ಸಾರಾಂಶ
ಲೋಕಾಪುರ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಸರ್ವೋದಯ ಅನುದಾನ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮುಧೋಳ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಶಾಲೆಯ ಪರಿಸರ ಶುಚಿಯಾಗಿಡುವುದು ನಮ್ಮೆಲ್ಲರ ಜವಾಬ್ದಾರಿ. ಶಾಲೆಯ ಸುತ್ತಮುತ್ತ ಪರಿಸರ ಸ್ವಚ್ಛವಾಗಿಟ್ಟುಕೊಂಡು ಉತ್ತಮ ವಾತಾವರಣ ಕಲ್ಪಿಸುವಲ್ಲಿಲ್ಲ ನಮ್ಮೆಲ್ಲರ ಪಾತ್ರ ಬಹಳ ದೊಡ್ಡದು ಎಂದು ಮುಖ್ಯಶಿಕ್ಷಕ ಎಸ್.ಎಂ. ರಾಮದುರ್ಗ ಹೇಳಿದರು.ಪಟ್ಟಣದ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಸರ್ವೋದಯ ಅನುದಾನ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮುಧೋಳ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಶುಚಿತ್ರ ಮಹತ್ವ, ಗಿಡಿ ಬೆಳೆಸಿ ನಾಡು ಉಳಿಸಿಗಿಮರ ಸಂರಕ್ಷಣೆ ಹಲವಾರು ವಿಷಯ ಬಗ್ಗೆ ಮಾತನಾಡಿ ಜಾಗೃತಿ ಮೂಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬಿ.ವೈ. ಮಡಿವಾಳರ, ಕಾಲೇಜು ಪ್ರಾಚಾರ್ಯ ಐ.ಜೆ. ಧಾರವಾಡಮಠ ಅವರು ಪರಿಸರದ ಬಗ್ಗೆ ಮಾಹಿತಿ ನೀಡಿ ಪರಿಸರ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕ ಉಮಾ ಮಾನೆ ಸೇವಾಪ್ರತಿನಿಧಿಗಳು ಶಾಲಾ ಶಹ ಶಿಕ್ಷಕ ಸಿಬ್ಬಂದಿ ಶಾಲಾ ಮಕ್ಕಳು ಸಂಘದ ಸದಸ್ಯರು ಭಾಗವಹಿಸಿದ್ದರು.