ಪ್ರಕೃತಿ ವಿಕೋಪ ತಡೆಯಲು ಹೆಚ್ಚಿನ ವೃಕ್ಷ ಸಂಪತ್ತು ಅತ್ಯಗತ್ಯ. ಸಂಘ ಸಂಸ್ಥೆಗಳು ವನಮಹೋತ್ಸವದಂತಹ ಕಾರ್ಯಗಳನ್ನು ನಡೆಸುವುದರಿಂದ ಜನತೆಯಲ್ಲಿ ಪರಿಸರ ಜಾಗೃತಿ ಮೂಡುತ್ತದೆ. ವನಮಹೋತ್ಸವವು ಸಂಘ ಸಂಸ್ಥೆಗಳು ನಡೆಸುವ ಮಾದರಿ ಕಾರ್ಯಗಳಲ್ಲಿ ಒಂದಾಗಿದೆ. ಪರಿಸರ ರಕ್ಷಣೆ ಮತ್ತು ಹಸಿರ ಸಂರಕ್ಷಣೆ ಪ್ರತಿಯೊಬ್ಬರ ಧ್ಯೇಯವಾಗಬೇಕು. ಪರಿಸರವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್.ಇಂಜಾಡಿ ಹೇಳಿದರು.
ಸುಬ್ರಹ್ಮಣ್ಯ: ಪ್ರಕೃತಿ ವಿಕೋಪ ತಡೆಯಲು ಹೆಚ್ಚಿನ ವೃಕ್ಷ ಸಂಪತ್ತು ಅತ್ಯಗತ್ಯ. ಸಂಘ ಸಂಸ್ಥೆಗಳು ವನಮಹೋತ್ಸವದಂತಹ ಕಾರ್ಯಗಳನ್ನು ನಡೆಸುವುದರಿಂದ ಜನತೆಯಲ್ಲಿ ಪರಿಸರ ಜಾಗೃತಿ ಮೂಡುತ್ತದೆ. ವನಮಹೋತ್ಸವವು ಸಂಘ ಸಂಸ್ಥೆಗಳು ನಡೆಸುವ ಮಾದರಿ ಕಾರ್ಯಗಳಲ್ಲಿ ಒಂದಾಗಿದೆ. ಪರಿಸರ ರಕ್ಷಣೆ ಮತ್ತು ಹಸಿರ ಸಂರಕ್ಷಣೆ ಪ್ರತಿಯೊಬ್ಬರ ಧ್ಯೇಯವಾಗಬೇಕು. ಪರಿಸರವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್.ಇಂಜಾಡಿ ಹೇಳಿದರು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಕುಮಾರಧಾರದ ದರ್ಪಣತೀರ್ಥ ನದಿ ಸಮೀಪ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬಳಿಕ ಕುಮಾರಧಾರ ದರ್ಪಣ ತೀರ್ಥ ಪರಿಸರದಲ್ಲಿ ಸಸಿಗಳನ್ನು ನೆಡಲಾಯಿತು. ಬಳಿಕ ಅದಕ್ಕೆ ಕುಕ್ಕೆ ದೇವಳದಿಂದ ನೀಡಿದ ರಕ್ಷಣಾ ಬೇಲಿಯನ್ನು ಹಾಕಲಾಯಿತು.ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕೂಜುಗೋಡು, ಪೂರ್ವಾಧ್ಯಕ್ಷೆ ವಿಮಲಾ ರಂಗಯ್ಯ, ಲಯನ್ಸ್ ಕಾರ್ಯದರ್ಶಿ ವಿಷ್ಣು ಪಾತಿಕಲ್ಲು, ಕೋಶಾಧಿಕಾರಿ ಪವನ್ ಎಂ.ಡಿ, ಸಂಯೋಜಕರಾದ ಡಾ.ಶಿವಕುಮಾರ್ ಹೊಸೋಳಿಕೆ, ಮೋಹನದಾಸ ರೈ, ಪ್ರಕಾಶ್ ಶೆಟ್ಟಿ ಕುಂದಾಪುರ, ಪದಾಧಿಕಾರಿಗಳಾದ ಗಾಯತ್ರಿ ಕೃಷ್ಣಕುಮಾರ್, ಕೃಷ್ಣಕುಮಾರ್ ಬಾಳುಗೋಡು, ದಿನೇಶ್ ಎಂ.ಪಿ, ದೀಪಕ್ ನಂಬಿಯಾರ್, ಭಾರತಿ ದಿನೇಶ್, ಗಿರಿಧರ್ ದೋಣಿಮನೆ, ಉಪ ವಲಯಾರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ ಉಪಸ್ಥಿತರಿದ್ದರು.