ಸಾರಾಂಶ
ಕೊಪ್ಪಳ:
ಪಿಯು ಫಲಿತಾಂಶ ಸುಧಾರಣೆಗಾಗಿ ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸಿದ್ದರೂ ಸಹ ಕಳೆದ ವರ್ಷಕ್ಕಿಂತ ಸುಧಾರಣೆಯಾಗುವ ಬದಲು ಜಿಲ್ಲೆಯ ಪಿಯು ಫಲಿತಾಂಶ ಒಂದು ಸ್ಥಾನ ಕುಸಿದಿದೆ. ಕಳೆದ ವರ್ಷ 22ನೇ ಸ್ಥಾನದಲ್ಲಿದ್ದ ಜಿಲ್ಲೆ, ಪ್ರಸಕ್ತ ವರ್ಷ 23ನೇ ಸ್ಥಾನಕ್ಕೆ ಕುಸಿದಿದ್ದು, ನಿರೀಕ್ಷೆ ಹುಸಿಯಾಗಿದೆ.ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 14,331 ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 9631 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ. 67.2ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ 4700 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದರಲ್ಲಿ ಬಹುತೇಕರು ಆಂಗ್ಲ ಮತ್ತು ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾದವರೇ ಹೆಚ್ಚು. ಆಂಗ್ಲ ವಿಷಯಕ್ಕಿಂತಲೂ ಕನ್ನಡ ವಿಷಯದಲ್ಲಿ ಹೆಚ್ಚು ಅನುತ್ತೀರ್ಣರೆ ಎನ್ನುವುದು ಸೋಜಿಗದ ಸಂಗತಿ.
ನೇರವಾಗಿ ಖಾಸಗಿ ವಿದ್ಯಾರ್ಥಿಗಳಾಗಿ 519 ವಿದ್ಯಾರ್ಥಿಗಳಲ್ಲಿ 120, ಮರುಪರೀಕ್ಷೆ ಬರೆದಿದ್ದ 1102ರಲ್ಲಿ 133 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮರು ಪರೀಕ್ಷೆ ಬರೆದವರಲ್ಲಿಯೂ ತೇರ್ಗಡೆಯಾದವರ ಪ್ರಮಾಣ ತೀರಾ ಕಳೆಪೆಮಟ್ಟದ್ದಾಗಿದೆ.ವಿದ್ಯಾರ್ಥಿನಿಯರ ಮೇಲುಗೈ:
ಪ್ರಸಕ್ತ ವರ್ಷ ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 9114ರಲ್ಲಿ 5996 ವಿದ್ಯಾರ್ಥಿನಿಯರಲ್ಲಿ ತೇರ್ಗಡೆಯಾಗಿ ಶೇ. 65.79ರಷ್ಟು ಪಾಸಾಗಿದ್ದಾರೆ. ಶೇ. 56.86 ರಷ್ಚು ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ.ಕನ್ನಡ ವಿಷಯದಲ್ಲಿಯೇ ಹೆಚ್ಚು ಫೇಲು:
