ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಅಂಕಗಳಿಕೆಗಿಂತ ಜ್ಞಾನ ದೊಡ್ಡದು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ಕಮಲ ಕಿಶೋರ ಗೋವರ್ಧನ್ ದಾಸ್ ಲಡ್ಡಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂತಿಮ ವರ್ಷದ ವಿದ್ಯಾರ್ಥಿಗಳು ಹೊರಗಡೆ ಹೋಗುವಾಗ ಕೊಂಚ ಭಯವಿರುವುದು ಸಹಜ ಆದರೆ ಅದನ್ನು ಎದುರಿಸಲು ಮನೋಸ್ಥೈರ್ಯ ಅಗತ್ಯ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಜ್ಞಾನ ಅಗತ್ಯ. ಆದ್ದರಿಂದ ಧೃಢ ಸಂಕಲ್ಪದಿಂದ ಅಧ್ಯಯನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕೃತಿಕ ಘಟಕಗಳ ಸಂಚಾಲಕ ಪ್ರೊ. ಬಲಭೀಮ ದೇಸಾಯಿ ಮಾತನಾಡಿ, ನಾಲ್ಕು ಗೋಡೆ ಮಧ್ಯ ಪರಿಪೂರ್ಣ ವಿದ್ಯೆ ದೊರೆಯುವುದಿಲ್ಲ. ಸಮುದಾಯದಲ್ಲಿ ಸ್ವ ಅನುಭವದಿಂದ ದೊರೆಯುವುದೇ ಪರಿಪಕ್ವ ಶಿಕ್ಷಣವಾಗಿದೆ ಎಂದರು.
ಈ ವೇಳೆ ಸಹಾಯಕ ಉಪ ಖಜಾನಾಧಿಕಾರಿ ಸಣ್ಣಕ್ಕೆಪ್ಪ ಎಚ್. ಕೊಂಡಿಕಾರ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ,ಪ್ರೊ.ಆನಂದಕುಮಾರ ಜೋಶಿ ಮಾತನಾಡಿದರು.ಪ್ರೊ.ವಿಶ್ವನಾಥರೆಡ್ಡಿ, ಪ್ರೊ.ವೆಂಕೋಬ ಬಿರಾದಾರ್, ಪ್ರೊ.ಗುರುರಾಜ ನಾಗಲಿಕರ, ಪ್ರೊ. ಎಚ್.ಎಂ. ವಗ್ಗರ, ಪ್ರೊ.ದೇವೀಂದ್ರ ಪಾಟೀಲ್, ಪ್ರೊ.ಶಾಜಯಾ ಅಂಜುಮ್ ಶೇಟ್, ಪ್ರೊ.ಪ್ರಮೋದ ಕುಲಕರ್ಣಿ, ಪರಮಣ್ಣ ದಿವಾಣ, ಶರಣಗೌಡ ಪಾಟೀಲ, ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಇತರರಿದ್ದರು.