ಭಾಷೆ ಆತ್ಮ, ಭಾವನಾತ್ಮಕ ಬದುಕಿನ ಉಸಿರು

| Published : Mar 25 2024, 12:50 AM IST

ಸಾರಾಂಶ

ಬಾಗಲಕೋಟೆ: ಲಂಬಾಣಿ ಭಾಷೆಗೆ ಭೌತಿಕ ಸ್ವರೂಪ ಕೊಡುವ ಪ್ರಯತ್ನ ಇದಾಗಿದ್ದು, ಭಾಷೆಯೂ ಆತ್ಮದ ಹಾಗೂ ಭಾವನಾತ್ಮಕ ಬದುಕಿನ ಉಸಿರಾಗಿದೆ. ಭಾಷೆ ಬರೀ ಸಂವಹನಾತ್ಮಕ ಅನುವಾದ ಸೀಮಿತಗೊಳ್ಳದೆ ಸಾಕಷ್ಟು ಸಾಂಸ್ಕೃತಿಕ ಭಾವನಾತ್ಮಕ ಅನುವಾದದ ಕ್ರಿಯಾ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಧಾರವಾಡದ ಇಂಡಿಯನ್‌ ಇನ್ಸೂಟ್ಯೂಟ್ ಆಪ್ ಟೇಕ್ನಾಲೋಜಿ ಡೀನ ಎಸ್.ಆರ್.ಮಹದೇವ ಪ್ರಸನ್ನ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ: ಲಂಬಾಣಿ ಭಾಷೆಗೆ ಬಹುತಿಕ ಸ್ವರೂಪ ಕೋಡುವ ಪ್ರಯತ್ನ ಇದಾಗಿದ್ದು, ಭಾಷೆಯೂ ಆತ್ಮದ ಹಾಗೂ ಭಾವನಾತ್ಮಕ ಬದುಕಿನ ಉಸಿರಾಗಿದೆ. ಭಾಷೆ ಬರೀ ಸಂವನಾತ್ಮಕ ಅನುವಾದ ಸೀಮಿತಗೊಳ್ಳದೆ ಸಾಕಷ್ಟು ಸಾಂಸ್ಕೃತಿಕ ಭಾವನಾತ್ಮಕ ಅನುವಾದದ ಕ್ರಿಯಾ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಧಾರವಾಡದ ಇಂಡಿಯನ್‌ ಇನ್ಸೂಟ್ಯೂಟ್ ಆಪ್ ಟೇಕ್ನಾಲೋಜಿ ಡೀನ ಎಸ್.ಆರ್.ಮಹದೇವ ಪ್ರಸನ್ನ ಹೇಳಿದರು. ನಗರದ ಬಸವೇಶ್ವರ ಇಂಜನೀಯರಿಂಗ್ ಕಾಲೇಜು ಸಭಾಂಗಣದಲ್ಲಿ ಬಿ.ವಿ.ವಿ.ಎಸ್. ಪಾಲಿಟೆಕ್ನಿಕ್ (ಅಟೋನೋಮಸ್) ಬಾಗಲಕೋಟೆ, ಇಂಡಿಯನ್‌ ಇನ್ಸ್ಟೂಟ್ ಆಫ್‌ ಟೆಕ್ನಾಲೋಜಿ ಧಾರವಾಡ ಹಾಗೂ ಇಂಡಿಯನ್ ಇನ್ಸ್ಟೂಟ್ ಆಫ್‌ ಇನ್ಫರ್ಮೇಷನ್‌ ಟೆಕ್ನಾಲೋಜಿ(ಐಐಟಿ) ಧಾರವಾಡ ಇವರ ಸಹಯೋಗದಲ್ಲಿ ನಡೆದ ಲಂಬಾಣಿ ಭಾಷಾ ಸಂರಕ್ಷಣೆ ಮತ್ತು ತಾಂತ್ರಿಕ ಅಭಿವೃದ್ಧಿ ಎರಡು ದಿನದ ರಾಷ್ಟ್ರ್ರೀಯ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸರ್ಕಾರ ಭಾಷಿಣಿ ಅನ್ನುವಂತ ಒಂದು ಯೋಜನೆಯನ್ನು ರೂಪಿಸಿದೆ. ಈ ಯೋಜನೆ ಭಾಷಾಂತರಕ್ಕೆ ಸಹಾಯವಾಗುವಂಥದ್ದು. ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾರತೀಯ ಭಾಷೆಗೆ ಸಾಮಾನ್ಯ ಮನುಷ್ಯನು ಕೂಡ ಭಾಷಾಂತರ ಮಾಡಲಿಕ್ಕೆ ಅನುಕೂಲ ಒಂದು ತಾಂತ್ರಿಕ ಅಭಿವೃದ್ಧಿ ಆಗಿದೆ. ಇದರಲ್ಲಿ ಬಹುತೇಕ ನಮ್ಮ ಐಐಟಿ ಸಂಸ್ಥೆಗಳು ಸೇವೆಯನ್ನು ಸಲ್ಲಿಸುತ್ತಿವೆ ಎಂದರು.