ಸಾರಾಂಶ
ಕೊಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀಹರ್ಷ ಹರಿಹರಪುರ ಅವರ ತೋಟದ ಸಮೀಪದಲ್ಲಿದ್ದ ಶಿಲ್ಪ ಕೆತ್ತನೆಯ ಮಾಹಿತಿ ತಿಳಿದ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಇದನ್ನು ಪರಿಶೀಲಿಸಿ ಸುಮಾರು ೧೫-೧೬ನೇ ಶತಮಾನಕ್ಕೆ ಸೇರಿದ ವೀರಗಲ್ಲು ಇದೆಂದು ಮಾಹಿತಿ ನೀಡಿದ್ದಾರೆ.
ಈ ವೀರಗಲ್ಲು ೫ ಅಡಿ ಎತ್ತರ, ೨ ಅಡಿ ಅಗಲದ ನಾಲ್ಕು ಪಟ್ಟಿಕೆ ಹೊಂದಿದೆ
ಕನ್ನಡಪ್ರಭ ವಾರ್ತೆ, ಕೊಪ್ಪತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀಹರ್ಷ ಹರಿಹರಪುರ ಅವರ ತೋಟದ ಸಮೀಪದಲ್ಲಿದ್ದ ಶಿಲ್ಪ ಕೆತ್ತನೆಯ ಮಾಹಿತಿ ತಿಳಿದ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಇದನ್ನು ಪರಿಶೀಲಿಸಿ ಸುಮಾರು ೧೫-೧೬ನೇ ಶತಮಾನಕ್ಕೆ ಸೇರಿದ ವೀರಗಲ್ಲು ಇದೆಂದು ಮಾಹಿತಿ ನೀಡಿದ್ದಾರೆ.
ಈ ಸ್ಮಾರಕ ಶಿಲ್ಪದ ಅಧ್ಯಯನ ಮಾಡಿದ ನ. ಸುರೇಶ ಕಲ್ಕೆರೆ ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಈ ವೀರಗಲ್ಲು ೫ ಅಡಿ ಎತ್ತರ ೨ ಅಡಿ ಅಗಲವಾಗಿದ್ದು, ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ. ಈ ವೀರಗಲ್ಲಿನ ವಿಶೇಷತೆ ಎಂದರೆ ಒಂದೇ ವೀರಗಲ್ಲಿನಲ್ಲಿ ಇಬ್ಬರು ವೀರರು ಯುದ್ಧದಲ್ಲಿ ಹೋರಾಡಿ ಮಡಿದ ಕೆತ್ತನೆ ತೋರಿಸಲಾಗಿದೆ. ಮೊದಲ ಪಟ್ಟಿಕೆಯಲ್ಲಿ ವೀರರಿಬ್ಬರು ಕತ್ತಿ ಗುರಾಣಿ ಹಾಗೂ ಬಿಲ್ಲು ಬಾಣದ ಮೂಲಕ ಹೋರಾಟ ಮಾಡುವ ದೃಶ್ಯವಿದ್ದರೆ, ಎರಡನೆಯದರಲ್ಲಿ ಅಶ್ವದ ಮೇಲೆ ಕುಳಿತು ವೀರರು ಹೋರಾಟ ಮಾಡುವ ದೃಶ್ಯವಿದೆ. ನಂತರದ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ ಇಬ್ಬರು ವೀರರನ್ನು 2 ಪ್ರತ್ಯೇಕ ಪಲ್ಲಕ್ಕಿಯಲ್ಲಿ ಕೂರಿಸಿ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಶಿಲ್ಪ ಕೆತ್ತಲಾಗಿದೆ. ಕೊನೆ ಪಟ್ಟಿಕೆಯಲ್ಲಿ ಗಜಗಳು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಕೆತ್ತನೆ, ಮೇಲ್ಭಾಗದಲ್ಲಿ ಕೀರ್ತಿ ಮುಖದ ಜೊತೆಗೆ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಕೆತ್ತಲಾಗಿದೆ. ಅಧ್ಯಯನ ದೃಷ್ಟಿಯಿಂದ ಈ ವೀರಗಲ್ಲು ಪ್ರಮುಖ ಮಾಹಿತಿ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀಹರ್ಷ ಹರಿಹರಪುರ ತಮ್ಮ ಜಮೀನಿನ ಸಮೀಪದಲ್ಲಿದ್ದ ಸ್ಮಾರಕ ಶಿಲ್ಪದ ಮಾಹಿತಿಯನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅವರಿಗೆ ತಿಳಿಸಿದ್ದರು.ಭೂಮಿಯಲ್ಲಿ ಹೂತು ಹೋಗಿದ್ದ ಈ ವೀರಗಲ್ಲಿನ ಸಂರಕ್ಷಣೆ ಮಾಡುವಲ್ಲಿ ಮತ್ತು ಕ್ಷೇತ್ರಕಾರ್ಯದಲ್ಲಿ ಶ್ರೀಹರ್ಷ, ಮಹೇಶ್ ಶಿಲ್ಪಿ, ಶೇಷಪ್ಪ, ಹಾಗೂ ಹರಿಹರಪುರದ ಸುರೇಶ್ ಮತ್ತು ಅಭಯ್ ಸಹಕಾರ ನೀಡಿರುತ್ತಾರೆ.