ರೈತರಿಗೆ ಕ್ರಮಬದ್ದ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ದೊರಕುವಂತೆ ಮಾಡುವ ಉದ್ದೇಶದಿಂದ ಈ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದೆ. ರೈತರು ಮಣ್ಣಿಗೆ ಸೂಕ್ತ ಬೆಳೆ ಮತ್ತು ತಳಿ ಆಯ್ಕೆ, ಬಿತ್ತನೆ, ಬೆಳೆ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಸೇರಿದಂತೆ ಪಶುಪಾಲನೆ, ಜೇನು ಸಾಕಾಣಿಕೆ, ಅಣಬೆ ಹಾಗೂ ಅಜೋಲಾ ಕೃಷಿ ಮುಂತಾದ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ಪಡೆಯಬಹುದಾಗಿದೆ. ಇದೇ ಹೆಸರಿನಲ್ಲಿ ಕೃಷಿ ಸ್ಪಂದನ ವೆಬ್ ಸೈಟ್ ಕೂಡ ಪ್ರಾರಂಭಿಸಲಾಗಿದ್ದು, ರೈತರು ತಮ್ಮ ಮೊಬೈಲ್ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳ ವತಿಯಿಂದ ಉಮ್ಮತ್ತೂರು ಕೃಷಿ ಶಾಲೆಯ ಆವರಣದಲ್ಲಿ ರೈತರಿಗಾಗಿ ಕೃಷಿ ಸ್ಪಂದನ ಕೃಷಿ ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.ರೈತರಿಗೆ ಕ್ರಮಬದ್ದ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ದೊರಕುವಂತೆ ಮಾಡುವ ಉದ್ದೇಶದಿಂದ ಈ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದೆ. ರೈತರು ಮಣ್ಣಿಗೆ ಸೂಕ್ತ ಬೆಳೆ ಮತ್ತು ತಳಿ ಆಯ್ಕೆ, ಬಿತ್ತನೆ, ಬೆಳೆ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಸೇರಿದಂತೆ ಪಶುಪಾಲನೆ, ಜೇನು ಸಾಕಾಣಿಕೆ, ಅಣಬೆ ಹಾಗೂ ಅಜೋಲಾ ಕೃಷಿ ಮುಂತಾದ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ಪಡೆಯಬಹುದಾಗಿದೆ.
ಇದೇ ಹೆಸರಿನಲ್ಲಿ ಕೃಷಿ ಸ್ಪಂದನ ವೆಬ್ ಸೈಟ್ ಕೂಡ ಪ್ರಾರಂಭಿಸಲಾಗಿದ್ದು, ರೈತರು ತಮ್ಮ ಮೊಬೈಲ್ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.ಆರ್‌ಎಡಬ್ಲ್ಯೂಇ ಸಂಯೋಜಕ ಡಾ.ಜಿ.ನಾಗೇಶ್ ಮಾತನಾಡಿ, ರೈತರು ಕೃಷಿ ಸ್ಪಂದನ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ತಮಗೆ ಅಗತ್ಯವಿರುವ ಮಾಹಿತಿ ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಡಾ. ದೇವರಾಜು, ಡಾ. ಚಂದ್ರಶೇಖರ್ ಎಸ್. ಕಳ್ಳಿಮನಿ, ಡಾ.ರಾಷ್ಟ್ರರಕ್ಷಕ ಕೃಷಿ ಮಾಹಿತಿ ಕೇಂದ್ರದ ಮಹತ್ವ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.ಡಾ.ವಾಘ್ಮೋರೆ ವಿಜಯಕುಮಾರ್, ಡಾ. ಶರಣಪ್ಪ, ನಿತ್ಯಾನಂದ, ಉಮ್ಮತ್ತೂರಿನ ಕಲಾವಿದರಾದ ಬಸವರಾಜ್ ಹಾಜರಿದ್ದರು. --------------
3ಸಿಎಚ್ಎನ್8:ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ರೈತರ ಮಾಹಿತಿಗಾಗಿ ಕೃಷಿ ಸ್ಪಂದನ ಮಾಹಿತಿ ಕೇಂದ್ರ ಆರಂಭಿಸಲಾಯಿತು.