ಸರ್ವರ್ ಸಮಸ್ಯೆ: ಫಲಾನುಭವಿಗಳಿಗೆ ಪಡಿತರ ಖೋತಾ!ಪಡಿತರದಾರರಿಗೆ ತಲಾ ೫ ಕೆ.ಜಿ. ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಆದರೆ, ಅದನ್ನು ಪಡೆಯಲು ಕೆಲಸ ಕಾರ್ಯ ಬಿಟ್ಟು, ಅಲೆಯಬೇಕಾಗಿದೆ. ಪಡಿತರ ಪಡೆಯದೆ, ಬಿಟ್ಟರೆ ನಮ್ಮ ಕಾರ್ಡ್ ರದ್ದಾಗುತ್ತದೆ. ಒಂದು ಕಡೆ ಪಡಿತರ ಪಡೆಯಲು ಆಗದೆ, ಬಿಡಲೂ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜನ ದೂರಿದ್ದಾರೆ.