ಕೃಷ್ಣೆಯ ಪಾಲಾದ ವ್ಯಕ್ತಿ?: ರಕ್ಷಣಾ ಕಾರ್ಯ ಜೋರು

| Published : Jul 28 2024, 02:07 AM IST

ಸಾರಾಂಶ

ಜಮಖಂಡಿ: ತಾಲೂಕಿನ ಆಲಗೂರು ಗ್ರಾಮದ ಬಳಿ ಜಮೀನಿಗೆ ಮೇವು ತರಲು ತೆರಳಿದ್ದ ವ್ಯಕ್ತಿಯೊಬ್ಬ ಕೃಷ್ಣಾ ನದಿ ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಆಲಗೂರಿನ ಸಿದ್ದಪ್ಪ ಅಡವಳ್ಳಿ(55) ನೀರು ಪಾಲಾಗಿರುವ ಸಾಧ್ಯತೆ ಇದೆ. ಈತ ಶುಕ್ರವಾರ ಸಂಜೆ ಮೇವು ತರಲೆಂದು ನದಿ ದಡದಲ್ಲಿರುವ ತಮ್ಮ ಜಮೀನಿಗೆ ತೆರಳಿದ್ದು, ಆತ ಮರಳಿ ಮನೆಗೆ ಬಂದಿಲ್ಲ. ಸಿದ್ದಪ್ಪ ತಮ್ಮ ಜಮೀನಿಗೆ ಹೋಗುವಾಗ ನೀರು ಬಂದಿರಲಿಲ್ಲ, ಸಂಜೆ ಹೊತ್ತಿಗಾಗಲೇ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ಜಮಖಂಡಿ: ತಾಲೂಕಿನ ಆಲಗೂರು ಗ್ರಾಮದ ಬಳಿ ಜಮೀನಿಗೆ ಮೇವು ತರಲು ತೆರಳಿದ್ದ ವ್ಯಕ್ತಿಯೊಬ್ಬ ಕೃಷ್ಣಾ ನದಿ ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಆಲಗೂರಿನ ಸಿದ್ದಪ್ಪ ಅಡವಳ್ಳಿ(55) ನೀರು ಪಾಲಾಗಿರುವ ಸಾಧ್ಯತೆ ಇದೆ. ಈತ ಶುಕ್ರವಾರ ಸಂಜೆ ಮೇವು ತರಲೆಂದು ನದಿ ದಡದಲ್ಲಿರುವ ತಮ್ಮ ಜಮೀನಿಗೆ ತೆರಳಿದ್ದು, ಆತ ಮರಳಿ ಮನೆಗೆ ಬಂದಿಲ್ಲ. ಸಿದ್ದಪ್ಪ ತಮ್ಮ ಜಮೀನಿಗೆ ಹೋಗುವಾಗ ನೀರು ಬಂದಿರಲಿಲ್ಲ, ಸಂಜೆ ಹೊತ್ತಿಗಾಗಲೇ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಆಗ ಬರುವಾಗ ಕಾಲು ಜಾರಿಬಿದ್ದು ಪ್ರವಾಹಕ್ಕೆ ಸಿಲುಕಿರಬಹುದು ಎಂದು ಗ್ರಾಮಸ್ಥರಾದ ಮಲ್ಲಪ್ಪ ಪರಮಗೊಂಡ, ಅಣ್ಣಪ್ಪ ಪರಮಗೊಂಡ ಎಂಬುವರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಸಿದ್ದಪ್ಪನ ಚಪ್ಪಲಿ ಮತ್ತು ಸೈಕಲ್‌ ಕೂಡ ದಂಡೆಯಲ್ಲಿ ಪತ್ತೆಯಾಗಿದ್ದು, ಮೇವಿನ ಹೊರೆಯೂ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಪತ್ತೆಯಾಗಿದೆ. ಆದರೆ, ಆತನ ಸುಳಿವು ಮಾತ್ರ ಸಿಕ್ಕಿಲ್ಲ. ಹೀಗಾಗಿ, ಆತನ ನದಿ ಪಾಲಾಗಿರುವ ಸಾಧ್ಯತೆ ಇದ್ದು, ಆತ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಸಿಪಿಐ ಮಲ್ಲಪ್ಪ ಮಡ್ಡಿ, ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯ ನಡೆಸಿದ್ದಾರೆ.