ಭಾಷೆ ಸಂರಕ್ಷಣೆಗೆ ತಾಂತ್ರಿಕತೆ ಸಹಾಯಕವಾಗಬೇಕಾಗಿದೆ. ಒಂದು ಭಾಷೆಗೆ ಯಾವುದೇ ರೀತಿ ಯೋಜನೆ ರೂಪಿಸುವಾಗ ದತ್ತಾಂಶಗಳ ಸಂಗ್ರಹ ಕೆಲವು ಪ್ರದೇಶಕ್ಕೆ ಮತ್ತು ಕೆಲವು ವ್ಯಕ್ತಿಗಳಿಗೆ ಸೀಮಿತವಾಗದೆ. ಆ ಭಾಷೆ ಕೇವಲ ಭಿನ್ನ-ವಿಭಿನ್ನ ವ್ಯಕ್ತಿಗಳಿಂದ ಮತ್ತು ಭಿನ್ನ-ಭಿನ್ನ ಪ್ರದೇಶಗಳ ದತ್ತಾಂಶಗಳ ಪರಿಗಣಿಸಬೇಕು. ಹೀಗಾಗಿ ಲಂಬಾಣಿ ಬರೀ ಕರ್ನಾಟಕದಲ್ಲಿ ಅಷ್ಟೇ ಅಲ್ಲ ದೇಶ ವ್ಯಾಪಿ ತನ್ನ ಸಮುದಾಯವನ್ನ ಹಂಚಿಕೊಂಡಿದ್ದು, ಲಂಬಾಣಿ ಭಾಷೆ ಅಧ್ಯಾಯನಿಸಲು ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಹೊಂದಲು ಸಂಸ್ಕೃತ, ಗುಜರಾತಿ, ಮರಾಠಿ, ಹಿಂದಿ ಹೀಗೆ ಹಲವಾರು ಭಾಷೆಯ ಅಧ್ಯಯನದ ಅವಶ್ಯಕತೆ ಇದೆ ಎಂದರು.ಧಾರವಾಡದ ಇಂಡಿಯನ್ ಇನ್ಸ್ಟೂಟ್ ಆಫ್‌ ಇನ್ಫರ್ಮೇಷನ್‌ ಟೆಕ್ನಾಲೋಜಿ(ಐಐಟಿ)ಯ ಎಲೆಕ್ಟ್ರಿಷನ್ ಮತ್ತು ಕಮ್ಯುನಿಕೇಷನ್ ಇಂಜನೀಯರಿಂಗ ವಿಭಾಗದ ಮುಖ್ಯಸ್ಥ ಡಾ.ದೀಪಕ ಕೆ.ಟಿ ಮಾತನಾಡಿ, ತಂತ್ರಜ್ಞಾನ ಬಳಕೆ ಲಂಬಾಣಿ ಭಾಷೆ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕೆ ಅದರದೆಯಾದ ಸಿದ್ಧತೆ ಅಗತ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಮಾತನಾಡಿ, ಮುಂದಿನ ೧೦೦ ವರ್ಷದ ನಂತರದ ಪೀಳೆಗೆಗೆ ಬಂಜಾರ ಸಮುದಾಯ ಕೊಡುಗೆ ತಿಳಿಯಲು, ತಮ್ಮ ಭಾಷಾ ಶ್ರೀಮಂತಿಕೆ, ಸಮೃದ್ಧಿ, ತಮ್ಮ ಪೂರ್ವಜರ ಈ ದೇಶವನ್ನು ನೊಡಿದಂತ ರೀತಿ ತಿಳಿಯಲು ತಾಂತ್ರಿಕವಾಗಿ ಲಂಬಾಣಿ ಭಾಷೆ ಮುನ್ನುಡಿ ಬರಯಬೇಕಿದೆ. ಬಂಜಾರ ಸಮುದಾಯ ಇಟಲಿ, ರೋಮ್ ನಗರಗಳಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಬಂದಿತ್ತು. ಈಡಿ ಜಗತ್ತನ್ನು ಜೋಡಿಸಿದಂತಹ ಸಮುದಾಯವಿದು. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಲಂಬಾಣಿ ಭಾಷಾ ಸಂರಕ್ಷಣೆ ಮತ್ತು ತಾಂತ್ರಿಕ ಅಭಿವೃದ್ಧಿ ನೆರವಾಗಲಿದೆ ಎಂದು ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ ಎಐ ಡಿಜಿಟಲ್ ಕಾಲವಿದು. ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ. ಕಾಯಿಪಲ್ಲೆ ಮಾರುವವರು, ಟೀ, ಜ್ಯೂಸ್‌ ಮಾರುವುವರು ಸೇರಿದಂತೆ ಸಣ್ಣ ಸಣ್ಣ ವ್ಯಾಪಾರಸ್ಥರು ಸಹಿತ ಡಿಜಿಟಲ್ ರೂಪದಲ್ಲಿ ಪೇಮೆಂಟ್ ವ್ಯವಸ್ಥೆ ಹೊಂದಿದ್ದಾರೆ ಎಂದರು.

