ಜಮೀನು ವಿವಾದ: ಕಲ್ಲು ತೂರಾಟ

| Published : Jan 07 2025, 12:15 AM IST

ಸಾರಾಂಶ

ಕೊಪ್ಪ: ಪರಸ್ಪರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುಡ್ಡೆತೋಟ ಗ್ರಾಪಂ ಸದಸ್ಯ ಕೀರ್ತಿರಾಜ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂವಿನಗುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೊಪ್ಪ: ಪರಸ್ಪರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುಡ್ಡೆತೋಟ ಗ್ರಾಪಂ ಸದಸ್ಯ ಕೀರ್ತಿರಾಜ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂವಿನಗುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಕೀರ್ತಿರಾಜ್ ಮತ್ತು ಭದ್ರಾ ಎಸ್ಟೇಟ್ ಮಧ್ಯೆ ಜಮೀನು ವಿವಾದ ನಡೆದಿದ್ದು ಹಲವಾರು ವರ್ಷಗಳಿಂದ ಹೈಕೋಟ್‌ ನಲ್ಲಿದ್ದ ವಿವಾದ ಕೀರ್ತಿರಾಜ್ ತಂದೆ ಸುಬ್ಬಣ್ಣ ಪರ ಆಗಿತ್ತು. ಸುಬ್ಬಣ್ಣನ ಮಗ ಕೀರ್ತಿರಾಜ್ ಸೋಮವಾರ ತೋಟಕ್ಕೆ ಹೋದಾಗ ಏಕಾಏಕಿ ಕೀರ್ತಿರಾಜ್ ಮೇಲೆ ಕಲ್ಲು ತೂರಾಟ ನಡೆದಿದೆ. ಅಸ್ಸಾಂನವರು ಎಂದು ಹೇಳಿ ಕೆಲಸಕ್ಕೆ ಬಂದಿರುವ ಅಕ್ರಮ ಬಾಂಗ್ಲಾ ನಿವಾಸಿಗಳಿಂದ ಈ ಕೃತ್ಯ ನಡೆದಿದೆ. ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಕೀರ್ತಿರಾಜ್ ಜಯಪುರ ಆಸ್ಪತ್ರೆಯಲ್ಲಿ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭದ್ರಾ ಎಸ್ಟೇಟ್ ಮತ್ತು ಕೀರ್ತೀರಾಜ್‌ರವರ ಜಮೀನು ಅಕ್ಕಪಕ್ಕದಲ್ಲಿಯೇ ಇದ್ದು ವಲಸೆ ಕಾರ್ಮಿಕರಿಂದ ಏಕಾಏಕಿ ಕಲ್ಲು ತೂರಾಟ ನಡೆಯಲು ಎಸ್ಟೇಟ್‌ನವರ ಕುಮ್ಮಕ್ಕು ಕಾರಣವಿರಬಹುದು. ಕೂಡಲೇ ಸೂಕ್ತ ತನಿಖೆಗೊಳಪಡಿಸಿ ಕ್ರಮವಹಿಸಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ಕ್ರಮ ಕೈಗೊಂಡಿದ್ದಾರೆ.