ಸಾರಾಂಶ
ಪಟ್ಟಣದ ಶ್ರೀವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಮಂಗಳವಾರ ಶ್ರೀ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಕೆಂಭಾವಿ
ಪಟ್ಟಣದ ಶ್ರೀವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಮಂಗಳವಾರ ಶ್ರೀ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಪುರಸಭೆ ಅಧ್ಯಕ್ಷ ರೆಹಮಾನ್ ಪಟೇಲ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಮೊಹ್ಮದ್ ಯೂಸೂಫ್, ಶರಣಪ್ಪ ಯಾಳಗಿ, ಮಹಿಪಾಲರೆಡ್ಡಿ ಡಿಗ್ಗಾವಿ, ರಾಘವೇಂದ್ರ ಕವಲ್ದಾರ, ಶಿವಣ್ಣ ಕವಲ್ದಾರ, ಹಳ್ಳೆಪ್ಪ ಕವಲ್ದಾರ, ತಿಪ್ಪಣ್ಣ ಟಣಕೆದಾರ, ದೇವಪ್ಪ ಮ್ಯಾಗೇರಿ, ದೇವು ಕವಲ್ದಾರ, ಪ್ರಭು ಕವಲ್ದಾರ, ಶಿವು ಮಲ್ಲಿಬಾವಿ ಇದ್ದರು.
ಪರಸನಹಳ್ಳಿ: ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕರವೇ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಶ್ರೀ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಮಾಜದ ಅಧ್ಯಕ್ಷ ದೊಡ್ಡ ನಿಂಗಪ್ಪ ದೊರೆ, ರಾಯಪ್ಪ ದೊರೆ, ಹಣಮಂತ, ವೆಂಕಟೇಶ, ದೇವಪ್ಪ, ಹಳ್ಳೆಪ್ಪ, ರಾಯಪ್ಪ ಮಸೂತಿ, ರಾಯಪ್ಪ ಹೂಗಾರ, ಜಟ್ಟೆಪ್ಪ ಹಣಜಗಿ, ದೇವು ಟೊಣ್ಣುರ ಇದ್ದರು.ಯಾಳಗಿ: ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಿಡಿಒ ಸತೀಶ ಆಲಗೂರ, ಬಸನಗೌಡ ಪೋಲಿಸ್ ಪಾಟೀಲ, ಶ್ರೀನಿವಾಸರಡ್ಡಿ ಮಾಲಿಪಾಟೀಲ, ಅಮೀನರಡ್ಡಿ ಹೊಸಮನಿ, ಶಾಂತಪ್ಪ ಗುಗ್ಗರಿ, ಶರಣಪ್ಪ ನಾಲವಾರ, ರಾಮನಗೌಡ ಹೊಸಮನಿ, ಸಿದ್ದಯ್ಯಸ್ವಾಮಿ, ಚಂದಪ್ಪ ಬೆಕಿನಾಳ, ಸಿದ್ದಣ್ಣ ಕುಮಸಗಿ, ಸಾಯಬಣ್ಣ ದೊಡ್ಡಮನಿ, ಮೌನೇಶ ಬೆಕಿನಾಳ, ಶ್ರೀಶೈಲ್ ಮಹಾಮನಿ, ದೇವಿಂದ್ರಪ್ಪ ಹಳ್ಳದಮನಿ, ಪ್ರಕಾಶ ನಾಯ್ಕೋಡಿ ಇದ್ದರು.