ಅಜ್ಜಂಪುರದ ಕೆಂಪ್ಪಾಲ್ಲಕ್ಕಿ ಕಾಟಿ ತಳಿ 3.76ಲಕ್ಷ ದಾಖಲೆ ಬೆಲೆಗೆ ಮಾರಾಟ

| Published : Jan 30 2025, 12:32 AM IST

ಸಾರಾಂಶ

ಬೀರೂರು, ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಜಾನುವಾರು ತಳಿಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಅಮೃತ್‌ಮಹಲ್ ಗಂಡು ಕರುಗಳ ಭಾರಿ ಬಹಿರಂಗ ಹರಾಜು ಬುಧವಾರ ನಡೆಯಿತು.

ಅಮೃತ್ ಮಹಲ್ ಹರಾಜಿನಲ್ಲಿ 179ರಾಸುಗಳ ಪ್ರದರ್ಶನಕನ್ನಡಪ್ರಭ ವಾರ್ತೆ ಬೀರೂರು.

ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಜಾನುವಾರು ತಳಿಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಅಮೃತ್‌ಮಹಲ್ ಗಂಡು ಕರುಗಳ ಭಾರಿ ಬಹಿರಂಗ ಹರಾಜು ಬುಧವಾರ ನಡೆಯಿತು. ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿರುವ ಅಮೃತ್‌ಮಹಲ್ ಆಕರ್ಷಕ ಮೈಕಟ್ಟನ್ನು ಹೊಂದಿ ಕೃಷಿ ಚಟುವಟಿಕೆಗಳಿಗೆ ಹೇಳಿಮಾಡಿಸಿರುವಂತಹ ಹೋರಿ ಕರುಗಳಿಗೆ ಭಾರಿ ಬೇಡಿಕೆಯಿದ್ದು ಹರಾಜು ಪ್ರಕ್ರಿಯೆ ಅಂದಿನಿಂAದಲೂ ಚಾಲನೆಯಲ್ಲಿದೆ. ನಂತರದ ದಿನಗಳಲ್ಲಿ ಸರ್ಕಾರದ ಅಧೀನದಲ್ಲಿರುವ ರಾಜ್ಯದ ವಿವಿಧೆಡೆ ತಳಿಸಂವರ್ಧನಾ ಕೇಂದ್ರಗಳನ್ನು ಪ್ರಾರಂಭಿಸಿದರೂ ಇಲ್ಲಿ ಬೆಳೆದಂತಹ ಹೋರಿಕರುಗಳಿಗೆ ಭಾರಿ ಬೇಡಿಕೆಯಿದೆ. ಜಿಲ್ಲೆಯ ಬಾಸೂರು, ಲಿಂಗದಹಳ್ಳಿ, ಅಜ್ಜಂಪುರ ಹಾಗು ನೆರೆಯ ಜಿಲ್ಲೆಯ ರಾಮಗಿರಿ, ಹಬ್ಬನಗದ್ದೆ, ಚಿಕ್ಕಎಮ್ಮಿಗನೂರು ಮತ್ತು ರಾಯಚಂದ್ರ ಅಮೃತ್‌ಮಹಲ್ ಕಾವಲುಗಳಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಬೆಳೆಸಲಾಗುತ್ತದೆ. ಕಳೆದ ಬಾರಿಗಿಂತಲೂ ತುಸು ಹೆಚ್ಚಾಗಿರುವ ರಾಸುಗಳಲ್ಲಿ ಪಾತ್ರೆ, ನಾರಾಯಣಿ, ಕಾವೇರಿ, ಕರಿಯಕ್ಕ, ಮದಕರಿ, ಸಣ್ಣಿ, ಗಂಗೆ, ಕೆಂಪಲಕ್ಕಿ, ಮಾರಿ, ಕಡೇಗಣ್ಣಿ ಮೆಣಸಿ, ಭದ್ರಿ, ಚನ್ನಕ್ಕ, ಗಂಗೆ, ಕಾಳಿಂಗರಾಯ, ದೇವಗಿರಿ, ಮಲಾರ, ಚನ್ನಬಸವಿ, ರಾಯತದೇವಿ, ಮುತ್ತೆöÊದೆ, ಬೆಳದಿಂಗಳು, ಗಾಳಿಕೆರೆ, ಸನ್ಯಾಸಿ, ಕೆಂದಾವರೆ ಯಂತಹ ನೂರಾರು ಹೆಸರುಗಳ ತಳಿಗಳಿಂದ ಗುರುತಿಸಲ್ಪಡುವ ಹೋರಿಕರುಗಳು ಕೇವಲ ಒಂದುವರೆ ವರ್ಷದಿಂದ ಎರಡುವರ್ಷದ ಒಳಗಿನದ್ದಾಗಿವೆ. ಹರಾಜಿನಲ್ಲಿ 172 ಅಮೃತ್‌ಮಹಲ್ ಕ್ಷೇತ್ರದ ಹೋರಿಕರುಗಳು, 7 ಬೀಜದ ಹೋರಿಗಳು ಇಡಲಾಗಿತ್ತು. ಅಜ್ಜಂಪುರದ ಕೆಂಪ್ಪಾಲ್ಲಕ್ಕಿ-ಕಾಟಿ ತಳಿ 3.76 ಲಕ್ಷಕ್ಕೆ ಇಂದಿನ ಗರಿಷ್ಠಬೆಲೆಗೆ ಸೊರಬದ ಶಿಢ್ಲಘಟ್ಟದ ಶಂಕ್ರಪ್ಪ ತಮ್ಮದಾಗಿಸಿಕೊಂಡರು. ಬಾಸೂರಿನ ಮಸಣಿ ಮತ್ತು ಗೌರಿ ಜೋಡಿಯನ್ನು ಶಿಕಾರಿಪುರದ ಕೊಟ್ರೇಶಪ್ಪ 32. 16ಲಕ್ಷಕ್ಕೆ ಪಡೆದರು. ಶಿಕಾರಿಪುರದ ಗೊಗ್ಗ ಗ್ರಾಮದ ವಿರುಪಾಕ್ಷ ಕಾವೇರಿ ಮತ್ತು ಕಾಳಿಂಗರನ್ನು 3.12ಲಕ್ಷಕ್ಕೆಪಡೆದುಕೊಂಡರು.

