ಕೋಡಿ ಬಿದ್ದ ದಳವಾಯಿ ಕೆರೆ: ಬಾಗಿನ ಅರ್ಪಣೆ

| Published : Jul 28 2024, 02:07 AM IST

ಸಾರಾಂಶ

ತರೀಕೆರೆ: ಪಟ್ಟಣದ ಹೆಸರಾಂತ ದಳವಾಯಿ ಕೆರೆ ಮಳೆಗೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದುದರಿಂದ ಶನಿವಾರ ರೈತರು ಕೆರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತರೀಕೆರೆ: ಪಟ್ಟಣದ ಹೆಸರಾಂತ ದಳವಾಯಿ ಕೆರೆ ಮಳೆಗೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದುದರಿಂದ ಶನಿವಾರ ರೈತರು ಕೆರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಾಮ್ ಕೋಸ್ ಹಿರಿಯ ನಿರ್ದೇಶಕ ಡಾ.ಆರ್.ದೇವಾನಂದ್ ಮಾತನಾಡಿ ಬರಗಾಲದಿಂದ ಜನರು ತತ್ತರಿಸಿದ್ದರು, ಇದೀಗ ಈ ಭಾಗದಲ್ಲಿ ಚೆನ್ನಾಗಿ ಮಳೆಯಾದುದರಿಂದ ಪಟ್ಟಣದ ಕೆರೆಗಳು ನೀರಿನಿಂದ ಭರ್ತಿಯಾಗಿ ಕೋಡಿ ಬಿದ್ದಿರುವುದು ಎಲ್ಲರಿಗೂ ಸಂತೋಷ ತಂದಿದೆ. ದಳವಾಯಿ ಕೆರೆ ಭರ್ತಿಯಾಗಿರುವುದರಿಂದ ಈ ಭಾಗದ ಜಮೀನು ತೋಟ, ಹೊಲ ಗದ್ದೆ ಬೆಳೆಗಳಿಗೆ ನೀರು ಸಮೃದ್ಧವಾಗಿದೆ. ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ರೈತರು ಕೆರೆ ಕಟ್ಟೆಗಳನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜು ಮಾತನಾಡಿ ದಳವಾಯಿ ಕೆರೆ ನೀರಿನಿಂದ ಭರ್ತಿಯಾಗಿ ಕೋಡಿ ಬಿದ್ದಿರುವುದು ಎಲ್ಲರಿಗೂ ಸಂತೋಷ ತಂದಿದೆ. ಕೆರೆ ತುಂಬಿರುವುದರಿಂದ ಅಂತರ್ಜಲ ಹೆಚ್ಚಿ ತೋಟ, ಬೋರ್ ವೆಲ್ಲ್ ಗಳಲ್ಲೂ ನೀರು ತುಂಬಿ ಹರಿಯುತ್ತದೆ ಎಂದು ಹೇಳಿದರು.

ಪುರಸಭಾ ಸದಸ್ಯರಾದ ಟಿ.ಎಸ್ ಚೇತನ್, ಆನಂದ್, ಮಧು ಕುರಿಯ, ಟಿ.ಎಲ್.ತಿಮ್ಮಯ್ಯ, ಮಲ್ಲಿಕಣ್ಣ, ರೇಣುಕಣ್ಣ, ತಿಮ್ಮಣ್ಣ, ಟಿ.ಎಸ್.ಶ್ರೀಧರ್ ರೈತರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

27ಕೆಟಿಆರ್.ಕೆ.3ಃ ತರೀಕೆರೆಯಲ್ಲಿ ದಳವಾಯಿ ಕೆರೆ ಭರ್ತಿಯಾಗಿ ಕೋಡಿ ಬಿದ್ದುದರಿಂದ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು. ಮಾಮ್ ಕೋಸ್ ಹಿರಿಯ ನಿರ್ದೇಶಕ ಡಾ.ಆರ್.ದೇವಾನಂದ್, ಪುರಸಭಾ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜು, ಪುರಸಭೆ ಸದಸ್ಯ ಟಿ.ಎಸ್.ಚೇತನ್, ಆನಂದ್ ಮತ್ತಿತರರು ಇದ್ದರು.