ಸಾರಾಂಶ
ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ನ 2024-25 ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ನಡೆಯಿತು. ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ಮಯ್ಯದ್ದಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕನ್ನಡಪ್ರಭವಾರ್ತೆ ಮೂಲ್ಕಿ
ಕೆಮ್ರಾಲ್ ಪಂಚಾಯತ್ ವತಿಯಿಂದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಸಾಧನೆಗೆ ಪ್ರಶಸ್ತಿ ದೊರಕಿದೆ. ಗ್ರಾಮಸ್ಥರ ಬೆಂಬಲ ಇದ್ದರೆ ಮಾತ್ರ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದು ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ಮಯ್ಯದ್ದಿ ಹೇಳಿದರು.ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಕೆಮ್ರಾಲ್ ಗ್ರಾಮ ಪಂಚಾಯತ್ ನ 2024-25 ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿ;ಸೋಜಾ ಮಾತನಾಡಿ ಗ್ರಾಮಸ್ಥರು ನೀರಿನ ಹಾಗೂ ತೆರಿಗೆ ಬಿಲ್ಲನ್ನು ಕಾಲಕಾಲಕ್ಕೆ ಪಾವತಿಸಲೇಬೇಕು, ಕೆಲವರು ಬಿಲ್ ಕಟ್ಟದೆ ಪಂಚಾಯತ್ ಸದಸ್ಯರ ವಶೀಲಿಬಾಜಿ ನಡೆಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ರಾಜಿ ಇಲ್ಲ ಎಂದರು. ಸಭೆಯಲ್ಲಿ ಪಕ್ಷಿಕೆರೆಯಿಂದ ಪಂಜಕ್ಕೆ ಹೋಗುವ ಜಿ.ಪಂ. ರಸ್ತೆ ದುರಸ್ತಿ, ಹೊಸ ಕಾಡು ಲೇಔಟ್ ಬಳಿ ದಾರಿದೀಪ ಅವ್ಯವಸ್ಥೆ, ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.ನೋಡಲ್ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಕ್ಷ್ಮಿ ಬೋಳಾರ್ ಭಾಗವಹಿಸಿದ್ದು ಪಂಚಾಯಿತಿ ಸದಸ್ಯರಾದ ಲೀಲಾವತಿ, ಸುರೇಶ್ ಪಂಜ, ಜಾನೆಟ್ ಮೇಲಿಟ ಡಿಸೋಜಾ, ಶಶಿ ಸುರೇಶ್, ಕೇಶವ, ರೇವತಿ ಪೂಜಾರಿ, ಸುಮಿತ್ರ, ರಾಜೇಶ್ ಶೆಟ್ಟಿ, ಮಾಲತಿ ಆಚಾರ್ಯ, ಪಂಚಾಯಿತಿ ಕಾರ್ಯದರ್ಶಿ ಹರಿಶ್ಚಂದ್ರ, ಲೆಕ್ಕ ಸಹಾಯಕ ಕೇಶವ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.