ಸಾರಾಂಶ
ಮಾಗಡಿ: ನವರಾತ್ರಿ ಅಂಗವಾಗಿ ಕೋಟೆ ಮಾರಮ್ಮ ದೇವಿ ನವರಾತ್ರಿ ಉತ್ಸವ ಸೇವಾ ಟ್ರಸ್ಟ್ ವತಿಯಿಂದ 11 ದಿನಗಳ ಕಾಲ ನವರಾತ್ರಿ ಆಚರಿಸಿ, ಗುರುವಾರ ಕೋಟೆ ಮಾರಮ್ಮದೇವಿ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿರಿಸಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ವಿಜಯದಶಮಿ ಅಂಗವಾಗಿ ದೇವಿಗೆ ಚಾಮುಂಡೇಶ್ವರಿ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಕೋಟೆ ಮಾರಮ್ಮ ದೇವಸ್ಥಾನದಿಂದ ಸರ್ಕಾರಿ ಬಸ್ ನಿಲ್ದಾಣ, ಕೆಂಪೇಗೌಡ ವೃತ್ತ, ಆರ್ ಆರ್ ರಸ್ತೆ ಮೂಲಕ ಡೂಮ್ ಲೈಟ್ ವೃತ್ತದಿಂದ ಮಾಗಡಿ-ಬೆಂಗಳೂರು ಮುಖ್ಯ ರಸ್ತೆಯ ಮುಖ್ಯ ಮೂಲಕ ಕಲ್ಯಾಗೇಟ್ ವೃತ್ತದಿಂದ ಡಾ. ರಾಜಕುಮಾರ್ ರಸ್ತೆ ಮುಖಾಂತರ ಮೆರವಣಿಗೆ ಮಾಡಲಾಯಿತು.ಸಂಜೆ 5.30ರ ಸಮಯದಲ್ಲಿ ಕಲ್ಯಾಗೇಟ್ ವೃತ್ತದಿಂದ ಮೆರವಣಿಗೆ ಹೊರಡುತ್ತಿದ್ದಂತೆ ಮಳೆ ಬಂದು ಮಳೆ ನಿಲ್ಲುವವರೆಗೂ ರಸ್ತೆಯಲ್ಲೇ ಉತ್ಸವಮೂರ್ತಿ ನಿಲ್ಲುವಂತಾಯಿತು. ಕೋಟೆ ಮಾರಮ್ಮ ದೇವಿಯ ನವರಾತ್ರಿ ಉತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು. ಕೇರಳದ ಚಂಡಿ ಮದ್ದಳೆ, ನವದುರ್ಗಿ ವೇಷ, ಮೈಸೂರು ನಗಾರಿ, ಹುಲಿ ವೇಷ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಗರುಡಿ ಗೊಂಬೆ ಕುಣಿತ, ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ನೆರವೇರಿಸಲಾಯಿತು. ನವರಾತ್ರಿ ಉತ್ಸವದ ಮೆರವಣಿಗೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))