ಕಿರುಗಾವಲು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಏಪ್ರಿಲ್ ನಲ್ಲಿ ಚಾಲನೆ: ನರೇಂದ್ರಸ್ವಾಮಿ

| Published : Jan 26 2025, 01:31 AM IST

ಕಿರುಗಾವಲು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಏಪ್ರಿಲ್ ನಲ್ಲಿ ಚಾಲನೆ: ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿರುಗಾವಲು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುವ ಮಧ್ಯೆ ಜಾಗದ ಸಮಸ್ಯೆ ಇತ್ತು. ಇದನ್ನು ಇತ್ಯರ್ಥಪಡಿಸಿ ಭೂಮಿ ಮಾಲೀಕನ ಹೆಸರಿಗೆ ಖಾತೆ ಮಾಡಿಸಲಾಗಿದೆ. ತಕ್ಷಣವೇ ಭೂ ಮಾಲೀಕ ಸರ್ಕಾರಕ್ಕೆ ಹಸ್ತಾಂತರಗೊಳಿಸಿಕೊಂಡು ಕಾಮಗಾರಿ ಅಂತಿಮಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಕಿರುಗಾವಲು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಂತಿಮಗೊಂಡು ಈಗಾಗಲೇ ಪ್ರಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಏಪ್ರಿಲ್ ತಿಂಗಳೊಳಗೆ ಯೋಜನೆಗೆ ಚಾಲನೆ ಸಿಗಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಬೆಂಡರವಾಡಿ ಸಮೀಪ ಕಿರುಗಾವಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪಂಪ್‌ಹೌಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಮಗಾರಿ ನಡೆಯುವ ಮಧ್ಯೆ ಜಾಗದ ಸಮಸ್ಯೆ ಇತ್ತು. ಇದನ್ನು ಇತ್ಯರ್ಥಪಡಿಸಿ ಭೂಮಿ ಮಾಲೀಕನ ಹೆಸರಿಗೆ ಖಾತೆ ಮಾಡಿಸಲಾಗಿದೆ. ತಕ್ಷಣವೇ ಭೂ ಮಾಲೀಕ ಸರ್ಕಾರಕ್ಕೆ ಹಸ್ತಾಂತರಗೊಳಿಸಿಕೊಂಡು ಕಾಮಗಾರಿ ಅಂತಿಮಗೊಳಿಸಲಾಗುವುದು ಎಂದರು.

ಜಾಕ್ವಲ್‌ನಿಂದ ಪಂಪ್‌ಹೌಸ್ ವರೆವಿಗೂ ಸಂಪೂರ್ಣ ಕಾಮಗಾರಿ ಮುಗಿದಿದೆ. ಎಲ್ಲಾ ಪಂಪ್‌ಹೌಸ್‌ಗಳಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಏಪ್ರಿಲ್‌ನೊಳಗೆ ಲೋಕಾರ್ಪಣೆಗೊಳಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಕಿರುಗಾವಲು ಹೋಬಳಿ ಕೆಲವು ಗ್ರಾಪಂಗಳನ್ನು ಹೊರತುಪಡಿಸಿ ನೆಲಮಾಕನಹಳ್ಳಿ ಪಂಚಾಯ್ತಿ ಸೇರಿದಂತೆ ಕಿರುಗಾವಲು ಹೋಬಳಿಯ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ಯೋಜನೆ ಸಕಾರಗೊಳ್ಳಲು ಸಿದ್ಧಗೊಳ್ಳಲಿದೆ ಎಂದರು.

ಪೂರ್ಣ ಪ್ರಮಾಣದಲ್ಲಿ ಮೂರು ಹಂತದ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ವೀಕ್ಷಣೆ ಮಾಡಲಾಗಿದೆ. ಯೋಜನೆಯ ಉದ್ದೇಶವನ್ನು ಈಡೇರಿಸಿದ ಕಾಮಗಾರಿಯನ್ನು ನೋಡಿದ್ದೇನೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ವೇಳೆ ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ ಅಶೋಕ್, ಶಶಿ ಸೇರಿದಂತೆ ಇತರರು ಇದ್ದರು.