ಕೊಪ್ಪಳ ಉಪನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಒತ್ತಾಯ

| Published : Jan 05 2024, 01:45 AM IST

ಕೊಪ್ಪಳ ಉಪನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಉಪನೋಂದಣಿ ಕಚೇರಿಯಲ್ಲಿ ಖರೀದಿ ನೋಂದಣಿ, ಮಾರಾಟ, ಆಸ್ತಿ ಭೋಜ ಇತರೆ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಉಪ ನೋಂದಣಿ ಕಚೇರಿಗೆ ತೆರಳುತ್ತಾರೆ. ಆದರೆ ಅಧಿಕಾರಿಗಳು ಸರ್ಕಾರದ ಶುಲ್ಕ ಹೊರತು ಪಡಿಸಿ ತಮಗೆ ಮನಬಂದಂತೆ ಹಣ ಪಡೆಯುತ್ತಿದ್ದಾರೆ.

ಕೊಪ್ಪಳ: ತಾಲೂಕಿನ ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ತಡೆಹಿಡಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ತಾಲೂಕಿನ ಉಪನೋಂದಣಿ ಕಚೇರಿಯಲ್ಲಿ ಖರೀದಿ ನೋಂದಣಿ, ಮಾರಾಟ, ಆಸ್ತಿ ಭೋಜ ಇತರೆ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಉಪ ನೋಂದಣಿ ಕಚೇರಿಗೆ ತೆರಳುತ್ತಾರೆ. ಆದರೆ ಅಧಿಕಾರಿಗಳು ಸರ್ಕಾರದ ಶುಲ್ಕ ಹೊರತು ಪಡಿಸಿ ತಮಗೆ ಮನಬಂದಂತೆ ಹಣ ಪಡೆಯುತ್ತಿದ್ದಾರೆ. ಜಮೀನು ಮಾಲೀಕರಲ್ಲಿ ಹಾಗೂ ನೋಂದಣಿಯ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸಗಾರರನ್ನು ಇಟ್ಟುಕೊಂಡು ಹಳ್ಳಿಗಳಿಂದ ಬರುವ ಜನರಲ್ಲಿ ಸಾವಿರಾರು ರುಪಾಯಿ ವಸೂಲಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.ಕರವೇ ಜನಸೇನೆ ಜಿಲ್ಲಾಧ್ಯಕ್ಷ ಬಸವರಡ್ಡಿ ಶಿವನಗೌಡ್ರ, ಪ್ರಮುಖರಾದ ಪರಶುರಾಮ, ಪ್ರಭುರಾಜ ಕರ್ಲಿ, ವಿನಯಕುಮಾರ್ ಅಡಿವಿಬಾವಿ, ನಾಗಲಿಂಗ ನಾಯಕ್, ಸಿದ್ದು ಅಂಗಡಿ, ಶಿವಣ್ಣ, ಆನಂತ ಕುಮಾರ ಜಂತಕಲ್‌, ಕಾಸಿಂಸಾಬ ಕುಷ್ಟಗಿ ಇದ್ದರು.