ಸಾರಾಂಶ
ಗಾಯತ್ರಿ ಸಾಂಸ್ಕೃತಿಕ ಭವನದಲ್ಲಿ ೨೫ನೇ ವರ್ಷದ ವಾರ್ಷಿಕ ಮಹಾಸಭೆ
ಕನ್ನಡಪ್ರಭ ವಾರ್ತೆ, ಕೊಪ್ಪ:ಗಾಯಿತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿಯಮಿತ ಪ್ರಸಕ್ತ ಸಾಲಿನಲ್ಲಿ ೧೧೬.೧೩ ಕೋಟಿ ವಹಿವಾಟು ಹೆಚ್ಚಿಸಿಕೊಂಡಿದ್ದು ೩೯.೮೬ ಲಕ್ಷ ಲಾಭಗಳನ್ನು ಗಳಿಸಿದೆ ಎಂದು ಸಂಸ್ಥೆ ಅಧ್ಯಕ್ಷೆ ಮಂಗಳ ಪ್ರವೀಣ್ ಹೇಳಿದರು. ಪಟ್ಟಣದ ಗಾಯತ್ರಿ ಸಾಂಸ್ಕೃತಿಕ ಭವನದಲ್ಲಿ ನಡೆದ೨೦೨೩-೨೪ನೇ ಸಾಲಿನ ೨೫ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಣಿಪಾಲ್ ಹೆಲ್ತ್ ಕಾರ್ಡ್, ಗೋಲ್ಡ್ ಲೋನ್, ಪ್ಲೆಡ್ಜ್ ಲೋನ್‌ಗಳ ಜೊತೆಗೆ ಜೀರೋ ಪರ್ಸೆಂಟ್ ಬಡ್ಡಿ ದರದಲ್ಲಿ ಸೋಲಾರ್ ಉಪಕರಣಗಳ ಸೌಲಭ್ಯ ಇದೆ. ಮುಂದಿನ ದಿನಗಳಲ್ಲಿ ಗುಂಪು ಆರೋಗ್ಯ ವಿಮೆ, ಗುಂಪು ಜೀವ ವಿಮೆ ಮತ್ತು ರೋಗಿಗಳಿಗೆ ಡಿಸ್ಕೌಂಟ್ ರೇಟ್‌ನಲ್ಲಿ ಡಯಾಲಿಸಿಸ್ ಮಾಡಿಸುವ ಉದ್ದೇಶ ಹೊಂದಿದೆ. ಸಂಸ್ಥೆ ಬೆಳವಣಿಗೆಗೆ ಮುಖ್ಯ ಕಾರಣವಾದ ಎಲ್ಲಾ ನಿರ್ದೇಶಕರು, ವೃತ್ತಿಪರ ನಿರ್ದೇಶಕರು, ಲೆಕ್ಕಪರಿಶೋಧಕರಾಗಿರುವ ರವೀಂದ್ರ ನಾಥ್, ಮುಖ್ಯ ಕಾರ್ಯನಿರ್ವಾಹಕರು, ಎಲ್ಲಾ ಸಿಬ್ಬಂದಿ, ವಕೀಲರು ಮತ್ತು ವ್ಯವಹಾರ ನಡೆಸುತ್ತಿರುವ ಎಲ್ಲಾ ಷೇರುದಾರರಿಗೂ ಧನ್ಯವಾದ ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಎಲ್ಲಾ ಷೇರುದಾರರು ಹೆಚ್ಚಿನ ವ್ಯವಹಾರ ಮಾಡಿ, ಸಂಸ್ಥೆಯನ್ನು ಇನ್ನಷ್ಟು ಪ್ರಗತಿ ಯತ್ತ ಕೊಂಡೊಯ್ಯಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ೧೦ನೇ ತರಗತಿ ಮತ್ತು ಪಿಯುಸಿಯ ಬೇರೆ ಬೇರೆ ವಿಭಾಗದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದಂತಹ ಗಾಯತ್ರಿ ವಸಂತ್‌ರವರನ್ನು ಗೌರವಿಸಲಾಯಿತು.ಸುಮಾರು ೩೨೫ ಷೇರುದಾರರು ಸಭೆಯಲ್ಲಿ ಭಾಗವಹಿಸಿದ್ದರು.