ದೇಶದ ಕಾನೂನು ಅರಿವು ಎಲ್ಲರಿಗೂ ಅವಶ್ಯ: ನ್ಯಾ.ವಿಜಯಕುಮಾರ

| Published : Nov 10 2024, 01:54 AM IST

ಸಾರಾಂಶ

ಲೋಕಾಪುರ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನ ನಿಮಿತ್ತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಎಂದು ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ನಮ್ಮ ದೇಶದ ಕಾನೂನು ಅರಿತು ಕೊಳ್ಳುವುದು ಪ್ರತಿಯೊಬ್ಬ ಪ್ರಜೆ ಕರ್ತವ್ಯವಾಗಿದೆ. ಕಾನೂನು ತಿಳಿದುಕೊಂಡರೆ ಸಮಾಜದಲ್ಲಿ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ಗೌರವಾನಿತ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ವಿಜಯಕುಮಾರ ಕನ್ನೂರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಆರ್‌ಬಿಜಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ, ತಾಲೂಕು ಕಾನೂನು ಸೇವಾ ಸಮಿತಿ ಮುಧೋಳ, ವಕೀಲರ ಸಂಘ ಮುಧೋಳ, ತಾಲೂಕಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನ ನಿಮಿತ್ತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರಿಗೆ ಕಾನೂನು ಅರಿವು ಬಹಳ ಮುಖ್ಯವಾಗಿದೆ. ಕಾಯ್ದೆ 1987ರಲ್ಲಿ ಕಲ್ಪಿಸಿದಂತೆ ಸಮಾಜದ ದುರ್ಬಲ ಹಾಗೂ ವಂಚಿತ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನ.9ರಂದು ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಕಾನೂನು ಅರಿತು ಸುತ್ತಮುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಕಾನೂನುನ ಬಗ್ಗೆ ಅರಿವಿದ್ದಲ್ಲಿ ಮುಂಬರುವ ದಿನಗಳಲ್ಲಿ ಅವರು ಉತ್ತಮ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವೆಂದು ಸಲಹೆ ನೀಡಿದರು.

ಮುಧೋಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಗೌ.ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರು ವಿವೇಕ ಗ್ರಾಮೋಪಾಧ್ಯೆ, ಗೌ. ಪ್ರಧಾನ ದಿವಾಣಿ ನ್ಯಾಯಾಧೀಶರು, ಮುಧೋಳ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಲಗಮಾ ಹುಕ್ಕೇರಿ, ಗೌ.ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಸರಸ್ವತಿ ಹೊಟಕರ, ಮುಧೋಳ ಸಿಪಿಐ ಎಮ್.ಎನ್. ಶಿರಹಟ್ಟಿ, ತಾಪಂ ವ್ಯವಸ್ಥಾಪಕ ಹಣಮಂತ ಭಜಂತ್ರಿ, ಕಂದಾಯ ನೀರಿಕ್ಷಕ ಸತೀಶ ಬೇವೂರ, ಮುಧೋಳ ಬಿಇಒ ಸಮೀರ ಮುಲ್ಲಾ, ಬಿಆರ್‌ಬಿ ಸಂಗಮೇಶ ನೀಲಗುಂದ, ಆರ್‌ಬಿಜಿ ಪ್ರೌಢಶಾಲೆ ಪ್ರಭಾರಿ ಮುಖ್ಯೋಪಾಧ್ಯಾಯ ಎಸ್.ಎಫ್.ನಾಯಕ, ಪಿಎಸ್‌ಐ ಕೆ.ಬಿ.ಜಕ್ಕನ್ನವರ, ಅಪರ ಸರ್ಕಾರಿ ನ್ಯಾಯವಾದಿ ಎಂ.ಎಸ್.ಹಂಚಿನಾಳ, ಸಹಾಯಕ ಸರ್ಕಾರಿ ನ್ಯಾಯವಾದಿ ಕಲ್ಲಪ್ಪ ಗಸ್ತಿ, ನ್ಯಾಯವಾದಿಗಳಾದ ಎಸ್.ಎಲ್.ಪಲ್ಲೇದ, ಎಚ್.ವೈ.ಪೂಜಾರಿ, ಎ.ಜಿ.ಮುಧೋಳ, ಟಿ.ಸಿ.ಬೆಟಸೂರ, ತಿಮ್ಮಣ್ಣ ಪಾಟೀಲ, ಎಚ್.ಬಿ. ನಡುವಿನಮನಿ, ಎಚ್.ಕೆ.ಮುಳ್ಳೂರ, ಎಂ.ಎನ್.ಗೌಡನಹಳ್ಳಿ, ಎಸ್.ಎಂ.ಪಠಾಣ, ವಕೀಲ ಸಂಘದ ಕಾರ್ಯದರ್ಶಿ ಕೆ.ಎಸ್.ಬೀಳಗಿ, ಕಾನೂನು ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿ ಶಿಕ್ಷಕ ವೃಂದ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ರಮ್ಯಾ ಹಿರೇಮಠ ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಬಿಆರ್‌ಬಿ ಸಂಗಮೇಶ ನೀಲಗುಂದ ಸ್ವಾಗತಿಸಿದರು. ಶಿಕ್ಷಕ ಎಂ.ವಿ. ಪಾಟೀಲ ವಂದಿಸಿದರು.

ಪ್ರತಿಯೊಬ್ಬರು ಅಪಘಾತ ರಹಿತ ಹಾಗೂ ಸುರಕ್ಷಿತ ಚಾಲನೆಗೆ ವಾಹನಕ್ಕೆ ಸಂಬಧಪಟ್ಟ ದಾಖಲೆಗಳು ಅವಶ್ಯಕವಾಗಿದೆ. ಜೀವ ರಕ್ಷಣೆಗೆ ಸಿಟ್ ಬೆಲ್ಟ್ ಹಾಗೂ ಹೆಲ್ಮೇಟ್ ಕಡ್ಡಾಯವಾಗಿ ಧರಿಸಬೇಕು. ವಾಹನ ಚಲಿಸುವಾಗ ಮೊಬೈಲ್ ಬಳಕೆ ಮಾಡಬಾರದು.

ಎಮ್.ಎನ್.ಶಿರಹಟ್ಟಿ, ಮುಧೋಳ ತಾಲೂಕು ಸಿಪಿಐ