ಸಾರಾಂಶ
ಚಿತ್ರದುರ್ಗ: ಕನ್ನಡಕ್ಕೆ, ಕನ್ನಡ ನಾಡಿಗೆ ಕುವೆಂಪು ನೀಡಿದ ಕೊಡುಗೆ ಅಪಾರ ಎಂದು ಲೇಖಕ ಎಚ್.ಆನಂದ್ ಹೇಳಿದರು.
ಚಿತ್ರದುರ್ಗ: ಕನ್ನಡಕ್ಕೆ, ಕನ್ನಡ ನಾಡಿಗೆ ಕುವೆಂಪು ನೀಡಿದ ಕೊಡುಗೆ ಅಪಾರ ಎಂದು ಲೇಖಕ ಎಚ್.ಆನಂದ್ ಹೇಳಿದರು.
ಕಣಿವೆ ಮಾರಮ್ಮ ಸಂಘ ಹಾಗೂ ನಗರ ಕೇಂದ್ರ ಗ್ರಂಥಾಲಯದಿಂದ ನಗರದ ಮಕ್ಕಳ ಗ್ರಂಥಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ನುಡಿ ನಮನ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕುವೆಂಪು ಹಲವು ಮೊದಲುಗಳಿಗೆ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ಅಷ್ಟೇ ಅಲ್ಲದೇ ಈ ನಾಡಿನ ಶಕ್ತಿ. ತಮ್ಮ ವೈಚಾರಿಕ ಬರಹ ಮತ್ತು ಚಿಂತನೆಗಳೊಂದಿಗೆ ನೆಲಮೂಲ ಸಂಸ್ಕೃತಿಯ ಆಶಯಗಳನ್ನು ಮುನ್ನಲೆಯಾಗಿಸಿಕೊಂಡು ಶೋಷಿತರ, ದಮನಿತರ ಪರವಾದ ಬರವಣಿಗೆಯ ಮೂಲಕ ಗಟ್ಟಿದನಿಯಾಗಿದ್ದರೆ ಎಂದರು.ಮುಖ್ಯ ಗ್ರಂಥಾಲಯಾಧಿಕಾರಿ ಬಸವರಾಜ್ ಕೊಳ್ಳಿ ಮಾತನಾಡಿ, ಯುಗದ ಕವಿ, ಜಗದ ಕವಿ, ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪು. ಇಂದಿನ ಯುವ ಪೀಳಿಗೆ ಸುಖಾ ಸುಮ್ಮನೆ ಕಾಲಹರಣ ಮಾಡದೇ, ಇಂತಹ ಕಾರ್ಯ್ರಮಗಳಲ್ಲಿ ಭಾಗವಹಿಸುವ ಮೂಲಕ ಮಹಾನ್ ವ್ಯಕ್ತಿಗಳ ಜೀವನ, ಸಾಧನೆ ಆದರ್ಶಗಳನ್ನು ಬದುಕಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಪರಿಸರ ಪ್ರೇಮಿ ಮಾಸ್ಟರ್ ಮಲ್ಲಿಕಾರ್ಜುನ್ ಮಾತನಾಡಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ಪುಣ್ಯರು. ಮಲೆನಾಡಿನ ಅಪಾರವಾದ ಪ್ರಕೃತಿ ಸಾಂಗತ್ಯದಲ್ಲಿ ಬೆಳೆದು ಪ್ರೇರೇಪಿತರಾಗಿ ರಸ ಋಷಿಯಾದರು. ಅವರು ರಚಿಸಿದ ಕಾವ್ಯ, ಕಥೆ, ಕವನ, ಕಾದಂಬರಿ, ಕೃತಿಗಳು ಇಂದಿಗೂ ಶ್ರೇಷ್ಠ ಎಂದರು.ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಾಜಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಪ್ರಹ್ಲಾದ್ ಉಪಸ್ಥಿತರಿದ್ದರು.
ಜನಪದ ಸಾಹಿತಿ ಪ್ಯಾರೇಜಾನ್ ಕನ್ನಡ ಸ್ವ ರಚಿತ ಸ್ವರ ಗೀತೆಯನ್ನು ಹಾಡಿದರು. ಪ್ರಸಾರ ಭಾರತಿ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.