ಪರೀಕ್ಷೆ ಬರದೆ ವಿದ್ಯಾರ್ಥಿಗಳ ಪೈಕಿ ಶೇಕಡಾವಾರು ಲೆಕ್ಕ ಹಾಕಿದರೇ ಆಂಗ್ಲಭಾಷೆಗಿಂತಲೂ ಕನ್ನಡ ವಿಷಯದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಆಂಗ್ಲ ವಿಷಯದಲ್ಲಿ 6537 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೇ. 77.6ರಷ್ಟು ತೇರ್ಗಡೆಯಾಗಿದ್ದರೆ, ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆದ 9416 ವಿದ್ಯಾರ್ಥಿಗಳ ಪೈಕಿ ಕೇವಲ ಶೇ. 51.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಹಲವಾರು ಯೋಜನೆ ಹಾಕಿಕೊಂಡು, ಉಪನ್ಯಾಸಕರಿಗೆ ತರಬೇತಿ ನೀಡಲಾಗಿದೆ. ಆದರೂ ಫಲಿತಾಂಶ ಸುಧಾರಣೆಯಾಗದೆ ಇರುವುದು ಬೇಸರ ತಂದಿದೆ. ಮುಂದಿನ ವರ್ಷ ಫಲಿತಾಂಶ ಸುಧಾರಣೆಗೆ ಶ್ರಮಿಸಲಾಗುವುದು.ಜಗದೀಶ ಡಿಡಿಪಿಯು ಕೊಪ್ಪಳ
ಜಿಲ್ಲೆಯ ಟಾಪರ್ಕಲಾ ವಿಭಾಗ
೧. ಪಂಚಾವತಿ ಸೋಮರಡ್ಡಿ (೫೮೧), ವಿಶ್ವಚೇತನ ಪಿಯು ಕಾಲೇಜು ಸಿದ್ದಾಪುರ
೨. ಮರಿದೇವಿ ಮರಿದೇವಪ್ಪ (೫೭೭), ಸರ್ಕಾರಿ ಪಿಯು(ಬಾಲಕಿಯರ) ಕಾಲೇಜು-ತಾವರಗೇರಾ೩. ದೀಪಾ ಬಸವರಾಜ (೫೭೬), ಕೆಎಲ್‌ಇ ಪಿಯು ಕಾಲೇಜು- ಕುಕನೂರು
ವಾಣಿಜ್ಯ ವಿಭಾಗ
೧. ಗಗನಾ ಕುರಗೋಡ (೫೯೪), ವಿದ್ಯಾನಿಕೇತನ ಪಿಯು ಕಾಲೇಜು-ಶ್ರೀರಾಮನಗರ
೨. ವೈಷ್ಣವಿ ಕಾಟ್ವೇ (೫೯೩), ಜನತಾರಾಣಿ ಪಿಯು ಕಾಲೇಜು-ವಿದ್ಯಾನಗರ ಗಂಗಾವತಿ೩. ಭೂಮಿಕಾ (೫೯೧), ಜನತಾರಾಣಿ ಪಿಯು ಕಾಲೇಜು-ವಿದ್ಯಾನಗರ ಗಂಗಾವತಿ
೪. ಶ್ರೇಯಾ ಪಲ್ಲೇದ (೫೯೧), ರಡ್ಡಿವೀರಣ್ಣ ಪಿಯು ಕಾಲೇಜು-ಮರ್ಲಾನಹಳ್ಳಿ
ವಿಜ್ಞಾನ ವಿಭಾಗ
೧. ಕೆ. ರಾಜಶೇಖರ (೫೯೪), ವಿದ್ಯಾನಿಕೇತನ ಪಿಯು ಕಾಲೇಜು-ಶ್ರೀರಾಮನಗರ
೨. ಕಿರಣಕುಮಾರ (೫೯೪), ವಿದ್ಯಾನಿಕೇತನ ಪಿಯು ಕಾಲೇಜು-ಶ್ರೀರಾಮನಗರ೩. ಪೂರ್ಣಿಮಾ ಆದೋನಿ (೫೯೪) ವಿದ್ಯಾನಿಕೇತನ ಪಿಯು ಕಾಲೇಜು-ಶ್ರೀರಾಮನಗರ
೪. ಬಿ. ಸಿಂಚನಾ (೫೯೨) ವಿದ್ಯಾನಿಕೇತನ ಪಿಯು ಕಾಲೇಜು ಶ್ರೀರಾಮನಗರ
೫. ಜಯತೀರ್ಥ (೫೯೨) ವಿದ್ಯಾನಿಕೇತನ ಪಿಯು ಕಾಲೇಜು-ಗಂಗಾವತಿ
೬. ಗೌತಮ್ (೫೯೧), ವಿದ್ಯಾನಿಕೇತನ ಪಿಯು ಕಾಲೇಜು-ಶ್ರೀರಾಮನಗರ೭. ರಕ್ಷಿತ್ ದೇಶಪಾಂಡೆ (೫೯೧) ವಿದ್ಯಾನಿಕೇತನ ಪಿಯು ಕಾಲೇಜು-ಗಂಗಾವತಿ