ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ರಾಯಲ್ ಕಾಲನಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.ಕಾಲನಿಯಲ್ಲಿರುವ ಶ್ರೀವಿಠಲ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಹಾಕಿ ತೂಗುವ ಮೂಲಕ ಸುಮಂಗಲೆಯರು ಕೃಷ್ಣನಿಗೆ ಬೆಳಿಗ್ಗೆ ಲಾಲಿ ಹಾಡನ್ನು ಹಾಡಿದರು. ಪುಟ್ಟ ಪುಟ್ಟ ಮಕ್ಕಳು ಕೂಡ ಕೃಷ್ಣ ದೇವಸ್ಥಾನದಲ್ಲಿ ನಾಮ ಸ್ಮರಣೆಯ ಕೀರ್ತನೆಗಳನ್ನು ವಿವಿಧ ಧಾರ್ಮಿಕ ಹಾಡುಗಳ ಮೂಲಕ ಗಮನ ಸೆಳೆದರು. ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ , ಸುಪ್ರಭಾತ ಜಲಾಭಿಷೇಕ ಬಳಿಕ ಕೃಷ್ಣನಿಗೆ ಆರತಿ ಬೆಳಗಿ ಮಹಾಭಿಷೇಕ, ಪಂಚಾಮೃತಭಿಷೇಕ ನೆರವೇರಿತು.ಕೃಷ್ಣನ ಉತ್ಸವ ಮೂರ್ತಿಯನ್ನು ರಾಯಲ್ ಕಾಲನಿಯಲ್ಲಿ ಪ್ರದಕ್ಷಿಣೆ ನಡೆಸಿ ಮನೆ ಮನೆಗೂ ಕರೆದೊಯ್ದು ದರ್ಶನ ನೀಡಿಸಲಾಯಿತು. ಮನೆಗೆ ಬಂದ ಕೃಷ್ಣನ ಉತ್ಸವ ಮೂರ್ತಿಗೆ ಭಕ್ತರು ಹಾಲು ಮೊಸರು ನೀಡಿ ಆರತಿ ಬೆಳಗಿದರು. ಈ ವೇಳೆ ಮಹಿಳೆಯರು ಮಹಿಳೆಯರು ಕೋಲಾಟದ ಜೊತೆಗೆ ಭಕ್ತಿ ಗೀತೆಗಳನ್ನು ಹಾಡೋ ಮೂಲಕ ಸಂಭ್ರಮಿಸಿದರು.
ದಾಸವಾಣಿ ಸಂಗೀತ ಕಾರ್ಯಕ್ರಮ:ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸಂಜೆ ರಾಯಲ್ ಕಾಲೋನಿಯ ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ
ಬಳ್ಳಾರಿಯ ಸಪ್ತಸ್ವರ ಕಲಾ ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾ ರಘುನಾಥ್, ವಿಭಾ ಆರ್ ಕುಲಕರ್ಣಿ, ಜಯತೀರ್ಥ ಜಹಾಗಿರದಾರ್, ಮುಕುಂದ್ ಜಹಗೀರದಾರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆದವು.ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಪ್ರಕಾಶ ರಾವ್, ಜಿ.ವಿ.ಪಟವಾರಿ, ರಘುರಾಮ, ಕೃಷ್ಣಮೂರ್ತಿ ಉದಯ, ಪ್ರಾಣೆಶ್, ರಾಘವೇಂದ್ರ ರಾವ್ , ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತಾ, ಹರಿಪ್ರಿಯಾ,ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ, ಪೂರ್ಣಿಮಾ ಸೇರಿದಂತೆ ರಾಯಲ್ ಕಾಲನಿಯ ಭಕ್ತವೃಂದ ಭಾಗವಹಿಸಿದ್ದರು.
26ಬಿಆರ್‌ವೈ3ಬಳ್ಳಾರಿಯ ರಾಯಲ್ ಕಾಲನಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
( ಈ ಸುದ್ದಿ, ಫೋಟೋ ತಪ್ಪದೆ ತೆಗೆದುಕೊಳ್ಳುವುದ. ಸುವರ್ಣ ರಿಪೋರ್ಟರ್ ಕಾಲನಿಯ ಸುದ್ದಿ )