ಕುಂಜಿಲ ಪಯ್‌ನರಿ ದಫ್ ತಂಡ ಪ್ರಥಮ

| Published : Sep 21 2025, 02:03 AM IST

ಸಾರಾಂಶ

ಮದದೇ ಮದೀನ ಮಿಲಾದ್‌ ಬೃಹತ್‌ ಸಮಾವೇಶದಲ್ಲಿ ಕುಂಜಿಲ ಪಯ್‌ನರಿ ಯುವಕರ ದಫ್‌ ತಂಡ ಉತ್ತಮ ಪ್ರದರ್ಶನ ನೀಡಿ ತಂಡ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲ್ಕು ನಾಡ್ ವ್ಯಾಪ್ತಿಯ ನಾಪೋಕ್ಲು ಮುಸ್ಲಿಂ ಜಮಾಅತ್ ಅಧೀನದಲ್ಲಿ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ರ್ಯಾಲಿಯಲ್ಲಿ ಕುಂಜಿಲ ಪಯ್‌ನರಿ ಯುವಕರ ದಫ್ ತಂಡವು ಅತ್ಯುತ್ತಮ ದಫ್ ಪ್ರದರ್ಶನ ನೀಡಿ ತಂಡವು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಈ ಬಹುಮಾನವನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ ಎಸ್ ಪೊನ್ನಣ್ಣ ಅವರಿಂದ ಪಡೆದುಕೊಂಡರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ತಂಡದ ತರಬೇತುಗಾರ ಪಯ್ಯಡಿ ರಶೀದ್ ಉಸ್ತಾದ್ , ನಾಯಕ ರಝಕ್ ಅಲಿ (ಜಜ್ಜು), ಮತ್ತು ಪಯ್‌ನರಿ ಸುನ್ನಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಸೌಕತ್ ಅಲಿ ಮಕ್ಕಿ, ಖಲೀಲ್ ಮತ್ತು ಅಝರುದ್ದೀನ್ ಉಪಸ್ಥಿತರಿದ್ದರು. ----------------------------------

ಕೊಡವ " ನಮೂದಿಸುವ ಅಗತ್ಯವಿದೆ : ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ

ಮಡಿಕೇರಿ : ಜಾತಿ ಜನಗಣತಿಯ ದಾಖಲೆಯಲ್ಲಿ "ಕೊಡವ " ಎಂದು ನಮೂದಿಸುವುದರಿಂದ ಕೊಡವರ ಶಾಸನಬದ್ಧ ಮತ್ತು ಸಾಂವಿಧಾನಿಕ ಹಕ್ಕುಗಳ ಅನುಮೋದನೆಗೆ ಮಹತ್ವದ ಮೈಲಿಗಲ್ಲಾಗಲಿದೆ. ಇದು ಕೊಡವರ ಹಕ್ಕನ್ನು ನಿರ್ಧರಿಸುತ್ತದೆ ಮತ್ತು ಸರ್ವತೋಮುಖ ಸಬಲೀಕರಣವನ್ನು ಖಚಿತಪಡಿಸುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪ್ರತಿಪಾದಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರ ಆನಿಮಿಸ್ಟಿಕ್ ನಂಬಿಕೆಗಳು ಪ್ರಕೃತಿಯೊಂದಿಗಿನ ಅವರ ಸಂಪರ್ಕ ಮತ್ತು ನೈಸರ್ಗಿಕ ಪ್ರಪಂಚದ ವಿವಿಧ ಅಂಶಗಳಿಗೆ ಅವರು ಹೊಂದಿರುವ ಗೌರವದಲ್ಲಿ ಆಳವಾಗಿ ಬೇರೂರಿವೆ. ಅವರ ಆಧ್ಯಾತ್ಮಿಕ ಅಭ್ಯಾಸಗಳು ವ್ಯಾಪಕ ಶ್ರೇಣಿಯ ಅಂಶಗಳನ್ನು ಒಳಗೊಂಡಿವೆ ಎಂದು ವಿವರಿಸಿದ್ದಾರೆ.