ಡಿ.14ರಂದು ಕೊಡಗಿನ ‘ಹುತ್ತರಿ ಹಬ್ಬ’ ದಿನ ನಿಗದಿಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಡಿ.14ರಂದು ರಾತ್ರಿ ಕರ್ಕಾಟಕ ಲಗ್ನದ ರೋಹಿಣಿ ನಕ್ಷತ್ರದಲ್ಲಿ 7.30ಕ್ಕೆ ಪುತ್ತರಿ ಹಬ್ಬದ ನೆರೆ ಕಟ್ಟುವುದು, ರಾತ್ರಿ 8.30ಕ್ಕೆ ಕದಿರು ಕೊಯ್ಯುವುದು, ರಾತ್ರಿ 9.30ಕ್ಕೆ ಊಟೋಪಚಾರ ನಡೆಯಲಿದೆ. ಸಾರ್ವಜನಿಕರಿಗೆ ಡಿ.14 ರಂದು ರಾತ್ರಿ 7.50ಕ್ಕೆ ನೆರೆ ಕಟ್ಟುವುದು, ರಾತ್ರಿ 8.50ಕ್ಕೆ ಕದಿರು ತೆಗೆಯುವುದು ರಾತ್ರಿ 9.50ಕ್ಕೆ ಊಟೋಪಚಾರ ಸಮಯ ನಿಗದಿ ಮಾಡಿಕೊಳ್ಳಲಾಗಿದೆ.