ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ಎಂಬಿಎ ವಿಭಾಗದ ವತಿಯಿಂದ 14ರಿಂದ 17ರವರೆಗೆ ವೈಬ್ರೇಷನ್ ವೀಕ್–2026 ಅನ್ನು ಸ್ಯಾಂಡಲ್‌ವುಡ್ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ಎಂಬಿಎ ವಿಭಾಗದ ವತಿಯಿಂದ 14ರಿಂದ 17ರವರೆಗೆ ವೈಬ್ರೇಷನ್ ವೀಕ್–2026 ಅನ್ನು ಸ್ಯಾಂಡಲ್‌ವುಡ್ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮದ ಮೊದಲ ದಿನ ಕವಿರತ್ನ ಕಾಳಿದಾಸ ಬ್ರೇನ್ ಬ್ಯಾಟಲ್ ಕ್ವಿಜ್ ಸ್ಪರ್ಧೆ ಹಾಗೂ ಸಿಹಿ ಕಹಿ ರುಚಿ (ಅಗ್ನಿ ರಹಿತ ಅಡುಗೆ) ಸ್ಪರ್ಧೆ ನಡೆಯಿತು. ಎರಡನೇ ದಿನ ಯುವರತ್ನ ಲೀಡರ್‌ಶಿಪ್ ಹಂಟ್ (ಬೆಸ್ಟ್ ಮ್ಯಾನೇಜರ್), ಪ್ರೆಸ್ ಮೀಟ್ ಪ್ರಸಂಗ (ಮಾಕ್ ಪ್ರೆಸ್ ಮೀಟ್) ಹಾಗೂ ವಿಚಿತ್ರ ವೇಷ (ಮಿಸ್‌ಮ್ಯಾಚ್ ಫ್ಯಾಷನ್ ಶೋ) ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಿದ್ದವು. ಮೂರನೇ ದಿನ ಯಜಮಾನ ಪ್ರೆಸೆಂಟೇಶನ್ ಲೀಗ್ (ಪವರ್‌ಪಾಯಿಂಟ್ ಪ್ರಸ್ತುತಿ) ಮತ್ತು ಕಲ್ಪನಾ ರೀಲ್ಸ್ (ರೀಲ್ಸ್ ತಯಾರಿಕೆ) ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು.

ಕೊನೆಯ ದಿನ ಅಷ್ಟರಂಗ ಸಿನಿ ಉತ್ಸವ ಎಂಬ ತಂಡ ಸ್ಪರ್ಧೆಯಲ್ಲಿ ಗುಂಪು ಗಾಯನ, ಗುಂಪು ನೃತ್ಯ, ಕಿರಿಕ್ ಮಿಮಿಕ್ರಿ ಹಾಗೂ ರೆಟ್ರೋ ಫ್ಯಾಷನ್ ಶೋ ಸ್ಪರ್ಧೆಗಳು ನಡೆದವು. ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೃಜನಶೀಲತೆ, ಸಂವಹನ ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ವೈಬ್ರೇಷನ್ ವೀಕ್–2026 ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗಡೆ, ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ, ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.