ವಿದ್ಯುತ್‌ ಶಾಕ್‌ಗೆ ಹಂತಕ ಆನೆ ಸಾವು

| Published : May 13 2024, 12:06 AM IST

ಸಾರಾಂಶ

ಮಹಿಳೆಯನ್ನು ಹತ್ಯೆ ಮಾಡಿದ್ದ ಸುಮಾರು 40 ವರ್ಷ ವಯಸ್ಸಿನ ಗಂಡಾನೆ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿರುವ ಘಟನೆ ಆಲ್ದೂರು ಹೋಬಳಿಯ ಹೆಡದಾಳ್‌ ಬಳಿ ಭಾನುವಾರ ನಡೆದಿದೆ.

ಚಿಕ್ಕಮಗಳೂರು: ಕಳೆದ ವರ್ಷ ನವೆಂಬರ್‌ 8 ರಂದು ತೋಟದ ಕೆಲಸಕ್ಕೆ ಹೋಗುವ ವೇಳೆಯಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ್ದ ಸುಮಾರು 40 ವರ್ಷ ವಯಸ್ಸಿನ ಗಂಡಾನೆ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿರುವ ಘಟನೆ ಆಲ್ದೂರು ಹೋಬಳಿಯ ಹೆಡದಾಳ್‌ ಬಳಿ ಭಾನುವಾರ ನಡೆದಿದೆ.

ಆಲ್ದೂರು ಸಮೀಪದ ಕೆರೆಹಕ್ಲು ಗ್ರಾಮದ ಬಳಿ ಕಾಡಾನೆ ಕಾಫಿ ಎಸ್ಟೇಟ್‌ನಲ್ಲಿದ್ದ ಹಲಸಿನ ಹಣ್ಣನ್ನು ಕೀಳಲು ಹೋಗುತ್ತಿದ್ದ ಸಂದರ್ಭದಲ್ಲಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್‌ ತಂತಿಯ ಮೇಲೆ ಬಿದ್ದ ಮರದ ಕೊಂಬೆಯಿಂದಾಗಿ ವಿದ್ಯುತ್‌ ಸಂಚಾರಗೊಂಡಿದ್ದು, ಇದನ್ನು ತುಳಿದ ಪರಿಣಾಮ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಲ್ದೂರು ಭಾಗದಲ್ಲಿ 3-4 ಕಾಡಾನೆಗಳು ಬೀಡು ಬಿಟ್ಟಿದ್ದು, ಆಗಾಗ ಸ್ಥಳೀಯರ ಮೇಲೆ ದಾಳಿ ನಡೆಸುತ್ತಿವೆ. ತೋಟದ ಕೆಲಸಕ್ಕೆ ಹೋಗುವ ವೇಳೆಯಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ಆನೆ ಇದೆ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ.ಪೋಟೋ ಫೈಲ್‌ ನೇಮ್‌ 12 ಕೆಸಿಕೆಎಂ 4 ಆಲ್ದೂರು ಹೋಬಳಿಯ ಹೆಡದಾಳ್‌ ಬಳಿ ಭಾನುವಾರ ವಿದ್ಯುತ್‌ ಶಾಕ್‌ ನಿಂದ ಮೃತಪಟ್ಟಿರುವ ಕಾಡಾನೆ.