ಹರಾಜಿನಲ್ಲಿ 291 ಜನ ಬಿಡ್ಡುದಾರರು ಹಾಸನ, ಮೈಸೂರು, ಅರಸೀಕೆರೆ ರಾಣಿಬೆನ್ನೂರು, ಹಾವೇರಿ, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಳ್ಳಕೆರೆ ಸೇರಿದಂತೆ ರಾಜ್ಯದ ನಾನಾ ಭಾಗದ ರೈತರು, ಗೋಶಾಲೆ ಮತ್ತು ಮಠದಿಂದಲೂ ಸಾವಿರಾರು ಜನ ಪಾಲ್ಗೊಂಡಿದ್ದರು. ಹರಾಜಿನಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಬೀರೂರು ಪೋಲಿಸ್ ಉಪನಿರೀಕ್ಷಕ ಸಜಿತ್ ಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಭದ್ರತೆ ಕಲ್ಪಿಸಿದ್ದರು. ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಣ್ಣ , ಅಮೃತ್‌ಮಹಲ್ ತಳಿಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ರಾಘವೇಂದ್ರ ಪಾಟೀಲ್, ಡಾ.ಉಮೇಶ್, ಡಾ, ಎ.ಬಿ.ಪ್ರಭಾಕರ್, ಡಾ.ಬಾನುಪ್ರಕಾಶ್, ಡಾ.ನವೀನ್, ಮತ್ತಿತರಿದ್ದರು. -- ಕೋಟ್‌--

