ಸಾರಾಂಶ
ನಾಡಪ್ರಭು ಕೆಂಪೇಗೌಡರು ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ನಕ್ಷೆಯನ್ನು ತಯಾರು ಮಾಡಿ ಒಂದು ಉನ್ನತಿ ನಗರವನ್ನು ಕಟ್ಟಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಮಹದೇಶ್ವರ ಬಡಾವಣೆ ಅಭ್ಯುದಯ ಸಂಘದಿಂದ ಮಹದೇಶ್ವರ ಬಡಾವಣೆಯ ಚಾಮುಂಡೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ನಕ್ಷೆಯನ್ನು ತಯಾರು ಮಾಡಿ ಒಂದು ಉನ್ನತಿ ನಗರವನ್ನು ಕಟ್ಟಿದರು. ಎಲ್ಲಾ ಜಾತಿ ಜನಾಂಗ ಮತ್ತು ಕಸುಬು ವೃತ್ತಿಪರ ಕೆಲಸಗಾರರಿಗೆ ಪೇಟೆಗಳನ್ನ ನಿರ್ಮಾಣ ಮಾಡಿದರು. ಕೆರೆಕಟ್ಟೆಗಳನ್ನು ಕಟ್ಟಿದರು, ಮರ ಗಿಡಗಳನ್ನು ಬೆಳೆಸಿದರು. ಒಂದು ಸುಂದರ ಸಾಮ್ರಾಜ್ಯವನ್ನು ನಿರ್ಮಾಣ ಮಾಡುವಲ್ಲಿ ನಾಡಪ್ರಭು ಕೆಂಪೇಗೌಡರು ಯಶಸ್ವಿಯಾದರು ಎಂದು ಸ್ಮರಿಸಿದರು.
ಇಂದು ಕರ್ನಾಟಕದ ತೆರೆಗೆಯಲ್ಲಿ ಶೇ.60 ತೆರಿಗೆಯು ಬೆಂಗಳೂರಿನಲ್ಲಿ ಸಂಗ್ರಹವಾಗುತ್ತದೆ. ಈ ತೆರಿಗೆ ಇಡೀ ಕರ್ನಾಟಕಕ್ಕೆ ಹಂಚಲಾಗುತ್ತದೆ. ಅಭಿವೃದ್ಧಿಗೆ ಇದು ಕೆಂಪೇಗೌಡರ ಕೊಟ್ಟ ಆ ದಿನಗಳ ಅಭಿವೃದ್ಧಿಯ ಫಲ ಎಂದು ಅವರು ಹೇಳಿದರು.ನಗರ ಪಾಲಿಕೆ ಮಾಜಿ ಸದಸ್ಯ ಶಿವಮಾದು, ಬಿಜೆಪಿ ಚಾಮರಾಜ ಕ್ಷೇತ್ರ ಮುಖಂಡ ಚೌಡಪ್ಪ, ಮೈಸೂರು ರಕ್ಷಣಾ ವೇದಿಕೆ ಉಪಾಧ್ಯಕ್ಷ ಕುಮಾರ್ ಗೌಡ, ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಯೋಗಿನರಸಿಂಹ, ಮಹದೇಶ್ವರ ಬಡಾವಣೆ ಅಭ್ಯುದಯದ ಸಂಘದ ಅಧ್ಯಕ್ಷ ಮಹದೇವು, ಹರೀಶ್, ಕಾಂಗ್ರೆಸ್ ಮುಖಂಡ ರಮೇಶ್, ಕೇಬಲ್ ಮಹೇಶ್ ಮೊದಲಾದವರು ಇದ್ದರು.