ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ರಸ್ತೆ, ಚರಂಡಿಯನ್ನು ಅಭಿವೃದ್ಧಿ ಪಡಿಸಿದ ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಒವನ್ನು ಜೆಪಿಎಂ ಬಡಾವಣೆಯ ನಿವಾಸಿಗಳು ಅಭಿನಂದಿಸಿದರು.ಬಡಾವಣೆಯಲ್ಲಿ ಸರಿಯಾದ ರಸ್ತೆ ಇಲ್ಲದೆ ಮಳೆ ಬಂದಾಗ ಗುಂಡಿಗಳಾಗಿ ನೀರು ನಿಂತು ದ್ವಿಚಕ್ರವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತುಂಬಾ ತೊಂದರೆಯಾಗಿರುವ ಬಗ್ಗೆ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದರು.
ಬಡಾವಣೆ ನಿವಾಸಿಗಳು ಮಾಡಿದ ಮನವಿಗೆ ಸ್ಪಂದಿಸಿ ಎರಡೇ ದಿನಗಳಲ್ಲಿ ರಸ್ತೆಗಳಿಗೆ ಮಣ್ಣು ಹಾಕಿಸಿ ಸಂಚಾರಕ್ಕೆ ಸುಗಮ ಮಾಡಿಕೊಟ್ಟ ಹಿನ್ನೆಲೆಯಲ್ಲಿ ನಿವಾಸಿಗಳು ಗ್ರಾಪಂ ಅಧ್ಯಕ್ಷೆ ಟಿ.ರಕ್ಷಿತಾ ಮತ್ತು ಅಭಿವೃದ್ಧಿ ಅಧಿಕಾರಿ ರುದ್ರಯ್ಯ ಅವರನ್ನು ಸನ್ಮಾನಿಸಿದರು.ಸನ್ಮಾನಿಸಿದ ಕೃಷ್ಣೇಗೌಡ ಮಾತನಾಡಿ, ಬಡಾವಣೆಯಲ್ಲಿ ಜನರು ಓಡಾಡುವುದಕ್ಕೆ ತುಂಬಾ ತೊಂದರೆಯಾಗಿತ್ತು. ಇದನ್ನು ಸರಿಪಡಿಸುವಂತೆ ನಾವೆಲ್ಲರೂ ಸೇರಿ ಮನವಿ ಪತ್ರ ನೀಡಿದ್ದೆವು, ಅದಕ್ಕೆ ತಕ್ಷಣವೇ ಸ್ಪಂದಿಸಿದ ಅಧ್ಯಕ್ಷರು ಹಾಗೂ ರುದ್ರಯ್ಯನವರು ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ರುದ್ರಯ್ಯ ಮಾತನಾಡಿ, ಸಮಸ್ಯೆ ಏನೇ ಇದ್ದರೂ ನಮ್ಮ ಗಮನಕ್ಕೆ ತಂದರೆ ನಾವು ಸ್ಪಂದಿಸುತ್ತೇವೆ ಎಂದು ತಿಳಿಸಿದರು. ಈ ವೇಳೆ ಕೃಷ್ಣೆಗೌಡ, ಪರಶಿವಮೂರ್ತಿ, ಯತೇಂದ್ರ, ಸಿ. ನಾಗೇಶ, ಮಹೇಶ, ಆನಂದ ಸೇರಿದಂತೆ ಇತರರು ಇದ್ದರು.ನಾಳೆ ವಿದ್ಯುತ್ ವ್ಯತ್ಯಯಮಂಡ್ಯ: ತಾಲೂಕಿನ ಜಿ.ಮಲ್ಲಿಗೆರೆಯ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಆಗಸ್ಟ್ 23ರಂದು ತ್ರೈಮಾಸಿಕ ಕಾರ್ಯನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ತಾಲೂಕಿನ ಜಿ.ಮಲ್ಲಿಗೆರೆ, ಹೊನ್ನೆಮಡು, ಹುನಗನಹಳ್ಳಿ, ನಂಜೇನಹಳ್ಳಿ, ಮುತ್ತೆಗೆರೆ, ತಿಪ್ಪಾಪುರ, ಬುಂಡಾರೆಕೊಪ್ಪಲು, ಎಂ.ಹಟ್ನ, ಸಂಗಾಪುರ ಜವನಹಳ್ಳೀ, ಮಲ್ಲೇನಹಳ್ಳಿ, ಛತ್ರನಹಳ್ಳಿ, ಬಿಲ್ಲೇನಹಳ್ಳಿ, ಬಂಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಸೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಇ-ಕೆವೈಸಿ ಕಡ್ಡಾಯಮಂಡ್ಯ:ತಾಲೂಕಿನ ಎಲ್ಲಾ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಇದುವರೆಗೂ 6620 ಸದಸ್ಯರು ತಮ್ಮ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸದಿರುವುದು ಕಂಡು ಬಂದಿದೆ. ಸರ್ಕಾರವು 2024 ಆಗಸ್ಟ್ 31ರ ಒಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅಂತಿಮ ಗಡುವು ನೀಡಿದೆ. ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಪಡಿತರ ಹಂಚಿಕೆ ಸ್ಥಗಿತವಾಗುತ್ತದೆ. ಆದ್ದರಿಂದ ಇ-ಕೆವೈಸಿ ಬಾಕಿ ಇರುವ ಎಲ್ಲಾ ಸದಸ್ಯರು ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ತಹಸೀಲ್ದಾರ್ ತಿಳಿಸಿದ್ದಾರೆ.