ಅರಸೀಕೆರೆ ನಗರದ ವಿದ್ಯಾನಗರದಲ್ಲಿರುವ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಪ್ರತಿಷ್ಠಾಪನಾ ವರ್ಧಂತಿ ಅಂಗವಾಗಿ ನಾಲ್ಕು ದಿನಗಳ ಧಾರ್ಮಿಕ ಮಹೋತ್ಸವ ಬುಧವಾರದಿಂದ ಆರಂಭಗೊಂಡಿದೆ. ಗುರುವಾರ ಚಾಂದ್ರ ನರಸಿಂಹ ಜಯಂತಿ ಪ್ರಯುಕ್ತ ಧ್ವಜಾರೋಹಣ, ಮಹಾಭಿಷೇಕ, ಹೋಮಗಳು ಹಾಗೂ ಶುಭ ಮುಹೂರ್ತದಲ್ಲಿ ನೂತನ ಉತ್ಸವಮೂರ್ತಿ ಪ್ರಾಣಪ್ರತಿಷ್ಠೆ ನಡೆಯಲಿದೆ. ನಂತರ ಸ್ವಾಮಿಯವರ ಕಲ್ಯಾಣೋತ್ಸವ ವೈಭವದಿಂದ ನೆರವೇರಲಿದೆ.
ಅರಸೀಕೆರೆ: ನಗರದ ವಿದ್ಯಾನಗರದಲ್ಲಿರುವ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಪ್ರತಿಷ್ಠಾಪನಾ ವರ್ಧಂತಿ ಅಂಗವಾಗಿ ನಾಲ್ಕು ದಿನಗಳ ಧಾರ್ಮಿಕ ಮಹೋತ್ಸವ ಬುಧವಾರದಿಂದ ಆರಂಭಗೊಂಡಿದೆ.ಗುರುವಾರ ಚಾಂದ್ರ ನರಸಿಂಹ ಜಯಂತಿ ಪ್ರಯುಕ್ತ ಧ್ವಜಾರೋಹಣ, ಮಹಾಭಿಷೇಕ, ಹೋಮಗಳು ಹಾಗೂ ಶುಭ ಮುಹೂರ್ತದಲ್ಲಿ ನೂತನ ಉತ್ಸವಮೂರ್ತಿ ಪ್ರಾಣಪ್ರತಿಷ್ಠೆ ನಡೆಯಲಿದೆ. ನಂತರ ಸ್ವಾಮಿಯವರ ಕಲ್ಯಾಣೋತ್ಸವ ವೈಭವದಿಂದ ನೆರವೇರಲಿದೆ.ಮೇ 1ರಂದು ಬ್ರಹ್ಮಕಲಶ ಸ್ಥಾಪನೆ, ಹೋಮಗಳು ಹಾಗೂ ಅಭಿಜಿತ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ಸಂಜೆ ವಿವಿಧ ಸೇವೆಗಳು ನಡೆಯಲಿವೆ. ಮೇ 2ರಂದು ಪೂರ್ಣಾಹುತಿ, ಧ್ವಜಾ ಅವರೋಹಣ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮೇ 3ರಂದು ಸಂಪ್ರೋಕ್ಷಣೆ ಹಾಗೂ ಮಹಾಪೂಜೆಯೊಂದಿಗೆ ಮಹೋತ್ಸವ ಸಮಾಪನಗೊಳ್ಳಲಿದೆ.