ಲೀಡ್‌.. ಖೋ ಖೋ ಪಟು ಚೈತ್ರಾಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ

| Published : Jan 26 2025, 01:30 AM IST

ಸಾರಾಂಶ

ಒಂದು ದೊಡ್ಡ ಕನಸನ್ನು ನನಸು ಮಾಡಲು ತ್ಯಾಗ ಮತ್ತು ನಿರಂತರ ಪರಿಶ್ರಮ ಮುಖ್ಯ

ಕನ್ನಡಪ್ರಭ ವಾರ್ತೆ ಟಿ. ನರಸೀಪುರಕುರುಬೂರು ಗ್ರಾಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಕಾರ್ಯವನ್ನು ವಿಶ್ವಕಪ್ ಖೋ ಖೋ ಆಟಗಾರ್ತಿ ಚೈತ್ರಾ ಅವರು ಮಾಡಿದ್ದಾರೆ ಎಂದು ಕನಕಪುರ ದೇಗುಲ ಮಠದ ಚನ್ನಬಸಪ್ಪ ಸ್ವಾಮೀಜಿ ಹೇಳಿದರು.ತಾಲೂಕಿನ ಕುರುಬೂರು ಗ್ರಾಮದ ವಿದ್ಯಾ ದರ್ಶನಿ ಕಾನ್ವೆಂಟ್ ಹಾಗೂ ಪ್ರೌಢಶಾಲಾ ಆವರಣದಲ್ಲಿ ವಿಶ್ವಕಪ್ ಖೋ ಖೋ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ ಗ್ರಾಮದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆ ಮಾಡಿದ ಬಿ. ಚೈತ್ರ ಅವರನ್ನು ಸನ್ಮಾನಿಸಲು ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಒಂದು ದೊಡ್ಡ ಕನಸನ್ನು ನನಸು ಮಾಡಲು ತ್ಯಾಗ ಮತ್ತು ನಿರಂತರ ಪರಿಶ್ರಮ ಮುಖ್ಯ ಎಂದು ಹೇಳುತ್ತಾರೆ. ಚೈತ್ರ ಅವರ ಕೋಚ್ ಮಂಜುನಾಥ್ ಅವರು ಗಣಿತ ಶಿಕ್ಷಕರಾಗಿ, ಕ್ರೀಡಾ ತರಬೇತಿ ಇಲ್ಲದಿದ್ದರೂ ಸಹ ಸ್ವತಃ ತಾವು ಕಲಿತು ನಿರಂತರ ಪರಿಶ್ರಮದ ಮೂಲಕ ಬಿ. ಚೈತ್ರಾರಂತಹ ಪ್ರತಿಭೆಯ ಫಲವನ್ನು ನಾಡಿಗೆ ನೀಡಿದ್ದಾರೆ. ಕುರುಬೂರು ಗ್ರಾಮ ಇತಿಹಾಸವನ್ನು ಹೊಂದಿದ್ದು, ಗ್ರಾಮವು ಅನೇಕ ರೀತಿಯಲ್ಲಿ ನಾಡಿಗೆ ಪರಿಚಯವಿದ್ದು, ಸಾಧಿಸಿದವರಿದ್ದರೂ ಸಹ ಚೈತ್ರಾ ಅವರಿಂದಾಗಿ ವಿಶ್ವ ಮಟ್ಟದಲ್ಲಿ ಮತ್ತೊಂದು ಕಿರೀಟ ದೊರಕಿದಂತಾಗಿದೆ ಎಂದರು.ಚೈತ್ರಾ ಅವರು ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಏಷ್ಯನ್ ಗೇಮ್, ಒಲಂಪಿಕ್ ಗಳಲ್ಲಿ ಆಡುವ ಕನಸನ್ನು ಹೊಂದಿದ್ದಾರೆ, ಅವರ ಕನಸು ನನಸಾಗಲಿ ಅವರ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದು ಅವರು ತಿಳಿಸಿದರು. ತರಬೇತುದಾರ ಮಂಜುನಾಥ್ಶ್ರಮವಿದೆ- ಚೈತ್ರಾಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ವಕಪ್ ಖೊ ಖೋ ಪಂದ್ಯದಲ್ಲಿ ಉತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದ ಬಿ. ಚೈತ್ರಾ ಮಾತನಾಡಿ, ನನ್ನ ಸಾಧನೆಯ ಹಿಂದೆ ನನ್ನ ತರಬೇತುದಾರರಾದ ಮಂಜುನಾಥ್ ಅವರ ಶ್ರಮವಿದೆ. ಪ್ರತಿ ಹಂತದಲ್ಲೂ ನನಗೆ ಪ್ರೋತ್ಸಾಹ ನೀಡಿದ್ದಾರೆ. ಕುರುಬೂರು ಗ್ರಾಮದಲ್ಲೂ ಕೂಡ ನನಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಇಲ್ಲಿ ಆಡುವ ಪ್ರತಿಯೊಬ್ಬ ಆಟಗಾರರಿಗೂ ಸಾಧನೆ ಮಾಡುವ ಸಾಮರ್ಥ್ಯವಿದೆ. ನನ್ನ ಹಿರಿಯ ಆಟಗಾರರು ಹಾಗೂ ಕಿರಿಯ ಆಟಗಾರರು ಸಾಕಷ್ಟು ಬೆಂಬಲ ನೀಡಿದ್ದಾರೆ.