ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ : ಮತ್ತೆ ಏರಿಕೆಯಾಯ್ತು ಕೃಷ್ಣಾ ನೀರಿನ ಮಟ್ಟ

| Published : Aug 30 2024, 02:01 AM IST / Updated: Aug 30 2024, 12:04 PM IST

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ : ಮತ್ತೆ ಏರಿಕೆಯಾಯ್ತು ಕೃಷ್ಣಾ ನೀರಿನ ಮಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

  ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಗುರುವಾರ ವೇದಗಂಗಾ ಮತ್ತು ದೂದಗಂಗಾ ಒಂದು ಅಡಿ ಮತ್ತು ಕೃಷ್ಣಾ ನದಿಯ ನೀರಿನಮಟ್ಟ ಎರಡು ಅಡಿ ಏರಿಕೆಯಾಗಿದೆ.

 ಚಿಕ್ಕೋಡಿ :  ಕೊಯ್ನಾ ಪರಿಸರ ಸೇರಿದಂತೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಗುರುವಾರ ವೇದಗಂಗಾ ಮತ್ತು ದೂದಗಂಗಾ ಒಂದು ಅಡಿ ಮತ್ತು ಕೃಷ್ಣಾ ನದಿಯ ನೀರಿನಮಟ್ಟ ಎರಡು ಅಡಿ ಏರಿಕೆಯಾಗಿದೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಪಂಚ ನದಿಗಳಿಗೆ ಇಂದು 1,26,317 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಇದರಲ್ಲಿ ಸುಳಕುಡ ಬ್ಯಾರೇಜ್‌ನಿಂದ ದೂದಗಂಗಾ ನದಿಗೆ 26,400 ಕ್ಯುಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 99,917 ಕ್ಯುಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.

ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ, ದೂದಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಹಾಗೂ ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಲಾವೃತಗೊಂಡಿದ್ದು, ಯಕ್ಸಂಬಾ-ದಾನವಾಡ, ಸದಲಗಾ-ಬೋರಗಾಂವ ಸೇತುವೆಗಳು ಮುಳುಗಡೆಯ ಹಂತ ತಲುಪಿವೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆ ಗುರುವಾರದಂದು ವಿಶ್ರಾಂತಿ ಪಡೆದಿದೆ.

 ಮಹಾ ಜಲಾಶಯಗಳಿಂದ ನೀರು ಬಿಡುಗಡೆ

ಕೊಯ್ನಾ-33,050 ಕ್ಯುಸೆಕ್

ಧೂಮ-4,610 ಕ್ಯುಸೆಕ್

ಕನ್ಹೇರ-3,885 ಕ್ಯುಸೆಕ್

ವಾರಣಾ-3,885 ಕ್ಯುಸೆಕ್

ಕಳಮ್ಮಾವಾಡಿ-5,000 ಕ್ಯುಸೆಕ್

ರಾಧಾನಗರಿ-2,928 ಕ್ಯುಸೆಕ್

ಮಹಾದಲ್ಲಿ ಮಳೆಯ ಪ್ರಮಾಣ(ಮಿಮೀ)

ಕೊಯ್ನಾ- 86

ವಾರಣಾ-31

ಕಾಳಮ್ಮಾವಾಡಿ-34

ಮಹಾಬಳೇಶ್ವರ-87

ನವಜಾ-94

ರಾಧಾನಗರಿ-34

ಕೊಲ್ಲಾಪುರ-7

ಸಾಂಗಲಿ-3

ಕೃಷ್ಣೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಆಲಮಟ್ಟಿಯಿಂದ ಹೊರಬಿಡುತ್ತಿರುವುದರಿಂದ ಯಾವುದೇ ರೀತಿಯ ಪ್ರವಾಹದ ಆತಂಕವಿಲ್ಲ.

-ಚಿದಂಬರ ಕುಲಕರ್ಣಿ, ತಹಸೀಲ್ದಾರ್‌.