ಕೊಡಗು ಜಿಲ್ಲೆಯು ಕಾಫಿಗೆ ಹೇಗೆ ಪ್ರಸಿದ್ಧವೋ ಹಾಗೆಯೇ ಹಾಕಿ ಕ್ರೀಡೆಗೆ ಪ್ರಸಿದ್ಧವಾಗಿದೆ. ಹಾಕಿ ರಾಷ್ಟ್ರೀಯ ಕ್ರೀಡೆಯಾದರೂ ಆ ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು ಜಿಲ್ಲೆಯು ಕಾಫಿಗೆ ಹೇಗೆ ಪ್ರಸಿದ್ಧವೋ ಹಾಗೆಯೇ ಹಾಕಿ ಕ್ರೀಡೆಗೆ ಪ್ರಸಿದ್ಧವಾಗಿದೆ. ಹಾಕಿ ರಾಷ್ಟ್ರೀಯ ಕ್ರೀಡೆಯಾದರೂ ಆ ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹೇಳಿದರು. ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡು ಅಂತರ ಗ್ರಾಮ ಹಾಕಿ ಹಾಗೂ ಮಹಿಳಾ ಹಗ್ಗ ಜಗ್ಗಾಟದ ನಾಲ್ನಾಡ್ ಕಪ್ ಹಾಕಿ ಉತ್ಸವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಡಿಸಿಸಿ ಬ್ಯಾಂಕ್ ಸಿಇಒ ಮಣವಟ್ಟಿರ ಜಯ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕ್ರೀಡೆ ಹೆಸರುವಾಸಿಯಾಗಿದೆ. ಕ್ರೀಡೆಯೊಂದಿಗೆ ಜನರ ಶಿಸ್ತು ಆತಿಥಿ ಸತ್ಕಾರ ಎಲ್ಲವೂ ಕೂಡ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದ ಅವರು ಜಿಲ್ಲೆಯ ವಿಭಿನ್ನ ಸಂಸ್ಕೃತಿ ನಡವಳಿಕೆ ಹಾಗೂ ಶಿಸ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಿದೆ .ಇದನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಟೂರ್ನಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ನಾಲ್ಕು ನಾಡು ವ್ಯಾಪ್ತಿಯ ಕ್ರೀಡಾಪಟುಗಳನ್ನು ಒಗ್ಗೂಡಿಸಿ ನಾಲ್ಡ್ ಕಪ್ ಹಾಕಿ ಟೂರ್ನಮೆಂಟ್ ಅನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿತ್ತು . ಕಳೆದ ಕೆಲವು ವರ್ಷಗಳಿಂದ ಕಡಿತಗೊಂಡಿದ್ದ ಪಂದ್ಯಾವಳಿಯನ್ನು ಕಳೆದ ವರ್ಷ ಪುನರಾರಂಭಿಸಿ ಯಶಸ್ವಿಯಾಗಿ ಟೂರ್ನಮೆಂಟ್ ಅನ್ನು ನಡೆಸಲಾಗಿದೆ. ಈ ವರ್ಷ ಉದ್ಯಮಿ ಹಾಗೂ ದಾನಿಗಳಾದ ಎಡಿಕೇರಿ ಪ್ರಸನ್ನ ಅವರು ಉದಾರವಾಗಿ ಮೂರು ಲಕ್ಷ ರುಪಾಯಿ ನೀಡಿದ್ದು ಅವರ ಪ್ರಾಯೋಜಕತ್ವದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದರು.ನಾಲ್ನಾಡು ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಕ್ಲಬ್ಬಿನ ಉಪಾಧ್ಯಕ್ಷ ಕೈಬಿಲಿರಾ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಗೇಟಿರ ಕುಮಾರ್ ಸೋಮಣ್ಣ, ಕಜಾಂಜಿ ಚಿಯಂಡಿ ದಿನೇಶ್, ಸಹಕಾರ್ಯದರ್ಶಿ ಮಚ್ಚೂರ ಯದುಕುಮಾರ್, ಹೊಸೊಕ್ಲು ಮಾಚಯ್ಯ ಹಾಗೂ ನಿರ್ದೇಶಕರು ಮತ್ತು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು. ಅಪ್ಪುಮನಿಯಂಡ ಶೈಲಾ ಪ್ರಾರ್ಥಿಸಿದರು. ಏ.ಕೆ ಮನು ಮುತ್ತಪ್ಪ ಸ್ವಾಗತಿಸಿದರು. ಕರವಂಡ ಸೀಮ ಗಣಪತಿ ನಿರೂಪಿಸಿ ಚಗೇಟಿರ ಕುಮಾರ್ ಸೋಮಣ್ಣ ವಂದಿಸಿದರು.ಟೂರ್ನಿಯು ಮಾ. 28 ರಿಂದ ಏಪ್ರಿಲ್ 2 ರವರೆಗೆ ನಾಲ್ಕು ನಾಡು ವ್ಯಾಪ್ತಿಯ ವಿವಿಧ ಗ್ರಾಮಗಳ ನಡುವೆ ಟೂರ್ನಿ ನಡೆಯಲಿದೆ. ಪ್ರಥಮ ಪಂದ್ಯಾಟವು ಪುಳಿಕೋಟು ಮತ್ತು ಕೊಳಕೇರಿ ತಂಡಗಳ ನಡುವೆ ಪ್ರಾರಂಭಗೊಂಡಿತು.ಟೂರ್ನಿ ಡೈರೆಕ್ಟರ್ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ಬೊಳ್ಳಚoಡ ನಾಣಯ್ಯ, ಚೈಯಂಡ ಅಪ್ಪಚ್ಚು, ಪಟ್ರಪ೦ಡ ಮಂದಣ್ಣ, ಕೊಳುವಂಡ ಚಂಗಪ್ಪ, ಕುಪ್ಪಂಡ ದಿಲನ್, ಅನ್ನಡಿಯ೦ಡ ಪೊನ್ನಪ್ಪ , ತಾಂತ್ರಿಕ ಸಮಿತಿ ವಿನೋದ್ (ಜೆಸಿಬಿ) ನಿರ್ವಹಿಸಿದರು.ಫಲಿತಾಂಶ