ನಾನು ವಿಶೇಷವಾಗಿ ದೇಗುಲ ಮಟ್ಟಕ್ಕೆ ಋಣಿಯಾಗಿದ್ದೇನೆ. ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡಿದಿದ್ದೇನೆ. ಇದೇ ಮೈದಾನದಲ್ಲಿ ತರಬೇತಿ ಪಡೆದಿದ್ದೇನೆ. ಎಲ್ಲರೂ ಕೂಡ ನನಗೆ ಪ್ರೀತಿ ಬೆಂಬಲ ಆಶೀರ್ವಾದ ನೀಡಿದ್ದಾರೆ. ಮುಂದೆ ನಾನು ಏಷ್ಯನ್ ಗೇಮ್ಸ್, ಒಲಂಪಿಕ್ಸ್ ನಲ್ಲಿ ಆಡುವ ಕನಸು ಇದೆ ಎಂದು ತಿಳಿಸಿದರು. ಗೆಲುವು ತಂದೆ-ತಾಯಿ ಕೋಚ್ ಮಂಜುನಾಥ್ ಗೆ ಅರ್ಪಣೆ...! ನನ್ನ ಸಾಧನೆಗೆ ನಮ್ಮ ತಂದೆ-ತಾಯಿಯೇ ಪ್ರಮುಖ ಕಾರಣ, ಅವರ ಬೆಂಬಲದಿಂದಲೇ ನಾನು ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು. ಹಾಗೆಯೇ ನನ್ನ ಕೋಚ್ ಮಂಜುನಾಥ್ ಇಲ್ಲದಿದ್ದರೆ ನಾನು ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಈ ಗೆಲುವನ್ನು ತಂದೆ-ತಾಯಿ ಹಾಗೂ ಕೋಚ್ ಮಂಜುನಾಥ್ ಅವರಿಗೆ ಅರ್ಪಿಸುತ್ತೇನೆ ಎಂದು ಗದ್ಗದಿತರಾದರು.ಇದೇ ವೇಳೆ ಖೋ ಖೋ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡಿರುವಂತಹ ಆಟಗಾರರಾದ ತಾಂತ್ರಿಕ ಅಧಿಕಾರಿ ಕೆ.ಎಸ್. ಅಮೂಲ್ಯ, ವೀಣಾ ಹಾಗೂ ತರಬೇತುದಾರ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.ವಿದ್ಯಾದರ್ಶನಿ ಕಾನ್ವೆಂಟ್ ನ ಸಂಸ್ಥಾಪಕ ಅಧ್ಯಕ್ಷ ಕು.ಶಿ. ಭೃಂಗೀಶ್, ರೈತ ಮುಖಂಡ ಕುರುಬೂರು ಶಾಂತಕುಮಾರ್, ಅತ್ತಹಳ್ಳಿ ದೇವರಾಜ್, ಮುಖಂಡ ಗೌರಿ ಶಂಕರ್, ಕುರುಬೂರು ಶಿವು, ಸಿದ್ದೇಶ್, ಶಾಂತರಾಜು, ಗುರುಮೂರ್ತಿ, ಶಂಕರ್ ಗುರು, ಖೋ ಖೋ ಪಂದ್ಯಾವಳಿಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ.ಎಸ್. ಅಮೂಲ್ಯ, ಬಿಇಓ ಶಿವಮೂರ್ತಿ, ಕಿರಗಸೂರು ಶಂಕರ್, ಗೋಪಿನಾಥ್, ಡಾ. ರೇವಣ್ಣ, ಹಲಸಹಳ್ಳಿ ಮಹದೇವಸ್ವಾಮಿ, ಅಂಗಡಿ ಶೇಖರ್ ಇದ್ದರು. ಚೈತ್ರಾಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ --ಫೋಟೋ-25ಎಂವೈಎಸ್ 70, 71---------ಖೋ ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಉತ್ತಮಆಟಗಾರ್ತಿಯಾಗಿ ಹೊರಹೊಮ್ಮಿ ಅತ್ಯುತ್ತಮ ಪ್ರದರ್ಶನ ತೋರಿದ ತಾಲೂಕಿನಹೆಮ್ಮೆಯ ಆಟಗಾರ್ತಿ ಬಿ. ಚೈತ್ರಾರಿಗೆ ತವರು ಗ್ರಾಮದಲ್ಲಿ ಅದ್ದೂರಿ ಸ್ವಾಗತ ದೊರಕಿತು.