ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಪುಸ್ತಕ ಪತ್ತಾಯ ಯೋಜನೆಯಡಿ ಕೊಡವ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಕೊಡಗು ಹೆಗ್ಗಡೆ ಸಮಾಜಕ್ಕೆ

ಮಡಿಕೇರಿ: ಜಿಲ್ಲೆಯಲ್ಲಿ ಕೊಡವ ಭಾಷಿಕರ ನಡುವೆ ಸಾಮರಸ್ಯ ಬೆಳೆಸುವಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮುಖ್ಯ ಪಾತ್ರ ವಹಿಸಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಪುಸ್ತಕ ಪತ್ತಾಯ ಯೋಜನೆಯಡಿ ಕೊಡವ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಕೊಡಗು ಹೆಗ್ಗಡೆ ಸಮಾಜಕ್ಕೆ ಹಸ್ತಾಂತರಿಸಿ ಮಾತನಾಡಿದರು.

ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಘಟನೆ ಬೆಳೆದಂತೆ ಸಂಸ್ಕೃತಿ ಕೂಡ ಬೆಳವಣಿಗೆಯಾಗಲಿದೆ. ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ ಶಿಕ್ಷಕಿ ಪಡಿಜ್ಞಾರಂಡ ದೇವಕ್ಕಿ ಅಚ್ಚಪ್ಪ, ಕೊಡವ ಸಂಸ್ಕೃತಿಕೆ ಸಂಬಂಧಿಸಿದ ಪುಸ್ತಕಗಳ ಓದುವಿಕೆಯಿಂದ ಜನಾಂಗದ ಬಾಂಧವರಿಗೆ ಅರಿವು ಹೆಚ್ಚಾಗಲಿದೆ. ಸಂಸ್ಕೃತಿಯ ಅರಿವು ಜೀವನಕ್ಕೆ ಬೆಳಕಾಗಲಿದೆ. ಆಧುನಿಕತೆಯಿಂದ ಓದುವ ಹವ್ಯಾಸ ಕಡಿಮೆಯಾಗಿರುವ ಕಾಲದಲ್ಲಿ ಪುಸ್ತಕ ಪತ್ತಾಯ ಕಾರ್ಯಕ್ರಮವು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆಯುತ್ತಿರುವ ಉತ್ತಮ ಕಾರ್ಯವಾಗಿದೆ ಎಂದರು.

ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಪುಸ್ತಕ ಪತ್ತಾಯ ಲೋಕಾರ್ಪಣೆಯನ್ನು ಕೊಡಗು ಹೆಗ್ಗಡೆ ಸಮಾಜದ ಮಾಜಿ ಅಧ್ಯಕ್ಷ ಪಡಿಜ್ಞಾರಂಡ ಜಿ. ಅಯ್ಯಪ್ಪ ನೆರವೇರಿಸಿದರು. ಪಂದಿಕಂಡ ಪ್ರಿಯಾ ಸೋಮಣ್ಣ ಪ್ರಾರ್ಥಿಸಿ, ಪೌಡಂಡ ಡೈಸಿ ನಿರೂಪಿಸಿದರು. ಈ ಸಂದರ್ಭ ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ರೂ.೧೦ ಸಾವಿರ ಚೆಕ್ ಅಕಾಡೆಮಿಗೆ ನೀಡಲಾಯಿತು.

ಕೊಡಗು ಹೆಗ್ಗಡೆ ಸಮಾಜದ ಗೌರವ ಕಾರ್ಯದರ್ಶಿ ಪಡಿಜ್ಞಾರಂಡ ಪ್ರಭು ಕುಮಾರ್, ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಖಜಾಂಚಿ ಕೋರಂಡ ಪ್ರಕಾಶ್ ನಾಣಯ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ನಾಯಂದೀರ ಶಿವಾಜಿ, ಕಂಬೇಯಂಡ ಡೀನಾ, ಪೊನ್ನೀರ ಗಗನ್, ಚೆಪ್ಪುಡೀರ ಉತ್ತಪ್ಪ, ಪಾನಿಕುಟ್ಟೀರ ಕುಟ್ಟಪ್ಪ ಭಾಗವಹಿಸಿದರು.