ಕುಂದಾಪುರ: ಐಎಂಜೆ ಕಾಲೇಜಿನಲ್ಲಿ ಫ್ರಾನ್ಸ್ ವಿದ್ಯಾರ್ಥಿಗಳ ಸಂಸ್ಕೃತಿ ವಿನಿಮಯ

| Published : Aug 04 2025, 12:30 AM IST

ಕುಂದಾಪುರ: ಐಎಂಜೆ ಕಾಲೇಜಿನಲ್ಲಿ ಫ್ರಾನ್ಸ್ ವಿದ್ಯಾರ್ಥಿಗಳ ಸಂಸ್ಕೃತಿ ವಿನಿಮಯ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಮುದಾಯ ಸೇವಾ ಕ್ಲಬ್ ಮತ್ತು ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಸ್ಕೃತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಮುದಾಯ ಸೇವಾ ಕ್ಲಬ್ ಮತ್ತು ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಸ್ಕೃತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫ್ರಾನ್ಸ್ ದೇಶದ ವಿದ್ಯಾರ್ಥಿಗಳಿಂದ ವರ್ಕ್ ಕ್ಯಾಂಪ್ ಪ್ರೆಸೆಂಟೇಷನ್, ಗುಂಪು ಚರ್ಚೆ ಮತ್ತು ಅನೇಕ ಗ್ರೂಪ್ ಬಾಂಡಿಂಗ್ ಚಟುವಟಿಕೆಯನ್ನು ಐಎಂಜೆ ಪದವಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ವಾಯ್ಸ್ ಫೋರ್ ಚೇಂಜ್ - ಲೋಕಲ್ ಆಕ್ಷನ್’ ವಿಷಯದ ಕುರಿತು ಪ್ರಸ್ತುತಿ ಕಾರ್ಯಕ್ರಮ ಜರುಗಿತು. ಇದರಲ್ಲಿ ಅರಣ್ಯ ನಾಶ ಮತ್ತು ಪರಿಸರ ಸಂರಕ್ಷಣೆಯ ಕುರಿತು ಚರ್ಚಿಸಲಾಯಿತು.

ಆಮೆ ಸಂತತಿ ನಶಿಸಿ ಹೋಗುತ್ತಿರುವುದು ಹಾಗೂ ಅದನ್ನು ನಾವು ಹೇಗೆ ಸಂರಕ್ಷಿಸಬೇಕು ವಿಷಯದ ಕುರಿತು ಸಾಕ್ಷಾ ಚಿತ್ರವನ್ನು ಪ್ರದರ್ಶಿಸಲಾಯಿತು ಮತ್ತು ಹಸಿರನ್ನು ಉಳಿಸುವ ಮತ್ತು ಬೆಳೆಸುವ ಧ್ಯೇಯದೊಂದಿಗೆ ಫ್ರಾನ್ಸ್ ವಿದ್ಯಾರ್ಥಿಗಳಿಂದ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಎಫ್.ಎಸ್.ಎಲ್. ಇಂಡಿಯಾ ಸಹನಿರ್ದೇಶಕ ರಾಗ್ಲಂಡ್ ದೇವದಾಸ್, ಸಂಯೋಜಕ ದಿನೇಶ್ ಸಾರಂಗ, ಯುವಶಕ್ತಿ ಅಭಿವೃದ್ಧಿ ಅಧಿಕಾರಿ ರಕ್ಷಾ ವಿ. ಶೆಣೈ, ಮುಖ್ಯ ಸಂಯೋಜಕಿ ನಾಗರತ್ನ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ವಾಣಿಜ್ಯ ಉಪನ್ಯಾಸಕಿ ಮಾಲತಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ದೃತಿ ಕಾರ್ಯಕ್ರಮ ನಿರೂಪಿಸಿದರು.