ಶನಿವಾರ ಪುಲಿಕೋಟುಮತ್ತು ಕೊಳಕೇರಿ ತಂಡಗಳ ನಡುವೆ ಪಂದ್ಯದಲ್ಲಿ ಎರಡೂ ತಂಡಗಳು 1-1 ಗೋಲುಗಳಿಸಿ ಡ್ರಾ ಸಾಧಿಸಿದವು. ನಾಪೋಕ್ಲು ಬ್ಲೂ ಮತ್ತು ನೆಲಜಿ ತಂಡಗಳ ನಡುವಿನ ಪಂದ್ಯದಲ್ಲಿ ನಾಪೋಕ್ಲು ಬ್ಲೂ ತಂಡ 2-1ಅಂತರದಿಂದ ಮುನ್ನಡೆ ಸಾಧಿಸಿತು. ನಾಪೋಕ್ಲು ಬಿ ತಂಡವು ಕುಂಜಿಲತಂಡದ ವಿರುದ್ಧ 5-1 ಅಂತರದಿಂದ ಜಯಸಾಧಿಸಿತು. ಬಲ್ಲಮಾವಟಿ ಎ ತಂಡ ನಾಲಡಿತಂಡದ ವಿರುದ್ಧ 6-0 ಅಂತರದ ಭರ್ಜರಿ ಜಯಸಾಧಿಸಿದರೆ ಬಲ್ಲಮಾವಟಿ ಬಿ ತಂಡ ಪೇರೂರು ತಂಡದ ವಿರುದ್ಧ 0-2 ಅಂತರದಿಂದ ಸೋಲನ್ನನುಭವಿಸಿತು.

ಈ ದಿನದ ಕ್ರೀಡಾ ಕೂಟ.

ಭಾನುವಾರ ಬೆಳಿಗ್ಗೆ 9:00ಗೆ-- ದೊಡ್ಡ ಪುಲಿಕೋಟು v/s ಯವಕಪಾಡಿ.

10 ಗಂಟೆಗೆ --ಮರಂದೋಡ v/s ನಾಲಾಡಿ .

11 ಗಂಟೆಗೆ – ಪೇರೂರು v/s ಕುಂಜಿಲ.

12 ಗಂಟೆಗೆ. ಬಲ್ಲಮಾವಟ್ಟಿ ವೈಟ್ v/s ನಾಪೋಕ್ಲು .ಎ.1. ಗಂಟೆಗೆ—ಬೇತು v/s ನಾಪೋಕ್ಲು.ಬ್ಲೂ..