ಇಂದು ಡಿಜಿಟಲ್ ವಿಭಾಗದಲ್ಲಿ ಅದ್ಭುತ ಕ್ರಾಂತಿ ಭಾರತದಲ್ಲಾಗಿದೆ. ದೇಶದ ಸಾಂಸ್ಕೃತಿಕ ವಿವಿಧತೆಯಲ್ಲಿ ತನ್ನದೆಯಾದ ವೈವಿಧ್ಯತೆಯನ್ನು ಲಂಬಾಣಿ ಸಮುದಾಯ ಹೊಂದಿದೆ. ಬಂಜಾರ ಸಮುದಾಯ ಹಾಗೂ ಲಂಬಾಣಿ ಸಮುದಾಯ ಸಂಸ್ಕೃತ, ಮರಾಠಿ, ಗುಜರಾತಿ, ಹಿಂದಿ ಮಿಶ್ರಣಗೊಳಿಸಿಕೊಂಡು ತನ್ನದೆಯಾದ ಭಾಷೆ ರೂಪಿಸಿಕೊಂಡಿದೆ ಅಂತ ಭಾಷಿಕ ಸಂರಕ್ಷಣೆಗೆ ತಾಂತ್ರಿಕ ಅಭಿವೃದ್ಧಿ ಅವಶ್ಯವಾಗಿದೆ ಎಂದು ಹೇಳಿದರು.

ದೇಶದಲ್ಲಿ ಅನೇಕ ಭಾಷೆಗಳಿಗೆ ಲಿಪಿ ಇಲ್ಲ. ಆದರೂ ಆ ಭಾಷೆಗಳನ್ನು ನಾವು ಮಾತನಾಡುತ್ತೇವೆ. ಕೊಂಕಣಿ, ತುಳು ಸೇರಿದಂತೆ ಅನೇಕ ಭಾಷೆಗಳಿಗೆ ಲಿಪಿ ಲಭ್ಯವಿಲ್ಲ. ಬಹುಷಃ ಆ ಭಾಷೆಗಳ ಲಿಪಿಗಳು ಕಾಲಾಂತರದಲ್ಲಿ ನಶಿಸಿ ಹೋಗಿರಬಹುದು. ಸಂಸ್ಕೃತ ಆಡು ಭಾಷೆಯಾಗಿತ್ತು, ನಂತರ ಹಳಗನ್ನಡ ಮಾತನಾಡುತ್ತಿದ್ದೇವು. ಬಳಿಕ ಮೂಡಿ ಭಾಷೆ ಬಳಸಿದೆವು. ಈಗ ಕನ್ನಡ ಭಾಷೆ ಬಳಸುತ್ತಿದ್ದೇವೆ. ಇಂಥಹ ಭಾಷೆಗಳ ಉಳಿಯುವ ದೃಷ್ಠಿಯಿಂದ ಐಐಟಿ ಮತ್ತು ಐಐಎಸ್‌ಸಿ ಅವರು ಇನ್ನಷ್ಟು ಕಾಳಜಿ ವಹಿಸಿ ಈ ಭಾಷೆಗಳ ಬಗ್ಗೆ ಇರುವ ಲಿಪಿಗಳನ್ನು ಸಂಶೋಧಿಸಿ ಡಿಜಿಟಲ್ ತಂತ್ರಜ್ಞಾನದ ಸಂರಕ್ಷಣೆ ನಿಡುವ ಕಾರ್ಯವಾಗಲಿ ಎಂದರು.

ಕಾರ್ಯಾಗಾರದ ಸಾನ್ನಿಧ್ಯವನ್ನು ಕೆಸರಟ್ಟಿಯ ಶಂಕರಲಿಂಗ ಗುರುಪೀಠ ಪೂಜ್ಯರಾದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ವಹಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಬಂಜಾರ ಅಕಾಡೆಮಿ ಅಧ್ಯಕ್ಷ ಹಿರಾಲಾಲ್ ಚವ್ಹಾಣ, ಡಿ.ಕೆ.ಖಂಡೋಬ, ಬಿ.ವಿ.ವಿ. ಸಂಘದ ಟೆಕ್ನಿಕಲ್ ಇನ್ಸ್ಟೂಟ್‌ನ ಮುಖ್ಯಸ್ಥ ಡಾ.ಆರ್‌.ಎನ್.ಹೇರಕಲ್, ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ ಇದ್ದರು.

ಕಾರ್ಯಾಗಾರದ ಸಂಯೋಜಕ ಸುನೀಲ ರಾಥೋಡ ಪ್ರಸ್ತಾವಿಕ ಮಾತನಾಡಿದರು. ಎಂ.ಎಸ್.ಮಾಟೂರ ವಂದಿಸಿದರು. ಎಲ್.ಜಿ.ವೈದೈ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಜಿಲ್ಲೆಗಳಿಂದ ಲಂಬಾಣಿ ಸಾಹಿತಿಗಳು, ಕಲಾವಿದರು ಆಗಮಿಸಿದ್ದರು.