ದೆಹಲಿಯಲ್ಲಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವ

| Published : Oct 24 2024, 12:51 AM IST

ಸಾರಾಂಶ

ಹಲಿಯ ಲೋಕಸಭಾ 7ನೇ ಗೇಟ್ ಮುಂಭಾಗದ ಆವರಣದ ವೀರರಾಣಿ ಕಿತ್ತೂರು ಚೆನ್ನಮ್ಮನ 200ನೇ ವಿಜಯೋತ್ಸವವನ್ನು ಮೊಟ್ಟಮೊದಲ ಬಾರಿಗೆ ಲೋಕಸಭಾಧ್ಯಕ್ಷ ಓಂಪ್ರಕಾಶ ಬಿರ್ಲಾ ಚೆನ್ನಮ್ಮನ ಪುತ್ಥಳಿಗೆ ಪುಷ್ಪಾರ್ಪಣೆ ಮೂಲಕ ಅದ್ಧೂರಿ ಆಚರಣೆಗೆ ಚಾಲನೆ ನೀಡಿದ್ದಾರೆ.

ದಾವಣಗೆರೆ: ದೆಹಲಿಯ ಲೋಕಸಭಾ 7ನೇ ಗೇಟ್ ಮುಂಭಾಗದ ಆವರಣದ ವೀರರಾಣಿ ಕಿತ್ತೂರು ಚೆನ್ನಮ್ಮನ 200ನೇ ವಿಜಯೋತ್ಸವವನ್ನು ಮೊಟ್ಟಮೊದಲ ಬಾರಿಗೆ ಲೋಕಸಭಾಧ್ಯಕ್ಷ ಓಂಪ್ರಕಾಶ ಬಿರ್ಲಾ ಚೆನ್ನಮ್ಮನ ಪುತ್ಥಳಿಗೆ ಪುಷ್ಪಾರ್ಪಣೆ ಮೂಲಕ ಅದ್ಧೂರಿ ಆಚರಣೆಗೆ ಚಾಲನೆ ನೀಡಿದರು.

ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಲೆಹರ್‌ ಸಿಂಗ್, ವಿಧಾನಸಭೆ ಸದಸ್ಯ ಅರವಿಂದ ಬೆಲ್ಲದ, ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಮಾಲಿ ಪಾಟೀಲ್, ಶ್ರೀ ಪೀಠದ ಟ್ರಸ್ಟ್ ಸದಸ್ಯ ಚಂದ್ರಶೇಖರ ಪೂಜಾರ, ಯುವ ಘಟಕ ರಾಜ್ಯ ನೂತನ ಪ್ರಧಾನ ಕಾರ್ಯದರ್ಶಿ ಶೇಖರ ಮುತ್ತೇನವರ, ದೆಹಲಿ ಕನ್ನಡ ಸಂಘದ 300 ಹೆಚ್ಚು ಸದಸ್ಯರು, ರೈಲ್ವೆ ಇಲಾಖೆ ನೌಕರರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದ ಈ ಕಾರ್ಯಕ್ರಮ ಐತಿಹಾಸಿಕ ಮೊಟ್ಟ ಮೊದಲ ಬಾರಿಗೆ ಅದ್ಧೂರಿಯಾಗಿ ನಡೆಯಿತು.

- - - -23ಕೆಡಿವಿಜಿ40, 41:

ದೆಹಲಿಯ ಲೋಕಸಭೆ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಲೋಕಸಭಾಧ್ಯಕ್ಷ ಓಂಪ್ರಕಾಶ ಬಿರ್ಲಾ, ಗಣ್ಯರು ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.