ಕೆಸಿಇಟಿ ೨೦೨೪: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

| Published : Jun 03 2024, 12:31 AM IST

ಸಾರಾಂಶ

ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಇಬ್ಬರು ಟಾಪ್ ಟೆನ್ ಒಳಗೆ ರ‍್ಯಾಂಕ್ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಇಬ್ಬರು ಟಾಪ್ ಟೆನ್ ಒಳಗೆ ರ‍್ಯಾಂಕ್ ಪಡೆದಿದ್ದಾರೆ. ವರುಣ್ ವಿ. ಪಶು ವೈದ್ಯಕೀಯದಲ್ಲಿ ೩ನೇ ರ‍್ಯಾಂಕ್, ಕೃಷಿಯಲ್ಲಿ ೫ ರ‍್ಯಾಂಕ್ ಗಳಿಸಿದ್ದಾರೆ.

ಪ್ರಮುಖವಾಗಿ ಎಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ ೧೦೦೦ ರ‍್ಯಾಂಕ್‌ಗಳಲ್ಲಿ ೨೪ ವಿದ್ಯಾರ್ಥಿಗಳು, ಮೊದಲ ೫೦೦೦ ರ‍್ಯಾಂಕ್‌ನ ಒಳಗೆ ೨೭೩ ವಿದ್ಯಾರ್ಥಿಗಳು, ಮೊದಲ ೧೦೦೦೦ ರ‍್ಯಾಂಕ್‌ಗಳಲ್ಲಿ ಒಟ್ಟು ೭೩೮ ವಿದ್ಯಾರ್ಥಿಗಳು ರ‍್ಯಾಂಕ್‌ನ್ನು ಪಡೆದಿದ್ದು, ಇವೆರೆಲ್ಲರೂ ರಾಜ್ಯದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ.

ಸಾಗರ್- ಕೃಷಿಯಲ್ಲಿ ೧೨ ನೇ ರ‍್ಯಾಂಕ್, ಪಶು ವೈದ್ಯಕೀಯ- ೩೭ನೇ ರ‍್ಯಾಂಕ್, ಪ್ರೀತಮ್ ಎನ್‌.ಎಂ.- ಪಶು ವೈದ್ಯಕೀಯ- ೩೬ನೇ ರ‍್ಯಾಂಕ್, ರಕ್ಷಿತಾ ಆರ್. ಕಾಪ್ಸೆ- ಕೃಷಿಯಲ್ಲಿ ೩೬ನೇ ರ‍್ಯಾಂಕ್, ಪಶು ವೈದ್ಯಕೀಯ- ೬೧ನೇ ರ‍್ಯಾಂಕ್, ವಿನಾಯಕ್ ಡಿ. ಮಾರಾಠೆ- ಕೃಷಿಯಲ್ಲಿ ೪೬ ನೇ ರ‍್ಯಾಂಕ್, ಪಶು ವೈದ್ಯಕೀಯ-೬೭ ನೇ ರ‍್ಯಾಂಕ್, ಸುಚಿತಾ ಸಂಜು- ಕೃಷಿಯಲ್ಲಿ ೫೦ ನೇ ರ‍್ಯಾಂಕ್, ಪಶು ವೈದ್ಯಕೀಯ-೧೨೯ ನೇ ರ‍್ಯಾಂಕ್, ವಿಕಾಸ್ ಪಾಟೀಲ್- ಕೃಷಿಯಲ್ಲಿ ೬೬ ನೇ ರ‍್ಯಾಂಕ್, ಪ್ರೀತಮ್ ಎಂ.- ಕೃಷಿಯಲ್ಲಿ ೪೩ ನೇ ರ‍್ಯಾಂಕ್, ಪಶು ವೈದ್ಯಕೀಯ-೯೩ ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ ೬೬ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ ೯೩ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ ೪೪೦ನೇ ರ‍್ಯಾಂಕ್, ಸಿಂಚನಾ ಎಸ್‌ಸಿ- ನ್ಯಾಚುರೋಪತಿಯಲ್ಲಿ ೧೬೯ನೇ ರ‍್ಯಾಂಕ್, ಕೃಷಿಯಲ್ಲಿ ೧೪೫ ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ ೧೯೧ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ ೧೯೧ ನೇ ರ‍್ಯಾಂಕ್, ನಮಿತ್ ಎಪಿ- ಕೃಷಿಯಲ್ಲಿ ೫೫ ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ ೧೫೬ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ ೨೭೪ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ ೨೭೪ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ ೪೯೮ನೇ ರ‍್ಯಾಂಕ್, ಲಕ್ಷ್ಮಿ- ಪಶು ವೈದ್ಯಕೀಯದಲ್ಲಿ ೮೪ನೇ ರ‍್ಯಾಂಕ್, ದೀಪಾ ರಮೇಶ್- ಕೃಷಿಯಲ್ಲಿ ೮೨ನೇ ರ‍್ಯಾಂಕ್, ರಜತ್- ಎಂಜಿನಿಯರಿಂಗ್‌ನಲ್ಲಿ ೧೬೩ನೇ ರ‍್ಯಾಂಕ್, ದರ್ಶನ್ ಕುಮಾರ್ ಟಿ.- ಕೃಷಿಯಲ್ಲಿ ೮೩ ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ ೧೮೦ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ ೨೧೭ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ ೨೧೭ ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.ಮೊದಲ ೧೦ ರ‍್ಯಾಂಕ್‌ನಲ್ಲಿ ಇಬ್ಬರು, ಮೊದಲ ೫೦ರಲ್ಲಿ 9, ಮೊದಲ ೧೦೦ರಲ್ಲಿ 21, ಮೊದಲ ೨೦೦ರಲ್ಲಿ 48, ೩೦೦ರಲ್ಲಿ 85, ೪೦೦ರಲ್ಲಿ 117, ೫೦೦ರಲ್ಲಿ 157, ೧೦೦೦ದ ಒಳಗೆ 516, ೨೦೦೦ದ ಒಳಗೆ 1048, ೩೦೦೦ದ ಒಳಗೆ 1773, ೪೦೦೦ದ ಒಳಗೆ 2107, ೫೦೦೦ದ ಒಳಗೆ 2656 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಪಿಸಿಬಿ ಹಾಗೂ ಪಿಸಿಎಂನಲ್ಲಿ ೭೭೨ ವಿದ್ಯಾರ್ಥಿಗಳು ೧೪೧ರಲ್ಲಿ ೧೦೦ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ, ಪ್ರಾಂಶುಪಾಲ ಪ್ರೊ.ಎಂ. ಸದಾಕತ್ ಇದ್ದರು.