ಶಿಕ್ಷಣ ನೀಡುವುದು ಪುಣ್ಯದ ಕೆಲಸ. ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಇಂದಿನ ಶಿಕ್ಷಣದ ತಳಹದಿ ಮೇಲೆ ನಿಂತಿದೆ. ಇಂತಹ ಅಮೂಲ್ಯ ಸೇವೆ 50 ವರ್ಷಗಳ ನಿರಂತರ ಸಲ್ಲಿಸುತ್ತಿರುವ ಬಿ.ಎಂ ಕೋರೆ ಅವರು ಗಡಿಭಾಗದ ಶಿಕ್ಷಣ ಕ್ರಾಂತಿಯ ಹರಿಕಾರ ಎಂದು ಸಂಸದ ರಮೇಶ ಜಿಗಜಿಣಗಿ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಚಡಚಣ
ಶಿಕ್ಷಣ ನೀಡುವುದು ಪುಣ್ಯದ ಕೆಲಸ. ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಇಂದಿನ ಶಿಕ್ಷಣದ ತಳಹದಿ ಮೇಲೆ ನಿಂತಿದೆ. ಇಂತಹ ಅಮೂಲ್ಯ ಸೇವೆ 50 ವರ್ಷಗಳ ನಿರಂತರ ಸಲ್ಲಿಸುತ್ತಿರುವ ಬಿ.ಎಂ ಕೋರೆ ಅವರು ಗಡಿಭಾಗದ ಶಿಕ್ಷಣ ಕ್ರಾಂತಿಯ ಹರಿಕಾರ ಎಂದು ಸಂಸದ ರಮೇಶ ಜಿಗಜಿಣಗಿ ಎಂದು ಹೇಳಿದರು.ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷ ಬೇರೆ ಬೇರೆಯಾದರು. ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಶ್ರಮಿಸಬೇಕು ಎಂದರು.
ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಂ.ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, 1974ರಲ್ಲಿ ಪ್ರಾರಂಭವಾದ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ಈಗ 50 ವರ್ಷದ ಸುವರ್ಣ ಮಹೋತ್ಸ ಆಚರಿಸಲು ನಮಗೆ ಸಂಭ್ರಮವೇನಿಸುತ್ತಿದೆ. ಈ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾವಿರಾರು ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗುತ್ತೇನೆ ಎಂದರು.ಸುವರ್ಣ ಮಹೋತ್ಸವದ ಕಾರ್ಯಾಧ್ಯಕ್ಷ ನಾಗಠಾಣ ಶಾಸಕ ವಿಠಲ ಕಟಕದೊಂಡ ಶ್ರೀ ಸಿದ್ದೇಶ್ವರ ಸಂಸ್ಥೆಯ 50 ವರ್ಷದ ಶಿಕ್ಷಣದ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ, ಗಡಿ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿರುವ ಬಿ.ಎಂ ಕೋರೆ ಅವರು, ತಮ್ಮ 27ನೇ ವಯಸ್ಸಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅಂದು ಸ್ಥಾಪಿಸಿದ ಈ ಸಂಸ್ಥೆ ಇಂದು ಹೆಮ್ಮರವಾಗಿ 11 ಅಂಗ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಶ್ಲಾಘನೀಯ. ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿಗಳ ಉತ್ಸಾಹ, ಇಟ್ಟಿರುವ ನಂಬಿಕೆ ಈ ಕಾರ್ಯಕ್ರಮ ಎತ್ತಿ ತೋರಿಸುತ್ತಿದೆ. ಈ ಸಂಸ್ಥೆಯಲ್ಲಿ ಇನ್ನೂ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉತ್ತಮ ಹುದ್ದೇ ಏರಿ ಹಾಗೂ ಸಂಸ್ಥೆ ಶತಮಾನೋತ್ಸವ ಆಚರಿಸುವಂತಾಗಲಿ ಎಂದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಗಡಿಭಾಗದಲ್ಲಿ ಸುಮಾರು 50 ವರ್ಷಗಳಿಂದ ಗುಣಾತ್ಮ ಶಿಕ್ಷಣ ನೀಡುವಲ್ಲಿ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ನೀಡುತ್ತರುವ ಕಾರ್ಯ ಶ್ಲಾಘನೀಯ, ಶಿಕ್ಷಣ ಸಮಾಜ ಪರಿವರ್ತನೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದರು.ವಿಜಯಪುರ-ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಮಾಜಿ ಶಾಸಕರು ಮನೋಹರ ಐನಾಪೂರ, ಮಾಹದೇವ ಸಾಹುಕರ ಬೈರಗೊಂಡ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣಾ ಕೌಲಗಿ, ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ರಾಘವೇಂದ್ರ ಕಾಪಸೆ, ಸಣ್ಣಪ್ಪ ತಳವಾರ, ಎಚ್.ಆರ್ ಉಟಗಿ, ಬಾಮರಾಯ ಲೋಣಿ, ಶ್ರೀನಿವಾಸ ಕುಲಕರ್ಣಿ, ಶಾಹಾಜಿ ಮಿಸಾಳೆ, ಸೋಮಶೇಖರ ಮಾಳಾಬಾಗಿ, ಶಶಿಧರ ಕಲ್ಯಾಣಶೆಟ್ಟಿ ದ್ಯಾಮಗೊಳ ಕಾಂಬಳೆ, ನಾರಾಯಣ ಜಾಗೀರದಾರ, ಸಿದ್ದಾರಾಮ ನಿಚ್ಚಳ ಬಾಬುಗೌಡ ಪಾಟೀಲ( ಚಡಚಣ), ಆರ್.ಡಿ.ಹಕ್ಕೆ.ರವಿ ಖಾನಪುರ, ಇತತರು ಇದ್ದರು.
ನಿವೃತ್ತ ಶಿಕ್ಷಕರಿಗೆ ಸಾರೋಟ ಮೆರವಣಿಗೆಶನಿವಾರ ಬೆಳಗ್ಗೆ 9 ಗಂಟೆಗೆ ಗ್ರಾಮದ ಶ್ರೀ ಸಿದ್ದೇಶ್ವರ ದೇವಾಸ್ಥಾನದಿಂದ ಶಾಲೆಯ ವರೆಗೆ ಸುಮಾರು 20 ನಿವೃತ್ತ ಶಿಕ್ಷಕರನ್ನು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು. ಮೆರವಣಿಗೆ ದಾರಿಯುದ್ದಕ್ಕೂ ಹೂ, ರಂಗೋಲಿಯೊಂದಿಗೆ ಸಿಂಗರಿಸಲಾಗಿತ್ತು. ನೆಚ್ಚಿನ ವಿದ್ಯಾರ್ಥಿಗಳಿಂದ ಹೂ ಮಳೆ ಸುರಿಯುತ್ತಾ ಸಾಗುತ್ತಿರುವ ದೃಶ್ಯ ಎಲ್ಲರ ಮನ ಸೆಳೆಯಿತು. ವಿವಿಧ ಕಲಾ ತಂಡಗಳಿಂದ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.