ಸಾರಾಂಶ
ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿಯೂ ಸಹ ಓಸಾಟ್ ಸಂಸ್ಥೆಯು ೬.೫ ಕೋಟಿ ರೂಗಳ ವೆಚ್ಚದಲ್ಲಿ ಶಾಲಾ ಸಂಕೀರ್ಣ ನಿರ್ಮಿಸಿ ಕೊಡುತ್ತಿದೆ. ನಾವು ಜವಾಬ್ದಾರಿ ವಹಿಸಿಕೊಂಡರೆ ಸಾಮಾನ್ಯ ವರ್ಗದ ಮಕ್ಕಳು ಸರಕಾರಿ ಶಾಲೆಗಳಿಗೆ ಬರುತ್ತಾರೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಪರಿಸರ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡಬೇಕಾಗಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ದೊಡ್ಡಶಿವಾರ ಪ್ರೌಢಶಾಲಾ ಸಂಕೀರ್ಣದಲ್ಲಿಯೇ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜು ಪ್ರಾರಂಭಿಸಲು ಗ್ರಾಮಸ್ಥರು ಮನವಿ ಮಾಡಿದ್ದು, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ತಾಲೂಕಿನ ದೊಡ್ಡಶಿವಾರ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಾಲಾರೂಪಾಂತರ ಕೆಲಸ ಫಸ್ಟ್ ಅಮೆರಿಕನ್ ಇಂಡಿಯಾ ಪ್ರೆವೇಟ್ ಲಿಮಿಟೆಡ್ ಸಿಎಸ್‌ಆರ್ ಸೆಹಗಲ್ ನೇತೃತ್ವದಲ್ಲಿ ಶಾಲಾ ರೂಪಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿಎಸ್‌ಆರ್ ಅನುದಾನ ಬಳಕೆ
ತಾಲೂಕಿನಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಎಸ್‌ಎಂ.ಸೆಹೆಗಲ್ ಫೌಂಡೇಶನ್ ಸಂಸ್ಥೆಯು ಗ್ರಾಮ ಸಮುದಾಯದ ಬೆಂಬಲದೊಂದಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ. ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಿಗೆ ಅತಿ ಹೆಚ್ಚು ಸಿಎಸ್‌ಆರ್ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.ತಾಲೂಕಿನ ಮಾಸ್ತಿ ಗ್ರಾಮದಲ್ಲಿಯೂ ಸಹ ಓಸಾಟ್ ಸಂಸ್ಥೆಯು ೬.೫ ಕೋಟಿ ರೂಗಳ ವೆಚ್ಚದಲ್ಲಿ ಶಾಲಾ ಸಂಕೀರ್ಣ ನಿರ್ಮಿಸಿ ಕೊಡುತ್ತಿದೆ. ನಾವು ಜವಾಬ್ದಾರಿ ವಹಿಸಿಕೊಂಡರೆ ಸಾಮಾನ್ಯ ವರ್ಗದ ಮಕ್ಕಳು ಸರಕಾರಿ ಶಾಲೆಗಳಿಗೆ ಬರುತ್ತಾರೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಪರಿಸರ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.ಎರಡು ಕೊಠಡಿ ನಿರ್ಮಾಣ
ಪಟ್ಟಣದ ಬಾಲಕರ ಕಾಲೇಜು ಅರಳೇರಿ,ಮಡಿವಾಳ, ದೊಡ್ಡ ಶಿವಾರ ಶಾಲೆಗಳು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಉತ್ತಮ ಪರಿಸರ ಮತ್ತು ಶಿಕ್ಷಕರು ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದ್ದಾರೆ.ಇಲ್ಲಿನ ಶಾಲಾಸಂಕೀರ್ಣದಲ್ಲಿ ಎರಡು ಕೊಠಡಿಗಳಿಗೆ ಗುದ್ದಲಿ ಪೂಜೆ ಮಾಡಿದ್ದೇವೆ ಅದನ್ನು ಪೂರ್ಣಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ನಾಗರಾಜ್, ಫಸ್ಟ್ ಅಮೆರಿಕನ್ ಟೈಟಲ್ ಇನ್ಸೂರೆನ್ಸ್ ಕಂಪನಿ ಅಧ್ಯಕ್ಷ ಕೆವಿನ್ ವಾಲ್, ಸೆಹೆಗಲ್ ಸಂಸ್ಥೆಯ ಸುಚಿ ಸಿಂಗ್, ಎಸ್‌ಡಿ.ಎಂಸಿ. ಅಧ್ಯಕ್ಷ ಅಶೋಕ್‌ರೆಡ್ಡಿ, ವಿಡಿಸಿ ಸಮಿತಿ ಅಧ್ಯಕ್ಷ ಎಸ್.ಎನ್. ರಘುನಾಥ್, ಉಪಾಧ್ಯಕ್ಷ ರಾಮಸ್ವಾಮಿರೆಡ್ಡಿ ಕ್ಷೇತ್ರ ಶಿಕ್ಷಣಾಕಾರಿ ಚಂದ್ರಕಲಾ, ಗ್ರಾ. ಪಂ. ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸುನೀತ ನಾಗರಾಜ್ ಇನ್ನಿತರರು ಹಾಜರಿದ್ದರು.