ಸಾರಾಂಶ
ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ 45ನೇ ವರ್ಷದ ವಾರ್ಷಿಕೋತ್ಸವ ಮತ್ತು ಸೇವಾ ಸಹಾಯರ್ಥವಾಗಿ ರಿಕ್ಷಾ ಮಾಲಕರು ಮತ್ತು ಚಾಲಕರಿಗಾಗಿ ಕ್ರಿಕೆಟ್ ಪಂದ್ಯಾಟ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಶ್ರಮಜೀವಿ ಹಾಗೂ ಊರಿನ ರಾಯಭಾರಿಗಳಾಗಿರುವ ರಿಕ್ಷಾ ಚಾಲಕರು, ಒಂದಷ್ಟು ಸಮಾಜಮುಖಿ ಕೆಲಸ ಕಾರ್ಯಗಳ ಜೊತೆಗೆ ಸಹಾಯಾರ್ಥವಾಗಿ ಸೌಹಾರ್ದ ಕ್ರಿಕೆಟ್ ಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಹೇಳಿದರು.ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ 45ನೇ ವರ್ಷದ ವಾರ್ಷಿಕೋತ್ಸವ ಮತ್ತು ಸೇವಾ ಸಹಾಯರ್ಥವಾಗಿ ರಿಕ್ಷಾ ಮಾಲಕರು ಮತ್ತು ಚಾಲಕರಿಗಾಗಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ರಘುರಾಮ ಪುನರೂರು, ಉದ್ಯಮಿ ದಿವಾಕರ ಕರ್ಕೇರ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಹಿಲ್ದಾ ಡಿಸೋಜ, ಮೂಲ್ಕಿ ರಿಕ್ಷಾ ಮಾಲಕರ ಚಾಲಕರ ಸಂಘ ಅಧ್ಯಕ್ಷ ದೇವರಾಜ ಸಾಲ್ಯಾನ್, ಗುತ್ತಿಗೆದಾರ ಟಿ.ಎ. ಹನೀಫ್, ಮೂಲ್ಕಿ ರಿಕ್ಷಾ ಯೂನಿಯನ್‌ನ ಶರೀಫ್ ಕಿಲ್ಪಾಡಿ, ಕಿನ್ನಿಗೋಳಿ ಸಂಘ ಅಧ್ಯಕ್ಷ ದಾವೂದ್ ಕಲ್ಕರೆ, ವಿಕ್ಷಣೆ ವಿವರಣೆಗಾರ ಶ್ರೀಶ ಸರಾಫ್ ಐಕಳ್ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಶಶಿಕಾಂತ್ ರಾವ್ ಎಳತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಮಾರು ೨೦ ತಂಡಗಳು ಭಾಗವಹಿಸಿತ್ತು.