ಅಮೃತ್‌ಮಹಲ್ ತಳಿಯ ಹೋರಿಗಳು ಉತ್ತಮ ದೇಶಿಯ ತಳಿಗಾಳಿಗಿದ್ದು ಬಹು ಬೇಡಿಕೆಯಿದೆ. ಕೃಷಿ ಚಟುವಟಿಕೆಗಳಿಗೂ ಹೇಳಿಮಾಡಿಸಿರುವಂತಹ ಈ ಹೋರಿಗಳನ್ನು ನಾವು ಕೊಂಡೊಯ್ದು ಒಂದೆರೆಡು ವರ್ಷಗಳ ಕಾಲ ಬೇಸಾಯದಂತಹ ಕಾಯಕಗಳಿಗೆ ಬಳಸಿಕೊಂಡು ನಂತರ ಬೇರೆಯವರಿಗೆ ಉತ್ತಮ ಲಾಭದಾಯಕ ಬೆಲೆಗೆ ಮಾರಾಟ ಮಾಡಲಾಗುವುದು. - ಮಹಾಲಿಂಗೇಗೌಡ, ರೈತ, ಅರಸೀಕೆರೆ . --

517 ವರ್ಷಗಳ ಇತಿಹಾಸ ಇರುವ ಅಮೃತ್‌ಮಹಲ್ ಹೋರಿ ತಳಿಯನ್ನು ಮಹಾರಾಜರ ಕಾಲದಿಂದಲೂ ಸಂರಕ್ಷಿಸಲಾಗುತ್ತಿದೆ. ಕಳೆದ ವರ್ಷ 212 ಹೋರಿಕರುಗಳನ್ನು ಬಿಕರಿ ಮಾಡಲಾಗಿದ್ದು ಪ್ರಸ್ತುತ ಈ ವರ್ಷ ಅವುಗಳ ಸಂಖ್ಯೆ ಗಣನೀಯವಾಗಿ 17ಕ್ಕೆ ಇಳಿಕೆಯಾಗಿದೆ. ಸಚಿವರು ಮುಂದಿನ ದಿನಗಳಲ್ಲಿ ರಾಸುಗಳನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. ಇಂದಿನ ಬಿಡ್‌ನಲ್ಲಿ ವಿವಿಧ ಜಿಲ್ಲೆಯ ಸುಮಾರು 291 ಜನ ಪಾಲ್ಗೊಂಡಿದ್ದಾರೆ. ಈ ರಾಸುಗಳು ರೈತರ ಹೊಸಲಮನೆ ಕೆಲಸಗಳಿಗೆ ಸೂಕ್ತವಾಗಿದ್ದು ಅವರ ಪ್ರಗತಿಗೆ ನೆರವಾಗುತ್ತವೆ.- ಡಾ.ಶ್ರೀನಿವಾಸ್, ಜಂಟಿ ನಿರ್ದೇಶಕರು,

ಪಶುಪಾಲನಾ ಇಲಾಖೆ, ಮೈಸೂರು ವಿಭಾಗ --

29 ಬೀರೂರು 3 ಬೀರೂರು ಜಾನುವಾರು ಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಅಮೃತ್‌ಮಹಲ್ ಗಂಡು ಕರುಗಳ ಭಾರಿ ಬಹಿರಂಗ ಹರಾಜು ಬುಧವಾರ ನಡೆಯಿತು. 29 ಬೀರೂರು 4ಬೀರೂರು ಜಾನುವಾರು ಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಬುಧವಾರ ಅಮೃತ್‌ಮಹಲ್ ಗಂಡು ಕರುಗಳ ಭಾರಿ ಬಹಿರಂಗ ಹರಾಜು ನೋಡಲು ಮನೆ ಮೇಲ್ಚಾವಣಿ ಮೇಲೇರಿ ಕುಳಿತ ರೈತರು.,