ಅಂಬಾಭವಾನಿ ದೇವಸ್ಥಾನದಲ್ಲಿ ಕುಂಕುಮಾರ್ಚನೆಯ ಮಂಗಲೋತ್ಸವ

| Published : Jan 13 2024, 01:32 AM IST

ಅಂಬಾಭವಾನಿ ದೇವಸ್ಥಾನದಲ್ಲಿ ಕುಂಕುಮಾರ್ಚನೆಯ ಮಂಗಲೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಜ. 18 ಮತ್ತು 19ರಂದು ಕುಂಕುಮಾರ್ಚನೆಯ ಮಂಗಲೋತ್ಸವ ಕಾರ್ಯಕ್ರಮವು ಜರುಗಲಿದ್ದು, ಭಕ್ತಾಧಿಗಳು ಆಗಮಿಸಿ ತಾಯಿ ಕೃಪೆಗೆ ಪಾತ್ರರಾಗಬೇಕು ಎಂದು ಎಸ್‌ಎಸ್‌ಕೆ ಸಮಾಜದ ಮುಖಂಡ ನಾರಾಯಣಸಾ ಪವಾರ ಹೇಳಿದರು.

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಜ. 18 ಮತ್ತು 19ರಂದು ಕುಂಕುಮಾರ್ಚನೆಯ ಮಂಗಲೋತ್ಸವ ಕಾರ್ಯಕ್ರಮವು ಜರುಗಲಿದ್ದು, ಭಕ್ತಾಧಿಗಳು ಆಗಮಿಸಿ ತಾಯಿ ಕೃಪೆಗೆ ಪಾತ್ರರಾಗಬೇಕು ಎಂದು ಎಸ್‌ಎಸ್‌ಕೆ ಸಮಾಜದ ಮುಖಂಡ ನಾರಾಯಣಸಾ ಪವಾರ ಹೇಳಿದರು.

ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದರು. ಕಳೆದ ಒಂದು ವರ್ಷದ ಹಿಂದೆ ನೂತನವಾಗಿ ನಿರ್ಮಾಣವಾಗಿದ್ದ ಅಂಬಾಭವಾನಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ನಂತರ ಪ್ರತಿ ಶುಕ್ರವಾರ ಪಂ ಬಾಲಚಂದ್ರ ಭಟ್ ಅವರ ನೇತೃತ್ವದಲ್ಲಿ ಸುಮಂಗಲೆಯರು ಕುಂಕುಮಾರ್ಚನೆ ಮಾಡುತ್ತ ಬರುತ್ತಿದ್ದು, ಇದುವರೆಗೆ ಸುಮಾರು 36 ಲಕ್ಷ ಕುಂಕುಮಾರ್ಚನೆ ಕಾರ್ಯ ನೆರವೇರಿಸಲಾಗಿದೆ. ಈ ಕುಂಕುಮಾರ್ಚನೆಯ ಮಂಗಲೋತ್ಸವ ಕಾರ್ಯಕ್ರಮವನ್ನು ಜ. 18 ಮತ್ತು 19ರಂದು ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು. ಆದ್ದರಿಂದ ದೇವಿಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು. ಈ ವೇಳೆ ಲಕ್ಷ್ಮಣಸಾ ರಾಜೋಳಿ, ತುಕರಾಮಸಾ ಬದಿ, ಆನಂದಸಾ ಬದಿ, ಯಲ್ಲಪ್ಪ ಬದಿ, ಪಾಂಡುಸಾ ಬದಿ, ತಿಪ್ಪಣಸಾ ಬಾಕಳೆ, ಛಾಯಾಸಾ ಬದಿ, ಗಣಪತಸಾ ಪೂಜಾರಿ ಹಾಗೂ ಯುವಕ ಮಂಡಳದ ಭರತ ಬಾಕಳೆ, ಮಂಜುನಾಥಸಾ ಬದಿ, ಮನೋಹರಸಾ ಬಸವಾ, ವಿನಾಯಕಸಾ ರಾಜೋಳಿ ಇದ್ದರು.