ಕೊಡಗು ಜಿಲ್ಲಾ‌ಮಟ್ಟದ ಕಲೋತ್ಸವ: ಸಿದ್ದಾಪುರ ವಲಯ ಚಾಂಪಿಯನ್

| Published : Dec 06 2024, 08:56 AM IST

ಸಾರಾಂಶ

ಸಿದ್ದಾಪುರ ವಲಯ 337 ಅಂಕಗಳೊಂದಿಗೆ ಚಾಂಪಿಯನ್ ಪ್ರಶಸ್ತಿ ಪಡೆಯಿತು. ಕುಶಾಲನಗರ ವಲಯ 292 ಅಂಕಗಳನ್ನು ಪಡೆದು ದ್ವಿತೀಯ ಮತ್ತು 266 ಅಂಕಗಳನ್ನು ಪಡೆದು ವಿರಾಜಪೇಟೆ ತೃತೀಯ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸಿದ್ದಾಪುರದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಎಸ್.ಕೆ.ಎಸ್.ಎಸ್‌.ಎಫ್. ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಕಲೋತ್ಸವದಲ್ಲಿ ಸಿದ್ದಾಪುರ ವಲಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಮೂರು ವಲಯಗಳ ನಡುವೆ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸಿದ್ದಾಪುರ ವಲಯ 337 ಅಂಕಗಳೊಂದಿಗೆ ಚಾಂಪಿಯನ್ ಪ್ರಶಸ್ತಿ ಪಡೆಯಿತು.

ಕುಶಾಲನಗರ ವಲಯ 292 ಅಂಕಗಳನ್ನು ಪಡೆದು ದ್ವಿತೀಯ ಮತ್ತು 266 ಅಂಕಗಳನ್ನು ಪಡೆದು ವಿರಾಜಪೇಟೆ ತೃತೀಯ ಸ್ಥಾನ ಪಡೆಯಿತು. ಸಿದ್ದಾಪುರ ವಲಯ ಸೀನಿಯರ್ ವಿಭಾಗದಲ್ಲಿ 104 ಮತ್ತು ಸೂಪರ್ ಸೀನಿಯರ್ ವಿಭಾಗದಲ್ಲಿ 94 ಅಂಕ ಪಡೆದು ಎರಡೂ ವಿಭಾಗದಲ್ಲಿ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿದರು.

ವಿರಾಜಪೇಟೆ ವಲಯ 78 ಅಂಕಗಳನ್ನು ಪಡೆದು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.

ಕುಶಾಲನಗರ ವಲಯವು ಜನರಲ್ ಗ್ರೂಪ್ ವಿಭಾಗದಲ್ಲಿ 66 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿತು.

ಫೆಸ್ಟ್ ಐಕಾನ್ ಪ್ರಶಸ್ತಿ:

ಈ ಬಾರಿಯ ಎಸ್.ಕೆ.ಎಸ್.ಎಸ್.ಎಫ್ ಕಲೋತ್ಸವದಲ್ಲಿ ಪ್ರತಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸುವ ಪ್ರತಿಭೆಯನ್ನು ಫೆಸ್ಟ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೂನಿಯರ್ ವಿಭಾಗದಲ್ಲಿ ಸಿದ್ದಾಪುರ ವಲಯದ ನಿಹಾಲ್ (38) ಅಂಕ, ಸೀನಿಯರ್ ವಿಭಾಗದಲ್ಲಿ ವಿರಾಜಪೇಟೆ ವಲಯದ ತೌಫೀಕ್ (22) ಅಂಕ ಹಾಗೂ ಸೂಪರ್ ಸೀನಿಯರ್ ವಿಭಾಗದಲ್ಲಿ ಸಿದ್ದಾಪುರ ವಲಯದ ಇಸ್ಮಾಯಿಲ್ ಕಂಡಕರೆ 28 ಅಂಕಗಳನ್ನು ಪಡೆದು ಫೆಸ್ಟ್ ಐಕಾನ್ ಪ್ರಶಸ್ತಿ ಪಡೆದುಕೊಂಡರು.

ದರ್ಸ್ ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತ್ವಲಬಾ ವಿಭಾಗದಲ್ಲಿ ಕಲೋತ್ಸವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ನಡೆದ ತ್ವಲಬಾ ವಿಭಾಗದ ಸ್ಪರ್ಧೆಯಲ್ಲಿ ಕುಶಾಲನಗರ ವಲಯ 199 ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು.

ದ್ವಿತೀಯ ಸ್ಥಾನವನ್ನು ವಿರಾಜಪೇಟೆ ವಲಯ‌ವು 77 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆಯಿತು.

ತ್ವಲಬಾ ವಿಭಾಗದ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಕುಶಾಲನಗರ ವಲಯವು ಚಾಂಪಿಯನ್ ಪಟ್ಟ ಪಡೆಯಿತು.

ತ್ವಲಬಾ ವಿಭಾಗದಲ್ಲಿ ಜೂನಿಯರ್ ವಿಭಾಗದಲ್ಲಿ ಆಶಿಫ್ ಕುಶಾಲನಗರ ವಲಯ ಮತ್ತು ಸೀನಿಯರ್ ವಿಭಾಗದಲ್ಲಿ ಅಶ್ರಫ್ ಕುಶಾಲನಗರ ವಲಯ ಫೆಸ್ಟ್ ಐಕಾನ್ ಪ್ರಶಸ್ತಿ ಪಡೆದುಕೊಂಡಿತು.

ಕೊಡಗು ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು ಡಿ. 14 ಮತ್ತು 15ರಂದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.