ಕೇಂದ್ರೀಯ ವಿವಿ ಖುಷಿ ದಕ್ಷಿಣ ಏಶಿಯಾ ಜೂಡೋ ಚಾಂಪಿಯನ್‌

| Published : Sep 13 2024, 01:38 AM IST

ಕೇಂದ್ರೀಯ ವಿವಿ ಖುಷಿ ದಕ್ಷಿಣ ಏಶಿಯಾ ಜೂಡೋ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರೀಯ ವಿವಿಯ ಲೈಫ್‌ಸೈನ್ಸ್‌ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ 3 ನೇ ಸೆಮಿಸ್ಟರ್‌ ವಿದ್ಯಾರ್ಥಿನಿ, ಛತ್ತೀಸಘಡ್‌ ಮೂಲದ ಖುಷಿ ತಿವಾರಿ ಆ.30ರಿಂದ ಸೆ.1ರ ವರೆಗಿನ ಅವಧಿಯಲ್ಲಿ ನೇಪಾಳದ ಖಟ್ಮಂಡುವಿನಲ್ಲಿ ನಡೆದ ದಕ್ಷಿಣ ಏಶಿಯಾ ಜೂಡೋ ಚಾಂಪಿನ್‌ಶಿಪ್‌ನಲ್ಲಿ 60 ಕೆಜಿ ವಿಭಾಗದಲ್ಲಿ ಮೊದಲಿಗಳಾಗಿ ಚಿನ್ನದ ಪದಕ ಬಾಚಿಕೊಂಡಿದ್ದಾಳೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಆಳಂದ ತಾಲೂಕು ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯ ಲೈಫ್‌ಸೈನ್ಸ್‌ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ 3 ನೇ ಸೆಮಿಸ್ಟರ್‌ ವಿದ್ಯಾರ್ಥಿನಿ, ಛತ್ತೀಸಘಡ್‌ ಮೂಲದ ಖುಷಿ ತಿವಾರಿ ಆ.30ರಿಂದ ಸೆ.1ರ ವರೆಗಿನ ಅವಧಿಯಲ್ಲಿ ನೇಪಾಳದ ಖಟ್ಮಂಡುವಿನಲ್ಲಿ ನಡೆದ ದಕ್ಷಿಣ ಏಶಿಯಾ ಜೂಡೋ ಚಾಂಪಿನ್‌ಶಿಪ್‌ನಲ್ಲಿ 60 ಕೆಜಿ ವಿಭಾಗದಲ್ಲಿ ಮೊದಲಿಗಳಾಗಿ ಚಿನ್ನದ ಪದಕ ಬಾಚಿಕೊಂಡಿದ್ದಾಳೆ.

ಕಾಂಬ್ಯಾಟ್‌ ಫೆಡರೇಷನ್‌ ಆಫ್‌ ಇಂಡಿಯಾ, ವಿಶ್ವ ಕಾಂಬ್ಯಾಟ್‌ ಫೆಡರೇಷನ್‌ ಸಹಯೋಗದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಕಲಬುರಗಿ ಕೇಂದೀಯ ವಿವಿಯ ಖುಷಿ ತಿವಾರಿ ಜೂಡೋದಲ್ಲಿ ಭಾರತೀಯ ತಂಡದಲ್ಲಿ ಸ್ಪರ್ಧಿಸುವ ಅವಕಾಶ ಪಡೆದು ಚಿನ್ನದ ಪದಕ ಗೆದ್ದು ವಿಶ್ವವಿದ್ಯಾಲಯಕ್ಕೇ ಕೀರ್ತಿ ತಂದಿದ್ದಾಳೆಂದು ಇಲ್ಲಿನ ಆಡಳಿತ ವರ್ಗದವರು ಅವಳ ಸಾಧನೆಗೆ ಅಭಿನಂದಿಸಿದ್ದಾರೆ.

ಖುಷಿ ತಿವಾರಿ ಅಸೋಸಿಯೇಷನ್‌ ಆಫ್‌ ಇಂಡಿಯನ್‌ ಯೂನಿವರ್ಸಿಟಿ ಇಂದಲೂ ಜೂಡೋ ಸ್ಪರ್ಧೆಯಲ್ಲಿ ತನ್ನ ಕೈಚಳಕ ತೋರಿಸಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

ಖುಷಿ ತಿವಾರಿ ಜೂಡೋ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬೆಳ್ಳಿ, ಕಂಚಿನ ಪದಕ ಪಡೆದು ವಿವಿ ಕೀರ್ತಿ ಹೆಚ್ಚಿಸಿರುವದಕ್ಕೆ ಆಕೆಯನ್ನು ಕುಲಪತಿ ಸತ್ಯನಾರಾಯಣ ಹಾಗೂ ಕುಲಸಚಿವ ಡಾ. ಆರ್‌.ಆರ್‌. ಬಿರಾದಾರ್‌, ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಮಲ್ಲಿಕಾರ್ಜುನ ಪಾಸೋಡಿ, ಸಮನ್ವಯಕಾರರಾದ ಡಾ. ಸಾಯಿ ಅಭಿನವ ಸತ್ಕರಿಸಿ ಶುಭ ಕೋರಿದ್ದಾರೆ.