ಕೋಟ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಸಂಪನ್ನ

| Published : Sep 18 2024, 02:03 AM IST

ಕೋಟ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ನಡೆಯಿತು. ಹೋಮಕ್ಕೆ ಮೊದಲು ಬೆಳಗ್ಗೆ ಲಕ್ಷ್ಮೀಕಾಂತ್ ಶರ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ಸಾಲಿಗ್ರಾಮದ ಶ್ರೀ ವಿರಾಟ್‌ ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ವಿಶ್ವಕರ್ಮ ಕಲಾವೃಂದ, ವಿಶ್ವಜ್ಯೋತಿ ಮಹಿಳಾ ಬಳಗ ಆಶ್ರಯದಲ್ಲಿ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.ಹೋಮಕ್ಕೆ ಮೊದಲು ಬೆಳಗ್ಗೆ ಲಕ್ಷ್ಮೀಕಾಂತ್ ಶರ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಪೂಜಾ ಕಾರ್ಯದಲ್ಲಿ ಸಂಘದ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ ದಂಪತಿ ನೇತೃತ್ವ ವಹಿಸಿದ್ದರು. ಪೂಜಾ ವಿಧಿವಿಧಾನ ಕಾರ್ಯದಲ್ಲಿ ಕೋಟದ ಶ್ರೀ ಗುರುಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ ಭಾಗಿಯಾದರು.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿಶ್ವಜ್ಯೋತಿ ಮಹಿಳಾ ಬಳಗದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, ಕಲಾ ವೇದಿಕೆ ತಂಡದಿಂದ ನೃತ್ಯ ಗಾನ ವೈಭವ, ಸುವಿನ್ಯ ಆಚಾರ್ ಮಂಗಳೂರು ತಂಡದಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕೇಶವ ಆಚಾರ್, ಕೋಶಾಧಿಕಾರಿ ರಮೇಶ್ ಆಚಾರ್ ಚೇಂಪಿ, ವಿಶ್ಚಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ ಸಾಲಿಗ್ರಾಮ, ಕಾರ್ಯದರ್ಶಿ ನಿತ್ಯಾನಂದ ಆಚಾರ್ ಕೋಟ, ಕೋಶಾಧಿಕಾರಿ ರಾಘವೇಂದ್ರ ಆಚಾರ್ ಚೇಂಪಿ, ವಿಶ್ವಜ್ಯೋತಿ ಬಳಗದ ಅಧ್ಯಕ್ಷೆ ಸವಿತಾ ಚಂದ್ರಶೇಖರ್ ಆಚಾರ್, ಕಾರ್ಯದರ್ಶಿ ವಾಣಿ ಸುರೇಶ್ ಆಚಾರ್, ಕೋಶಾಧಿಕಾರಿ ಸುಶೀಲ ಸತೀಶ್ ಆಚಾರ್ ಮತ್ತಿತರರು ಇದ್ದರು.