆಯುತ್ತಾರೆ. ಈ ಕಾಲಘಟ್ಟದಲ್ಲಿ 200 ಕ್ಕೂ ಹೆಚ್ಚು ವಚನಕಾರರು ಇದ್ದರು. ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರು ಬಸವಣ್ಣರ ಹಾದಿಯಲ್ಲಿ ನಡೆದು ಬಂದ ಶರಣರು. ಸಾವು ಅನ್ನುವಂತದ್ದು ದೇಹಕ್ಕೆ ಮಾತ್ರ ನಮ್ಮ ಆತ್ಮಕ್ಕೆ ಎಂದಿಗೂ ಸಾವಿಲ್ಲ ಎಂದು ತಮ್ಮ ವಚನಗಳ ಮೂಲಕ ಜನರಿಗೆ ತಿಳಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದರು. ಅವರು ತಮ್ಮ ವಚನಗಳಲ್ಲಿ ತಿಳಿಸಿರುವ ಆಶಯಗಳನ್ನು ಅರಿತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಪರ ಜಿಲ್ಲಾಧಿಕಾರಿ ಅಮರೇಶ್ ಎಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್, ಜಿಲ್ಲಾಧಿಕಾರಿಗ ಕಚೇರಿ ಸಹಾಯಕ ರಾಜೀವ್ ಸುಲೋಚನಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.