ನವದೆಹಲಿಯಲ್ಲಿ ಇತ್ತೀಚಿಗೆ ನಡೆದ ಮಹಿಳಾ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ದಕ್ಷಿಣ ಭಾಗದ ಏಕೈಕ ಆಟಗಾರ್ತಿಯಾಗಿ ಆಯ್ಕೆಯಾಗಿ ಪಂದ್ಯಾವಳಿಯಲ್ಲಿ ನಿರೀಕ್ಷೆಗೂ ಮೀರಿದ ಆಟ ಪ್ರದರ್ಶನ ನೀಡಿ ಗ್ರಾಮದ ಹೆಸರನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಗ್ರಾಮೀಣ ಪ್ರದೇಶದ ಯುವ ಪ್ರತಿಭೆ ಬಿ. ಚೈತ್ರಾ ಅವರು ಶನಿವಾರ ಸಂಜೆ ಕುರುಬೂರು ಗ್ರಾಮದ ತಾನು ವಿದ್ಯಾಭ್ಯಾಸ ಮಾಡಿದ್ದ ಶ್ರೀ ನಿರ್ವಾಣಸ್ವಾಮಿ ಗ್ರಾಮಾಂತರ ಪ್ರೌಢಶಾಲೆಗೆ ಬಂದಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅದ್ದೂರಿ ಸ್ವಾಗತ ಕೋರಿ ಬರ ಮಾಡಿಕೊಂಡರು.ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ಪಂದ್ಯ ಉತ್ತಮ ಆಟಗಾರ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡ ಗ್ರಾಮದ ಮನೆ ಮಗಳನ್ನು ಸ್ವಾಗತಿಸಲು ಇಡೀ ಗ್ರಾಮಕ್ಕೆ ಗ್ರಾಮವೇ ಶಾಲೆಯ ಬಳಿ ಜಮಾವಣೆಯಾಗಿತ್ತು.ಶಾಲೆಯ ಮುಂಭಾಗ ವಾದ್ಯ ಮೇಳಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ಚೈತ್ರಾ ಅವರ ಮೇಲೆ ಹೂವಿನ ಮಳೆಗರೆದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ನೂರಾರು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಗ್ರಾಮಸ್ಥರು ಸಾರ್ವಜನಿಕರು ಶಾಲೆಯ ಮುಂದೆ ಜಮಾಯಿಸಿ ಚೈತ್ರಾ ಅವರಿಗೆ ಜೈಕಾರದ ಘೋಷಣೆ ಕೂಗಿ ಅಭಿಮಾನಮೆರೆದರು. ತವರು ಗ್ರಾಮದ ಅಭಿಮಾನ ಕಂಡು ಚೈತ್ರಾ ಸಹ ಪುಳಕಿತರಾದರು.ಭೂಮಿಪೂಜೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಸದ ಸುನಿಲ್ ಬೋಸ್ ಚೈತ್ರಾ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಚೈತ್ರೋತ್ಸವನಂತರ ಟಿ. ನರಸೀಪುರದ ಖಾಸಗಿ ಬಸ್ನಿಲ್ದಾಣದಿಂದ ವಿದ್ಯೋದಯ ಕಾಲೇಜುವರೆಗೆ ಚೈತ್ರೋತ್ಸವ- ಅದ್ದೂರಿ ಮೆರವಣಿಗೆಯಲ್ಲಿ ಚಿತ್ರಾರನ್ನು ವೇದಿಕೆಗೆ ಕರೆತರಲಾಯಿತು. ನಂತರ ಚೈತ್ರಾ,ಪೋಷಕರು ಹಾಗೂ ತರಬೇತುದಾರರರನ್ನು ಅಭಿನಂದಿಸಲಾಯಿತು.ವಾಟಾಳು ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ, ಮುಗೂಗು ಮಧುದೀಕ್ತಿತ್, ಕೆ.ಪಿ. ಮಹದೇವಸ್ವಾಮಿ, ಕುರುಬೂರು ಶಾಂತಕುಮಾರ್, ಡಾ.ರೇವಣ್ಣ, ಆಲಗೂಡು ಶಿವಕುಮಾರ್, ಕಿರಗಸೂರು ಶಂಕರ್, ಮಣಿಕಂಠಗೌಡ ಮೊದಲಾದವರು ಪಾಲ್ಗೊಂಡಿದ್ದರು.